ಚೆನ್ನೈ:ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಟಿ-20 ಕ್ರಿಕೆಟ್ನಲ್ಲಿ ಕೊಹ್ಲಿಯನ್ನು ಹಿಂದಿಕ್ಕಿ ವೇಗವಾಗಿ 5000 ರನ್ ಬಾರಿಸಿದ ಭಾರತೀಯ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಬುಧವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಈ ಸಾಧನೆ ಮಾಡಿದ್ದಾರೆ. ರಾಹುಲ್ 143 ಇನ್ನಿಂಗ್ಸ್ಗಳಲ್ಲಿ 5000 ರನ್ ಪೂರೈಸಿದ್ದರೆ, ಟೀಮ್ ಇಂಡಿಯಾ ನಾಯಕ ಕೊಹ್ಲಿ 167 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಒಂದು ರನ್ಗಳಿಸುತ್ತಿದ್ದಂತೆ ರಾಹುಲ್ ಈ ವಿಶೇಷ ದಾಖಲೆಗೆ ಪಾತ್ರರಾದರು. ಒಟ್ಟಾರೆ ರಾಹುಲ್ ಐಪಿಎಲ್ನಲ್ಲಿ 76 ಇನ್ನಿಂಗ್ಸ್ಗಳಲ್ಲಿ 23 ಅರ್ಧಶತಕಗಳ ಸಹಿತ 2808 ರನ್ಗಳಿಸಿದ್ದಾರೆ. ಕೊಹ್ಲಿ 187 ಇನ್ನಿಂಗ್ಸ್ಗಳಿಂದ 5,949 ರನ್ಗಳಿಸಿದ್ದಾರೆ.