ಚೆನ್ನೈ, ತಮಿಳುನಾಡು: 200 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಎರಡು ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಇದಾದ ಬಳಿಕ ವಿರಾಟ್ ಕೊಹ್ಲಿ (85 ರನ್) ಹಾಗೂ ಕೆಎಲ್ ರಾಹುಲ್ (ಔಟಾಗದೆ 97) ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡದ ಗೆಲುವಿಗೆ ಕಾರಣರಾದರು. ಆದರೆ ಈ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಗೋಲ್ಡನ್ ಆಟವನ್ನು ಮುಂದುವರೆಸಿದ್ದಾರೆ.
ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಆರಂಭವಾಗುವ ಮುನ್ನ ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಸಮಸ್ಯೆ ತಲೆದೋರಿತ್ತು. ಅದರಲ್ಲೂ ನಾಲ್ಕನೇ ಕ್ರಮಾಂಕದ ಆಟಗಾರ ಯಾರೆಂಬುದು ಯಕ್ಷಪ್ರಶ್ನೆ ಆಗಿತ್ತು. ಸದ್ಯ ಲಯದಲ್ಲಿರುವ ಇಶಾನ್ ಕಿಶನ್, ಶುಭ್ಮನ್ ಗಿಲ್ ಆರಂಭಿಕರಾಗಿ ಯಶಸ್ವಿಯಾಗಿದ್ದರು. ಆದರೆ ಏಷ್ಯಾಕಪ್ ಬಳಿಕ ಈ ಸಮಸ್ಯೆ ಬಗೆ ಹರಿದಿದ್ದು, ನಾಲ್ಕನೇ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದರು.
ಹೌದು, ಕೆಎಲ್ ರಾಹುಲ್ ವಿಶ್ವಕಪ್ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಕಠಿಣ ಪರಿಸ್ಥಿತಿ ಮತ್ತು ಒತ್ತಡದಲ್ಲಿಯೂ ಜವಾಬ್ದಾರಿಯುತ ಆಟದ ಮೂಲಕ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಡುವಿನ ಜೊತೆಯಾಟವೂ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್‌ಗಳ ಜಯವನ್ನು ದಾಖಲಿಸಲು ಸಾಧ್ಯವಾಗಿದ್ದು, ICC ಕ್ರಿಕೆಟ್ ವಿಶ್ವಕಪ್ ಅಭಿಯಾನವನ್ನು ಭಾರತ ಗೆಲುವಿನೊಂದಿಗೆ ಪ್ರಾರಂಭಿಸಿದೆ.
ಟೀಕಾಕಾರರ ಬಾಯಿಗೆ ಆಹಾರವಾಗಿದ್ದ ರಾಹುಲ್: ಏಷ್ಯಾ ಕಪ್ ಸಮಯದಲ್ಲಿ ಗಾಯದಿಂದ ಹಿಂದಿರುಗುವ ಮೊದಲು ಕೆಎಲ್ ರಾಹುಲ್ ಒತ್ತಡದಲ್ಲಿ ಆಡಲು ಸಾಧ್ಯವಾಗದ ಆಟಗಾರ ಎಂದು ಅನೇಕರು ಟೀಕೆ ವ್ಯಕ್ತಪಡಿಸಿದ್ದರು. ಆದರೆ, ರಾಹುಲ್ ಮತ್ತೆ ತಂಡಕ್ಕೆ ಹಿಂದಿರುಗಿದ ನಂತರ, ಪಾಕಿಸ್ತಾನದ ವಿರುದ್ಧದ ಏಷ್ಯಾಕಪ್ನಲ್ಲಿ ಪಂದ್ಯಶ್ರೇಷ್ಠ ಶತಕ, ODI ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಎರಡು ಅರ್ಧಶತಕಗಳು ಮತ್ತು ಈಗ ಅಂತಿಮವಾಗಿ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯರಾಗಿ 97 ರನ್‌ಗಳ ಜವಾಬ್ದಾರಿಯುತ ಆಟವಾಡುವ ಮೂಲಕ ಭರವಸೆ ಮೂಡಿಸಿದ್ದಾರೆ.
14 ಏಕದಿನ ಪಂದ್ಯಗಳಲ್ಲಿ 600ಕ್ಕೂ ಹೆಚ್ಚು ರನ್: ಈ ವರ್ಷ 14 ODIಗಳಲ್ಲಿ ರಾಹುಲ್ 78.50 ರ ಸರಾಸರಿಯಲ್ಲಿ 628 ರನ್ ಗಳಿಸಿದ್ದಾರೆ. ರಾಹುಲ್ 13 ಇನ್ನಿಂಗ್ಸ್‌ಗಳಲ್ಲಿ 111 ಅತ್ಯುತ್ತಮ ರನ್ಗಳೊಂದಿಗೆ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. ಕೆಎಲ್ ರಾಹುಲ್ ಅವರು ಸ್ಪಷ್ಟವಾಗಿ ಮಧ್ಯಮ ಕ್ರಮಾಂಕದ ಪಾತ್ರವನ್ನು ನಿಭಾಯಿಸುವುದನ್ನು ಇಷ್ಟಪಟ್ಟಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ರಾಹುಲ್ 11 ODIಗಳಲ್ಲಿ, 60.12 ರ ಸರಾಸರಿಯಲ್ಲಿ 481 ರನ್‌ಗಳನ್ನು ಗಳಿಸಿದ್ದಾರೆ. ಮಧ್ಯಮ ಕ್ರಮಾಂಕ ರಾಹುಲ್ಗೆ ಪರಿಪೂರ್ಣವಾಗಿದೆ ಎಂದು ತೋರುತ್ತದೆ. ಈ ಸ್ಥಾನದಲ್ಲಿ 21 ODIಗಳಲ್ಲಿ ಅವರು 56.50 ರ ಸರಾಸರಿಯಲ್ಲಿ 904 ರನ್‌ಗಳನ್ನು ಕಲೆ ಹಾಕಿದ್ದಾರೆ. ರಾಹುಲ್ 21 ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು ಎಂಟು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಈ ವರ್ಷ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಒಟ್ಟಾರೆ, 32 ODIಗಳಲ್ಲಿ ಅವರು 57.70 ರ ಸರಾಸರಿಯಲ್ಲಿ 1,385 ರನ್ ಗಳಿಸಿದ್ದಾರೆ. ಅವರು ಮಧ್ಯಮ ಕ್ರಮಾಂಕದಲ್ಲಿ ಮೂರು ಶತಕಗಳು ಮತ್ತು 10 ಅರ್ಧಶತಕಗಳನ್ನು ಗಳಿಸಿದ್ದಾರೆ. ಆರಂಭಿಕರಾಗಿ 23 ಇನ್ನಿಂಗ್ಸ್‌ಗಳಲ್ಲಿ 43.57ರ ಸರಾಸರಿಯಲ್ಲಿ 915 ರನ್‌ಗಳನ್ನು ಗಳಿಸಿರುವ ರಾಹುಲ್ ಮಧ್ಯಮ ಕ್ರಮಾಂಕದ ಫರ್ಮಾಮಸ್ ಉತ್ತಮವಾಗಿದೆ. ಅವರು ಆರಂಭಿಕರಾಗಿ ಮೂರು ಶತಕಗಳು ಮತ್ತು ಆರು ಅರ್ಧಶತಕಗಳನ್ನು ಹೊಂದಿದ್ದಾರೆ.
ಓದಿ:ಗೆಲುವಿನ ದಡ ಸೇರಿಸಿದ ವಿರಾಟ್ - ರಾಹುಲ್ ತಾಳ್ಮೆಯ ಆಟ.. ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್ ಜಯ