ಕರ್ನಾಟಕ

karnataka

ETV Bharat / sports

'See You On The Other Side' : ಪಂಜಾಬ್​​ ಕಿಂಗ್ಸ್​​​ನಿಂದ ಬೇರ್ಪಟ್ಟ ಕೆ ಎಲ್ ರಾಹುಲ್​ ಮೊದಲ ಟ್ವೀಟ್​​

ಕೆ ಎಲ್​ ರಾಹುಲ್​ ಅವರನ್ನ ಕೈಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ತಂಡದ ಕೋಚ್​ ಅನಿಲ್ ಕುಂಬ್ಳೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ರಾಹುಲ್​​​​ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲು ಇಷ್ಟಪಟ್ಟಿರುವ ಕಾರಣ ತಂಡದಿಂದ ಕೈಬಿಡಲಾಗಿದೆ ಎಂದಿದ್ದಾರೆ..

KL Rahul first reaction
KL Rahul first reaction

By

Published : Dec 1, 2021, 3:07 PM IST

Updated : Dec 1, 2021, 3:17 PM IST

ಮುಂಬೈ :ಇಂಡಿಯನ್​ ಪ್ರೀಮಿಯರ್ ಲೀಗ್​​ನ 2022ನೇ ಆವೃತ್ತಿಗಾಗಿ ಎಲ್ಲ ಫ್ರಾಂಚೈಸಿಗಳು ತಮ್ಮಿಷ್ಟದ ಕೆಲ ಆಟಗಾರರನ್ನ ರಿಟೈನ್​ ಮಾಡಿಕೊಂಡಿದ್ದಾರೆ. ಈ ಹಿಂದೆ ಅನೇಕ ವರ್ಷಗಳಿಂದ ವಿವಿಧ ತಂಡದ ಭಾಗವಾಗಿದ್ದ ಪ್ಲೇಯರ್ಸ್​​ಗಳಿಗೆ ಕೊಕ್​​ ನೀಡಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿ ಬೇರೆ ತಂಡದ ಪರ ಕಣಕ್ಕಿಳಿಯಲಿದ್ದಾರೆ.

2018ರಿಂದಲೂ ಪಂಜಾಬ್​ ಕಿಂಗ್ಸ್​​​ ತಂಡದ ಭಾಗವಾಗಿದ್ದ ಕನ್ನಡಿಗ ಕೆ ಎಲ್​ ರಾಹುಲ್​​ ಮುಂದಿನ ಆವೃತ್ತಿಯಲ್ಲಿ ಬೇರೆ ಫ್ರಾಂಚೈಸಿ ಪರ ಬ್ಯಾಟ್​ ಬೀಸಲಿದ್ದಾರೆ. ಇದೇ ವಿಚಾರವಾಗಿ ರಾಹುಲ್​​​​ ಟ್ವೀಟ್​​ ಮಾಡಿದ್ದಾರೆ. 'ಪಂಜಾಬ್​ ತಂಡದೊಂದಿಗೆ ಪ್ರಯಾಣ ಉತ್ತಮವಾಗಿತ್ತು. ಪ್ರೀತಿಗೆ ಧನ್ಯವಾದಗಳು.. ಮುಂದಿನ ಆವೃತ್ತಿಯಲ್ಲಿ ಎದುರಾಳಿಯಾಗಿ ನೋಡೋಣ' ಎಂದಿದ್ದಾರೆ.

2020ರಲ್ಲಿ ಪಂಜಾಬ್​ ತಂಡದ ಕ್ಯಾಪ್ಟನ್​​ ಆಗಿದ್ದ ರಾಹುಲ್​​​ ಎರಡು ಆವೃತ್ತಿಯಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಆದರೆ, ಈ ಸಲ ತಾವು ಫ್ರಾಂಚೈಸಿಯಿಂದ ಹೊರ ಹೋಗಲು ನಿರ್ಧಾರ ಮಾಡಿರುವ ಕಾರಣ ಫ್ರಾಂಚೈಸಿ ಕೈಬಿಟ್ಟಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಹೊಸ ತಂಡ ಲಖನೌಗೆ ರಾಹುಲ್​​​ ನಾಯಕನಾಗಲಿದ್ದು, ದೊಡ್ಡ ಮೊತ್ತದ ಹಣ ನೀಡಿ ಅವರನ್ನ ಖರೀದಿ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.

ಕೆ ಎಲ್​ ರಾಹುಲ್​ ಅವರನ್ನ ಕೈಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ತಂಡದ ಕೋಚ್​ ಅನಿಲ್ ಕುಂಬ್ಳೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ರಾಹುಲ್​​​​ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲು ಇಷ್ಟಪಟ್ಟಿರುವ ಕಾರಣ ತಂಡದಿಂದ ಕೈಬಿಡಲಾಗಿದೆ ಎಂದಿದ್ದಾರೆ.

ಇದನ್ನೂ ಓದಿರಿ:ಕನ್ನಡಿಗನಿಗೆ ಜಾಕ್​ಪಾಟ್​​: 1 ಕೋಟಿಯಿಂದ 12 ಕೋಟಿ ರೂ.ಗೆ ರಿಟೈನ್​​ ಆದ​ ಮಯಾಂಕ್​

2018ರಲ್ಲಿ ಪಂಜಾಬ್​ ತಂಡಕ್ಕೆ ಹರಾಜುಗೊಂಡಿದ್ದ ರಾಹುಲ್​ಗೆ ದಾಖಲೆಯ 11 ಕೋಟಿ ರೂ. ನೀಡಲಾಗಿತ್ತು. ಈ ವೇಳೆ 659ರನ್​ಗಳಿಕೆ ಮಾಡಿದ್ದ ರಾಹುಲ್​​ 2019ರಲ್ಲೂ 593ರನ್​​​ ಸಿಡಿಸಿದ್ದರು.

ಇನ್ನು ತಂಡದ ನಾಯಕನಾಗಿ ಆಯ್ಕೆಯಾಗಿದ್ದ ವೇಳೆ ಕ್ರಮವಾಗಿ 2020ರಲ್ಲಿ 670 ಹಾಗೂ 2021ರಲ್ಲಿ 626ರನ್​​ಗಳಿಸಿದ್ದಾರೆ. ಮುಂದಿನ ಆವೃತ್ತಿಗಾಗಿ ಪಂಜಾಬ್​​ ಕನ್ನಡಿಗ ಮಯಾಂಕ್​​ ಅಗರವಾಲ್​ಗೆ 12 ಕೋಟಿ ಹಾಗೂ ಅರ್ಷದೀಪ್​ಗೆ 4ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿದೆ.

Last Updated : Dec 1, 2021, 3:17 PM IST

ABOUT THE AUTHOR

...view details