ಕರ್ನಾಟಕ

karnataka

ETV Bharat / sports

ಉಳಿದ IPL​ ಪಂದ್ಯಗಳಲ್ಲಿ ನಾನು ಆಡುವುದು ಡೌಟ್​: ಪ್ಯಾಟ್​ ಕಮ್ಮಿನ್ಸ್​​ - ಕೆಕೆಆರ್ ಬೌಲರ್​ ಕಮ್ಮಿನ್ಸ್​

ಐಪಿಎಲ್​​ನ ಉಳಿದ ಪಂದ್ಯಗಳು ಯುಎಇನಲ್ಲಿ ಆಯೋಜನೆಗೊಂಡಿದ್ದು, ಅದರಲ್ಲಿ ವಿದೇಶಿ ಆಟಗಾರರು ಭಾಗಿಯಾಗುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

KKR pacer pat cummins
KKR pacer pat cummins

By

Published : Aug 3, 2021, 10:37 PM IST

ಮೆಲ್ಬೋರ್ನ್​​(ಆಸ್ಟ್ರೇಲಿಯಾ): 14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ನ ಉಳಿದ ಪಂದ್ಯಗಳು ಸೆಪ್ಟೆಂಬರ್​ 19ರಿಂದ ಆರಂಭಗೊಳ್ಳಲಿದ್ದು, ಮುಂದಿನ ಎರಡು ವಾರಗಳಲ್ಲಿ ಎಲ್ಲ ತಂಡಗಳು ಯುಎಇಗೆ ಪ್ರಯಾಣ ಬೆಳೆಸಲಿವೆ. ಆದರೆ, ಈ ಟೂರ್ನಿಯಲ್ಲಿ ಬಹುತೇಕ ವಿದೇಶಿ ಪ್ಲೇಯರ್ಸ್​​​ ಭಾಗಿಯಾಗುವುದು ಅನುಮಾನ ಎನ್ನಲಾಗುತ್ತಿದೆ.

ಇಂಗ್ಲೆಂಡ್​​, ಆಸ್ಟ್ರೇಲಿಯಾ ಪ್ಲೇಯರ್ಸ್​ ಟೂರ್ನಿಯಲ್ಲಿ ಆಡುವ ಅನುಮಾನ ವ್ಯಕ್ತವಾಗಿದ್ದು, ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​​ ತಂಡದ ವೇಗಿ ಪ್ಯಾಟ್​ ಕಮ್ಮಿನ್ಸ್​​ IPL ಟೂರ್ನಿಯಲ್ಲಿ ಭಾಗಿಯಾಗುವ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ಶುರುವಾಯ್ತು IPL ಹವಾ.. ಮುಂದಿನ ವಾರಾಂತ್ಯಕ್ಕೆ ಸಿಎಸ್​ಕೆ ಯುಎಇಗೆ ಪ್ರಯಾಣ

ಟೂರ್ನಿಯಲ್ಲಿ ಭಾಗಿಯಾಗುವುದಿಲ್ಲ ಎಂದು ಖಚಿತವಾಗಿ ಹೇಳಿಲ್ಲವಾದರೂ, ಯುಎಇಗೆ ತೆರಳಿ ಉಳಿದ ಪಂದ್ಯಗಳಲ್ಲಿ ಭಾಗಿಯಾಗುವುದು ಕಠಿಣ ಎಂದು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ಐಪಿಎಲ್​ ಆಡಲು ವಿದೇಶಕ್ಕೆ ತೆರಳುವುದು ಅನುಮಾನ. ನನ್ನ ಸಂಗಾತಿ ಪ್ರಗ್ನೆಂಟ್​​ ಇದ್ದು, ಐಪಿಎಲ್​​ ಸಂದರ್ಭದಲ್ಲೇ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ. ಅಲ್ಲಿಂದ ವಾಪಸ್ ಬರಲು ಸಾಧ್ಯವಾಗದ ಕಾರಣ ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ ಎಂದಿದ್ದಾರೆ.

ಯುಎಇನಲ್ಲಿ ಉಳಿದ 31 ಪಂದ್ಯಗಳು ನಡೆಯಲಿದ್ದು, ಒಟ್ಟು 27 ದಿನಗಳ ಕಾಲ ಟೂರ್ನಿ ನಡೆಯಲಿದೆ, 13 ಪಂದ್ಯಗಳು ದುಬೈನಲ್ಲಿ, 10 ಶಾರ್ಜಾ ಹಾಗೂ 8 ಪಂದ್ಯ ಅಬುಧಾಬಿಯಲ್ಲಿ ಆಯೋಜನೆಗೊಂಡಿವೆ. ಸೆಪ್ಟೆಂಬರ್​ 19ರಂದು ಮುಂಬೈ-ಸಿಎಸ್​​ಕೆ ಮುಖಾಮುಖಿಯಾಗಲಿವೆ.

ABOUT THE AUTHOR

...view details