ಮುಂಬೈ (ಮಹಾರಾಷ್ಟ್ರ):ಗಾಯದ ಸಮಸ್ಯೆಯಿಂದಾಗಿ ಬ್ಯಾಟರ್ ಕೆ.ಎಲ್.ರಾಹುಲ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ನಾಳೆಯಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ. ವಿಕೆಟ್ ಕೀಪರ್ ರಿಷಬ್ ಪಂತ್ಗೆ ನಾಯಕತ್ವದ ಹೊಣೆ ನೀಡಲಾಗಿದೆ.
ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡದ ನಾಯಕನಾಗಿ ಬಡ್ತಿ ಪಡೆದಿದ್ದ ಕರ್ನಾಟಕದ ಕೆ.ಎಲ್. ರಾಹುಲ್ಗೆ ಅದೃಷ್ಟ ಕೈಕೊಟ್ಟಿದೆ. ಅವರು ನೆಟ್ಸ್ನಲ್ಲಿ ಅಭ್ಯಾಸದ ವೇಳೆ ತೊಡೆಸಂದು ಗಾಯಕ್ಕೀಡಾಗಿದ್ದಾರೆ. ವರ್ಷಗಳ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಪಿನ್ನರ್ ಕುಲದೀಪ್ ಯಾದವ್ ಬ್ಯಾಟಿಂಗ್ ಮಾಡುವ ವೇಳೆ ಬಲಗೈಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಇಬ್ಬರೂ ಆಟಗಾರರು ಸರಣಿಯಿಂದಲೇ ಹೊರಗುಳಿಯಬೇಕಾಗಿದೆ ಎಂದು ಬಿಸಿಸಿಐ ತಿಳಿಸಿದೆ.