ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 15ನೇ ಆವೃತ್ತಿಯಲ್ಲಿ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರಲ್ಲಿ 2 ಪಂದ್ಯಗಳಲ್ಲಿ ತನ್ನ ಮಾಜಿ ಆಟಗಾರರ ಅದ್ಭುತ ಪ್ರದರ್ಶನ ಸೋಲಿಗೆ ಪ್ರಮುಖ ಕಾರಣವಾಗಿದೆ. ಕೆಕೆಆರ್ ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ 3 ವಿಕೆಟ್ ಸೋಲು ಕಂಡಿತ್ತು.
ಆ ಪಂದ್ಯದಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಕೇವಲ 128ಕ್ಕೆ ಸರ್ವಪತನ ಕಂಡಿತ್ತು. ಈ ಪಂದ್ಯದಲ್ಲಿ ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡದಲ್ಲಿ ದಿನೇಶ್ ಕಾರ್ತಿಕ್ 20ನೇ ಓವರ್ನಲ್ಲಿ ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದರು.
2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 44 ರನ್ಗಳ ಹೀನಾಯ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಕಳೆದ 2-3 ವರ್ಷಗಳಿಂದ ತಂಡದಲ್ಲಿದ್ದರೂ ಕಡೆಗಣನೆಗೆ ಒಳಗಾಗಿ ಈ ವರ್ಷ ಡೆಲ್ಲಿ ಸೇರಿದ್ದ ಕುಲದೀಪ್ ಯಾದವ್ 4 ವಿಕೆಟ್ ಪಡೆದು ತಮ್ಮ ಮಾಜಿ ತಂಡಕ್ಕೆ ಆಘಾತಕಾರಿ ಸೋಲುಣಿಸಿದ್ದರು. ಡೆಲ್ಲಿ ನೀಡಿದ್ದ 216ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್ ಕುಲ್ದೀಪ್ ದಾಳಿಗೆ ಸಿಲುಕಿ 171ಕ್ಕೆ ಆಲೌಟ್ ಆಗಿತ್ತು.
ಇನ್ನು ಶುಕ್ರವಾರ ನಡೆದ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಕಳೆದ ಬಾರಿ ಮೆಗಾ ಹರಾಜಿನಲ್ಲಿ ರಿಟೈನ್ ಮಾಡಿಕೊಳ್ಳದೆ ಕೈಬಿಟ್ಟಿದ್ದ ರಾಹುಲ್ ತ್ರಿಪಾಠಿಯ ಅಬ್ಬರಕ್ಕೆ ಮಂಕಾಗಿ ಸೋಲನುಭವಿಸಿತು. ಕೆಕೆಆರ್ ನೀಡಿದ 176 ರನ್ಗಳ ಗುರಿಯನ್ನು ಹೈದರಾದ್ 17.5 ಓವರ್ಗಳಲ್ಲೇ ಚೇಸ್ ಮಾಡಿ ಮುಗಿಸಿತ್ತು. ತ್ರಿಪಾಠಿ ಕೇವಲ 37 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 71 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದನ್ನೂ ಓದಿ:ಇಂಗ್ಲೆಂಡ್ ತಂಡದ ನಾಯಕತ್ವಕ್ಕೆ ಈತನೇ ಸೂಕ್ತ : ಆಲ್ರೌಂಡರ್ ಪರ ವಾನ್, ಹುಸೇನ್ ಬ್ಯಾಟಿಂಗ್