ಕರ್ನಾಟಕ

karnataka

ETV Bharat / sports

ತಂಡದ ಆಟಗಾರರ ಕೌಶಲ್ಯದ ಬಗ್ಗೆ ಕೋಚ್​ ದ್ರಾವಿಡ್​ ಬೇಸರ.. ಕೆ.ಎಲ್​. ರಾಹುಲ್​ ನಾಯಕತ್ವದ ಬಗ್ಗೆ ಮೆಚ್ಚುಗೆ - ಕೆಎಲ್​ ರಾಹುಲ್​ ನಾಯಕತ್ವದ ಬಗ್ಗೆ ಮೆಚ್ಚುಗೆ

ಭಾರತ ಏಕದಿನ ತಂಡದ ನಾಯಕ ರೋಹಿತ್​ ಶರ್ಮಾ ಅಲಭ್ಯತೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಮುನ್ನಡೆಸಿದ ಕನ್ನಡಿಗ ಕೆ.ಎಲ್​. ರಾಹುಲ್​ಗೆ ನಾಯಕತ್ವವನ್ನು ಕೋಚ್​ ದ್ರಾವಿಡ್​ ಮೆಚ್ಚಿಕೊಂಡಿದ್ದಾರೆ.

Dravid
ದ್ರಾವಿಡ್

By

Published : Jan 24, 2022, 11:18 AM IST

ಕೇಪ್ ಟೌನ್:ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಕ್ಲೀನ್​ಸ್ವೀಪ್​ ಆಘಾತಕ್ಕೆ ಒಳಗಾಗಿದೆ. ಇದು ತಂಡದ ಮುಖ್ಯ ಕೋಚ್ ರಾಹುಲ್​​ ದ್ರಾವಿಡ್​ರಿಗೆ ಬೇಸರ ತರಿಸಿದೆ. ಸರಣಿ ಸೋಲಿನ ಬಳಿಕ ಮಾತನಾಡಿರುವ ಅವರು, ಕಠಿಣ ಪರಿಸ್ಥಿತಿಯಲ್ಲಿ ಕೌಶಲ್ಯ ಪ್ರದರ್ಶಿಸುವಲ್ಲಿ ತಂಡ ಎಡವಿದೆ. ನಾಯಕನಾಗಿ ಕೆ.ಎಲ್​. ರಾಹುಲ್​ ಮುಂದಿನ ದಿನಗಳಲ್ಲಿ ಸುಧಾರಣೆ ಕಾಣಲಿದ್ದಾರೆ ಎಂದಿದ್ದಾರೆ.

ಕೆರಿಬಿಯನ್ನರ ವಿರುದ್ಧದ 3 ನೇ ಏಕದಿನದಲ್ಲಿ ಭಾರತ ಕೇವಲ 4 ರನ್​ ಅಂತರದಲ್ಲಿ ಸೋತ ಬಳಿಕ ತಂಡದ ಕೌಶಲ್ಯದ ಬಗ್ಗೆ ಅಸಮಾಧಾನಗೊಂಡಿರುವ ಕೋಚ್​ ದ್ರಾವಿಡ್​, ತಂಡದ ಆಟಗಾರರು ಪಂದ್ಯದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸೋತರು. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ನಮಗೆ ಪಾಠವಾಗಬೇಕು. 2023ರ ವಿಶ್ವಕಪ್​ ವೇಳೆಗೆ ತಂಡದ ಸಿದ್ಧತೆಗೆ ಇದು ವೇದಿಕೆಯಾಗಲಿದೆ ಎಂದು ಹೇಳಿದ್ದಾರೆ.

ನಾಯಕ ಕೆ.ಎಲ್​. ರಾಹುಲ್​ರಿಂದ ಉತ್ತಮ ಕಾರ್ಯ

ಭಾರತ ಏಕದಿನ ತಂಡದ ನಾಯಕ ರೋಹಿತ್​ ಶರ್ಮಾ ಅಲಭ್ಯತೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಮುನ್ನಡೆಸಿದ ಕನ್ನಡಿಗ ಕೆ.ಎಲ್​. ರಾಹುಲ್​ಗೆ ನಾಯಕತ್ವವನ್ನು ಕೋಚ್​ ದ್ರಾವಿಡ್​ ಮೆಚ್ಚಿಕೊಂಡಿದ್ದಾರೆ.

ನಾಯಕ ಕೆ.ಎಲ್​. ರಾಹುಲ್​ ಉತ್ತಮವಾಗಿ ಕೆಲಸ ಮಾಡಿದರು. ಅವರು ಈಗಷ್ಟೇ ತಂಡದ ಜವಾಬ್ದಾರಿ ಹೊತ್ತಿದ್ದಾರೆ. ಅಲ್ಪಾವಧಿಯಲ್ಲಿಯೇ ಅವರು ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ರಾಹುಲ್​ ನಾಯಕನಾಗಿ ಸುಧಾರಿಸಲಿದ್ದಾರೆ ಎಂದು ರಾಹುಲ್​ ಕ್ಯಾಪ್ಟನ್ಸಿ ಪರ ಬ್ಯಾಟ್​ ಬೀಸಿದ್ದಾರೆ.

ಇದನ್ನೂ ಓದಿ:ಬ್ಯಾಟಿಂಗ್​ನಲ್ಲಿ ಮಿಂಚಿದ ಬೌಲರ್​ ದೀಪಕ್​ ಚಹರ್​ಗೆ ಕೋಚ್​ ರಾಹುಲ್​ ದ್ರಾವಿಡ್​ ಮೆಚ್ಚುಗೆ

ABOUT THE AUTHOR

...view details