ಕರ್ನಾಟಕ

karnataka

ETV Bharat / sports

ಕನ್ನಡಿಗರ ದರ್ಬಾರ್​​: ಕೋಚ್​​ ದ್ರಾವಿಡ್​ ಮಾರ್ಗದರ್ಶನದಲ್ಲಿ ನಾಯಕತ್ವ ಹೊಣೆ ವಹಿಸಿಕೊಂಡ ರಾಹುಲ್ - ರಾಹುಲ್​ ಟೆಸ್ಟ್ ನಾಯಕ

ಟೀಂ ಇಂಡಿಯಾ ಕ್ರಿಕೆಟ್​​ನಲ್ಲಿ ಮತ್ತೊಮ್ಮೆ ಕನ್ನಡಿಗರ ದರ್ಬಾರ್​ ಶುರುವಾಗುತ್ತಿದೆ. ಟೆಸ್ಟ್​ ತಂಡದ ನಾಯಕ ವಿರಾಟ್​​ ಕೊಹ್ಲಿ ಗಾಯಗೊಂಡಿರುವ ಕಾರಣ ನಾಯಕತ್ವ ಜವಾಬ್ದಾರಿ ಇದೀಗ ಕನ್ನಡಿಗ ರಾಹುಲ್​ ಹೆಗಲಿಗೆ ಬಿದ್ದಿದೆ.

Rahul dons captaincy under coach Rahul Dravid
Rahul dons captaincy under coach Rahul Dravid

By

Published : Jan 3, 2022, 4:21 PM IST

Updated : Jan 3, 2022, 10:31 PM IST

ಜೋಹಾನ್ಸ್​ಬರ್ಗ್:ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಂಡಿರುವ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಮುನ್ನಡೆಸುವ ಜವಾಬ್ದಾರಿ ಕನ್ನಡಿಗ ಕೆ.ಎಲ್.ರಾಹುಲ್​ ಹೆಗಲಿಗೆ ಬಿದ್ದಿದೆ. ಈ ಮೂಲಕ ಕನ್ನಡಿಗರು ಹೆಮ್ಮೆ ಪಡುವಂತಹ ಸಾಲಿಗೆ ರಾಹುಲ್​ ಸೇರ್ಪಡೆಗೊಂಡಿದ್ದಾರೆ.

ಬೆನ್ನುನೋವಿನ ಕಾರಣ ವಿರಾಟ್​​ ಕೊಹ್ಲಿ ಜೋಹಾನ್ಸ್​ಬರ್ಗ್​ ಟೆಸ್ಟ್​​ ಕ್ರಿಕೆಟ್​​ನಿಂದ ಹೊರಗುಳಿದಿದ್ದು, ​ರಾಹುಲ್​​ ದ್ರಾವಿಡ್​ ಮಾರ್ಗದರ್ಶನದಲ್ಲಿ ತಂಡ ಮುನ್ನಡೆಸುವ ಜವಾಬ್ದಾರಿಯನ್ನ ರಾಹುಲ್​​ ಪಡೆದುಕೊಂಡಿದ್ದಾರೆ.

ತಂಡದ ಕೋಚ್​ ಸ್ಥಾನದಿಂದ ರವಿಶಾಸ್ತ್ರಿ ಕೆಳಗಿಳಿಯುತ್ತಿದ್ದಂತೆ ಮುಖ್ಯ ಕೋಚ್​ ಆಗಿ ಆಯ್ಕೆಯಾಗಿರುವ ದ್ರಾವಿಡ್​, ಈ ಹಿಂದೆ ಟೀಂ ಇಂಡಿಯಾದಲ್ಲಿದ್ದ ಸಂದರ್ಭದಲ್ಲಿ 20 ಪಂದ್ಯಗಳಲ್ಲಿ ಭಾರತ ಟೆಸ್ಟ್​ ತಂಡ ಮುನ್ನಡೆಸಿದ್ದು, 2006ರಲ್ಲಿ ಜೋಹಾನ್ಸ್​​ಬರ್ಗ್​​ನಲ್ಲಿ ಆಫ್ರಿಕಾ ವಿರುದ್ಧ ಗೆಲುವಿಗೆ ಕಾರಣವಾಗಿದ್ದರು.

ಇದನ್ನೂ ಓದಿ:IND vs SA Test: ತಂಡದಿಂದ ಕೊಹ್ಲಿ ಔಟ್​, ಟಾಸ್​ ಗೆದ್ದ ಕೆಎಲ್​ ರಾಹುಲ್​ ಬ್ಯಾಟಿಂಗ್​ ಆಯ್ಕೆ

ದ್ರಾವಿಡ್​​​ ಜೊತೆ ರಾಹುಲ್ ಹೋಲಿಕೆ

ದ್ರಾವಿಡ್​ ಟೀಂ ಇಂಡಿಯಾ ತಂಡದಲ್ಲಿದ್ದ ಸಂದರ್ಭದಲ್ಲಿ ಅನೇಕ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​, ವಿಕೆಟ್ ಕೀಪಿಂಗ್​ ಹಾಗೂ ನಾಯಕರಾಗಿ ತಂಡ ಮುನ್ನಡೆಸಿದ್ದಾರೆ. ಇದೀಗ ರಾಹುಲ್​ ಕೂಡ ಆರಂಭಿಕ ಆಟಗಾರನಾಗಿ, ಮಧ್ಯಮ ಕ್ರಮಾಂಕ, ವಿಕೆಟ್ ಕೀಪರ್ ಜೊತೆಗೆ ನಾಯಕನಾಗಿ ತಂಡ ಮುನ್ನಡೆಸುತ್ತಿದ್ದು, ಇಬ್ಬರು ಕನ್ನಡಿಗರಲ್ಲಿ ಸಾಮ್ಯತೆ ಕಂಡು ಬಂದಿದೆ.

ಕರ್ನಾಟಕದ ನಾಲ್ಕನೇ ಟೆಸ್ಟ್ ನಾಯಕ

ಭಾರತ ತಂಡ ಮುನ್ನಡೆಸುವ 34ನೇ ಟೆಸ್ಟ್​ ಆಟಗಾರನಾದ ರಾಹುಲ್​​, ಇದೀಗ ದಕ್ಷಿಣ ಆಫ್ರಿಕಾದಲ್ಲಿ ಐತಿಹಾಸಿಕ ಟೆಸ್ಟ್​ ಸರಣಿ ಗೆಲ್ಲುವ ತವಕದಲ್ಲಿದ್ದಾರೆ. ಈಗಾಗಲೇ ಕರ್ನಾಟಕದಿಂದ ಗುಂಡಪ್ಪ ವಿಶ್ವನಾಥ್​, ರಾಹುಲ್​ ದ್ರಾವಿಡ್​ ಮತ್ತು ಅನಿಲ್ ಕುಂಬ್ಳೆ ನಂತರ ಇದೀಗ ರಾಹುಲ್​ಗೆ ಟೆಸ್ಟ್​​ ತಂಡದ ನಾಯಕತ್ವದ ಜವಾಬ್ದಾರಿ ಒಲಿದು ಬಂದಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮುನ್ನಡೆಸುವ ಅವಕಾಶ ಪಡೆದುಕೊಂಡಿರುವ ರಾಹುಲ್​ ಇದೀಗ ಟೆಸ್ಟ್​ ತಂಡದ ನಾಯಕನಾಗೂ ಕಣಕ್ಕಿಳಿದಿದ್ದು, ಹೊಸ ಸವಾಲು ಎದುರಿಸುತ್ತಿದ್ದಾರೆ. ಇದರ ಜೊತೆಗೆ ಉಪನಾಯಕನಾಗಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಆಯ್ಕೆಯಾಗಿದ್ದಾರೆ.

Last Updated : Jan 3, 2022, 10:31 PM IST

ABOUT THE AUTHOR

...view details