ಮುಂಬೈ :ಭಾರತ ತಂಡದಲ್ಲಿ ಹಂಗಾಮಿ ನಾಯಕನಾಗಿರುವ ಕನ್ನಡಿಗ ಕೆ ಎಲ್ ರಾಹುಲ್ಗೆ ನೂತನ ಫ್ರಾಂಚೈಸಿ ಲಖನೌ ಬರೋಬ್ಬರಿ 17 ಕೋಟಿ ರೂ. ನೀಡಿದ್ದಲ್ಲದೆ, ತಂಡದ ನಾಯಕತ್ವವನ್ನು ನೀಡಿದೆ. ರಾಹುಲ್ 17 ಕೋಟಿ ರೂ. ಪಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ದುಬಾರಿ ಆಟಗಾರ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ಜೊತೆಗೆ ಹಂಚಿಕೊಂಡಿದ್ದಾರೆ.
2017ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿರಾಟ್ ಕೊಹ್ಲಿಯನ್ನು 17 ಕೋಟಿ ರೂ.ಗಳಿಗೆ ರಿಟೈನ್ ಮಾಡಿಕೊಂಡಿತ್ತು. ಅವರು ಸತತ 5 ಆವೃತ್ತಿಗಳಲ್ಲಿ 17 ಕೋಟಿ ರೂ. ಪಡೆದಿದ್ದರು.
ಇನ್ನು ಲಖನೌ ತಂಡ ರಾಹುಲ್ ಜೊತೆಗೆ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಮತ್ತು ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ರಿಟೈನ್ ಮಾಡಿಕೊಂಡಿದೆ. ಇವರಿಬ್ಬರು ಕ್ರಮವಾಗಿ 9.2 ಕೋಟಿ ಮತ್ತು 4 ಕೋಟಿ ರೂ. ಪಡೆದುಕೊಂಡಿದ್ದಾರೆ. ಇನ್ನು ಫ್ರಾಂಚೈಸಿ ಬಳಿ ಮೆಗಾ ಹರಾಜಿಗಾಗಿ 59.89 ಕೋಟಿ ರೂ. ಉಳಿದಿದೆ.