ಕರ್ನಾಟಕ

karnataka

ETV Bharat / sports

11 ವರ್ಷದ ಬಾಲಕನ ಚಿಕಿತ್ಸೆಗೆ 31 ಲಕ್ಷ ರೂ. ದೇಣಿಗೆ ನೀಡಿ ಹೃದಯವಂತಿಕೆ ಮೆರೆದ ಕೆ ಎಲ್ ರಾಹುಲ್​

ಐದನೇ ತರಗತಿಯ ಶಾಲಾ ಬಾಲಕ ಅಪ್ಲ್ಯಾಸ್ಟಿಕ್ ಅನೀಮಿಯಾ ಎಂಬ ಅಪರೂಪದ ರಕ್ತದ ಕಾಯಿಲೆ ಪತ್ತೆಯಾಗಿದ್ದು, ಕಳೆದ ಸೆಪ್ಟೆಂಬರ್‌ನಿಂದ ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ಹೆಮಟಾಲಜಿಸ್ಟ್‌ಗಳ ಆರೈಕೆಯಲ್ಲಿದ್ದಾರೆ.

KL Rahul donates Rs 31 lakh for budding cricketer's treatment
11ವರ್ಷದ ಉದಯೋನ್ಮುಖ ಕ್ರಿಕೆಟಿಗನ ಚಿಕಿತ್ಸೆಗೆ 31 ಲಕ್ಷ ರೂ ನೀಡಿದ ಕನ್ನಡಿಗ ಕೆಎಲ್ ರಾಹುಲ್​

By

Published : Feb 22, 2022, 9:08 PM IST

ಮುಂಬೈ: ಭಾರತ ತಂಡದ ಆರಂಭಿಕ ಬ್ಯಾಟರ್​, ಕನ್ನಡಿಗ 11 ವರ್ಷದ ಉದಯೋನ್ಮುಖ ಕ್ರಿಕೆಟಿಗನ ಜೀವ ಉಳಿಸಲು 31 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಅಪರೂಪದ ಕಾಯಿಲೆಯಿಂದ(blood disorder) ಬಳಲುತ್ತಿದ್ದ 11 ವರ್ಷದ ಬಾಲಕನ ಹೆಸರು ವರದ್ ನಲ್ವಾಡೆ ಎಂಬ ಬಾಲಕನಿಗೆ ತುರ್ತಾಗಿ ಅಸ್ಥಿ ಮಜ್ಜೆಯ ಕಸಿ ಮಾಡಬೇಕಾಗಿತ್ತು. ಇದಕ್ಕಾಗಿ ಇನ್ಸುರೆನ್ಸ್ ಏಜೆಂಟ್ ಆಗಿರುವ ಮಗುವಿನ ತಂದೆ ಸಚಿನ್ ಮತ್ತು ತಾಯಿ ಸ್ವಪ್ನ ಝಾ ಚಿಕಿತ್ಸೆಗಾಗಿ 35 ಲಕ್ಷರೂ ದೇಣಿಗೆ ಸಂಗ್ರಹಿಸಲು ಎನ್​ಜಿಒ ಮೂಲಕ ಅಭಿಯಾನ ಆರಂಭಿಸಿದ್ದರು. ಈ ವಿಷಯ ತಿಳಿದ ಕೆಎಲ್ ರಾಹುಲ್ ತಂಡ ದೇಣಿಗೆ ಸಂಗ್ರಹಿಸುತ್ತಿದ್ದ ಸಂಸ್ಥೆಯ ಜೊತೆಗೆ ಮಾತನಾಡಿ ಆ ಮಗುವಿನ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ.

ಐದನೇ ತರಗತಿಯ ಶಾಲಾ ಬಾಲಕ ಅಪ್ಲ್ಯಾಸ್ಟಿಕ್ ಅನೀಮಿಯಾ ಎಂಬ ಅಪರೂಪದ ರಕ್ತದ ಕಾಯಿಲೆ ಪತ್ತೆಯಾಗಿದ್ದು, ಕಳೆದ ಸೆಪ್ಟೆಂಬರ್‌ನಿಂದ ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ಹೆಮಟಾಲಜಿಸ್ಟ್‌ಗಳ ಆರೈಕೆಯಲ್ಲಿದ್ದಾರೆ.

ವರದ್​ ರಕ್ತದ ಪ್ಲೇಟ್​ಲೆಟ್​ ಮಟ್ಟ ತುಂಬಾ ಕಡಿಮೆಯಿದ್ದು, ಅವರ ಇಮ್ಯೂಮ್ ಸಿಸ್ಟಮ್​( ಪ್ರತಿರಕ್ಷಣಾ ವ್ಯವಸ್ಥೆ) ಸೋಂಕುಗಳಿಗೆ ಹೆಚ್ಚು ಒಳಗಾಗುತ್ತದೆ. ಸಾಮಾನ್ಯ ಜ್ವರ ಬಂದರೂ, ಅದರಿಂದ ಗುಣವಾಗಲು ತಿಂಗಳುಗಟ್ಟಲೇ ಹಿಡಿಯುತ್ತಿತ್ತು. ವರದ್ ಅವರ ಈ ಸ್ಥಿತಿಯಿಂದ ಹೊರಬರಬೇಕಾದರೆ ಅಸ್ಥಿಮಜ್ಜೆ ಕಸಿ( Bone marrow transplant) ಯಿಂದ ಮಾತ್ರ ಸಾಧ್ಯವಾಗಿದೆ.

ಸರ್ಜರಿ ಯಶಸ್ವಿಯಾಗಿದ್ದಕ್ಕೆ ರಾಹುಲ್ ಸಂತಸ:"ವರದ್ ಪರಿಸ್ಥಿತಿ ಬಗ್ಗೆ ನನಗೆ ತಿಳಿದ ನಂತರ, ನನ್ನ ತಂಡ ಗಿವ್ ಇಂಡಿಯಾ ಸಂಸ್ಥೆಯ ಸಂಪರ್ಕಿಸಿತು. ಹಾಗಾಗಿ ನಮ್ಮಿಂದ ಸಾಧ್ಯವಿರುವ ಎಲ್ಲ ರೀತಿಯ ಸಹಾಯ ಮಾಡಲು ಸಾಧ್ಯವಾಯಿತು. ಆತನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿರುವುದು ನನಗೆ ತುಂಬಾ ಸಂತೋಷ ತಂದಿದೆ.

ವರದ್ ಶೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದು, ಅವನ ಕನಸುಗಳನ್ನು ಇಡೇರಿಸಿಕೊಳ್ಳುತ್ತಾನೆ ಎಂದು ನಾನು ಭಾವಿಸುತ್ತೇವೆ. ನನ್ನ ಈ ಕೊಡುಗೆ ಹೆಚ್ಚೆಚ್ಚು ಜನರು ಅಗತ್ಯ ಇರುವವರಿಗೆ ಸಹಾಯ ಮಾಡಲು ಮುಂದೆ ಬರಲು ಪ್ರೇರೇಪಿಸುತ್ತದೆ ಎಂಬ ಭರವಸೆಯಿದೆ" ಎಂದು ರಾಹುಲ್ ಪಿಟಿಐಗೆ​ ತಿಳಿಸಿದ್ದಾರೆ.

ಇದನ್ನೂ ಓದಿ:ನನಗೆ ನೋವಾಗಿದೆ, ಆದ್ರೂ ಪತ್ರಕರ್ತನ ಹೆಸರು ಬಹಿರಂಗಪಡಿಸಿ ಆತನ ಜೀವನ ಹಾಳುಮಾಡಲ್ಲ: ವೃದ್ಧಿಮಾನ್ ಸಹಾ

ABOUT THE AUTHOR

...view details