ಕರ್ನಾಟಕ

karnataka

ETV Bharat / sports

ಐಪಿಎಲ್​ನಲ್ಲಿ ಒಂದೇ ತಂಡದೆದರು ಹೆಚ್ಚು ಶತಕ ಸೇರಿದಂತೆ ರಾಹುಲ್ ನಿರ್ಮಿಸಿದ ದಾಖಲೆಗಳು ಇಲ್ಲಿವೆ - ಕೆಎಲ್ ರಾಹುಲ್ ಶತಕಗಳು

ಇಂಡಿಯನ್​ ಪ್ರೀಮಿಯರ್ ಇತಿಹಾಸದಲ್ಲಿ ಹೆಚ್ಚು ಶತಕ ಸಿಡಿಸಿದ 4ನೇ ಬ್ಯಾಟರ್ ಎಂಬ ದಾಖಲೆಗೆ ರಾಹುಲ್ ಪಾತ್ರರಾಗಿದ್ದಾರೆ. ವಿಂಡೀಸ್ ದೈತ್ಯ ಕ್ರಿಸ್​ ಗೇಲ್ 6 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದರೆ, ಕೊಹ್ಲಿ 5, ಡೇವಿಡ್​ ವಾರ್ನರ್​ ಮತ್ತು ಶೇನ್ ವಾಟ್ಸನ್​ ತಲಾ 4 ಶತಕ ಸಿಡಿಸಿದ್ದಾರೆ.

KL Rahul first batter to hit 3 century against single opponent in IPL history
ಕೆಎಲ್ ರಾಹುಲ್ ದಾಖಲೆ

By

Published : Apr 25, 2022, 5:07 PM IST

ಮುಂಬೈ: ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಆಕರ್ಷಕ ಶತಕ ಸಿಡಿಸುವ ಮೂಲಕ ತಮ್ಮ ತಂಡಕ್ಕೆ 36 ರನ್​ಗಳ ಗೆಲುವು ತಂದುಕೊಟ್ಟರು.

ಈಗಾಗಲೇ ಟೂರ್ನಿಯಲ್ಲಿ ಮುಂಬೈ ವಿರುದ್ಧ ಮೊದಲ ಶತಕ ಸಿಡಿಸಿದ್ದ ರಾಹುಲ್​ 2ನೇ ಮುಖಾಮುಖಿಯಲ್ಲೂ ಶತಕ ಸಾಧನೆ ಮಾಡಿದರು. ಇದು ಐಪಿಎಲ್​ನಲ್ಲಿ ರಾಹುಲ್ ಅವರ 4ನೇ ಶತಕವಾಗಿದೆ. ಒಟ್ಟಾರೆ ಟಿ-20 ಕ್ರಿಕೆಟ್​ನಲ್ಲಿ ಅವರ 6ನೇ ಶತಕವಾಗಿದೆ.

ಭಾರತದ ಪರ ಟಿ- 20 ಕ್ರಿಕೆಟ್​ನಲ್ಲಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ರಾಹುಲ್​ ಪ್ರಸ್ತುತ ಟೀಮ್ ಇಂಡಿಯಾ ನಾಯಕನಾಗಿರುವ ರೋಹಿತ್ ಶರ್ಮಾ ಅವರ ಜೊತೆಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ರಾಹುಲ್ 167 ಟಿ-20 ಇನ್ನಿಂಗ್ಸ್​ಗಳಲ್ಲಿ 6 ಶತಕ ಸಿಡಿಸಿದ್ದಾರೆ. ಇದರಲ್ಲಿ 4 ಐಪಿಎಲ್ ಮತ್ತು 2 ಭಾರತದ ಪರ ಬಂದಿವೆ. ರೋಹಿತ್​ ಶರ್ಮಾ 378 ಇನ್ನಿಂಗ್ಸ್​ಗಳಿಂದ 6 ಶತಕ ಸಿಡಿಸಿದ್ದು, ಭಾರತದ ಪರ 4 ಹಾಗೂ ಐಪಿಎಲ್ ಮತ್ತು ಸೈಯದ್ ಮುಸ್ತಾಕ್ ಅಲಿ ಟಿ-20ಯಲ್ಲಿ ತಲಾ ಒಂದು ಶತಕ ಸಿಡಿಸಿದ್ದಾರೆ. ವಿರಾಟ್​ ಕೊಹ್ಲಿ 334 ಇನ್ನಿಂಗ್ಸ್​ಗಳಿಂದ 5 ಶತಕ ಸಿಡಿಸಿದ್ದು, ಎಲ್ಲಾ ಐಪಿಎಲ್​ನಲ್ಲಿ ಬಂದಿವೆ.

ಐಪಿಎಲ್​ನಲ್ಲಿ 4ನೇ ಶತಕ:ಇಂಡಿಯನ್​ ಪ್ರೀಮಿಯರ್ ಇತಿಹಾಸದಲ್ಲಿ ಹೆಚ್ಚು ಶತಕ ಸಿಡಿಸಿದ 4ನೇ ಬ್ಯಾಟರ್ ಎಂಬ ದಾಖಲೆಗೆ ರಾಹುಲ್ ಪಾತ್ರರಾಗಿದ್ದಾರೆ. ವಿಂಡೀಸ್ ದೈತ್ಯ ಕ್ರಿಸ್​ ಗೇಲ್ 6 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದರೆ, ಕೊಹ್ಲಿ 5, ಡೇವಿಡ್​ ವಾರ್ನರ್​ ಮತ್ತು ಶೇನ್ ವಾಟ್ಸನ್​ ತಲಾ 4 ಶತಕ ಸಿಡಿಸಿದ್ದಾರೆ. ಇದೀಗ ರಾಹುಲ್ ಮತ್ತು ರಾಜಸ್ಥಾನ್​ ರಾಯಲ್ಸ್ ತಂಡದ ಜಾಸ್ ಬಟ್ಲರ್​ ತಲಾ 4 ಶತಕ ಸಿಡಿಸಿ ವಾರ್ನರ್​ ಮತ್ತು ವಾಟ್ಸನ್​ ಜೊತೆಗೆ ಜಂಟಿ 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಮುಂಬೈ ವಿರುದ್ಧ 3 ಶತಕ: ರಾಹುಲ್​ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಸಿಡಿಸುವ ಮೂಲಕ ಐಪಿಎಲ್​ನಲ್ಲಿ ಒಂದೇ ತಂಡದ ವಿರುದ್ಧ 3 ಶತಕ ದಾಖಲಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಈ ಹಿಂದೆ ವಿರಾಟ್ ಕೊಹ್ಲಿ ಗುಜರಾತ್ ಲಯನ್ಸ್ ವಿರುದ್ಧ, ಡೇವಿಡ್ ವಾರ್ನರ್​ ಕೆಕೆಆರ್ ಮತ್ತು ಕ್ರಿಸ್​ ಗೇಲ್ ಪಂಜಾಬ್ ವಿರುದ್ಧ ವಿರುದ್ಧ ತಲಾ 2 ಶತಕ ಸಿಡಿಸಿದ್ದರು.

ಇದನ್ನೂ ಓದಿ:ಸಿಎಸ್​ಕೆ ತಂಡಕ್ಕೆ ಏಪ್ರಿಲ್ 25 ಭಾರಿ ಅದೃಷ್ಟ.. 2010ರಿಂದ ಆಡಿರುವ ಎಲ್ಲ ಪಂದ್ಯಗಳಲ್ಲೂ ಜಯ!

ABOUT THE AUTHOR

...view details