ಕರ್ನಾಟಕ

karnataka

ETV Bharat / sports

ಸುನಿಲ್ ನರೈನ್ ಮಾರಕ ಬೌಲಿಂಗ್ ದಾಳಿ: KKR​ಗೆ ಗೆಲ್ಲಲು 139 ರನ್​ಗಳ ಸಾಧಾರಣ ಗುರಿ ನೀಡಿದ RCB - ಕೆಕೆಆರ್ ಬೌಲಿಂಗ್

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಆರ್​ಸಿಬಿ ಉತ್ತಮ ಆರಂಭ ಪಡೆದರು ಕೆಕೆಆರ್​ ಸ್ಪಿನ್​ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾಗಿ 139 ರನ್​ಗಳ ಸಾಧಾರಣ ಗುರಿ ನೀಡಿದೆ.

Royal Challengers Bangalore vs Kolkata Knight riders
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್

By

Published : Oct 11, 2021, 9:17 PM IST

Updated : Oct 11, 2021, 9:39 PM IST

ಶಾರ್ಜಾ:ಎಲಿಮಿನೇಟರ್​ ಪಂದ್ಯದಲ್ಲಿ ಸುನಿಲ್ ನರೈನ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆರ್​ಸಿಬಿ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 138 ರನ್​ಗಳಿಸಿದೆ.

ಟಾಸ್​ ಗೆದ್ದರೂ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ಬ್ಯಾಟಿಂಗ್ ಮಾಡುವ ಅಚ್ಚರಿಯ ನಿರ್ಧಾರ ತೆಗೆದುಕೊಂಡರು. ಆರಂಭಿಕರಾಗಿ ಕಣಕ್ಕಿಳಿದ ದೇವದತ್​ ಪಡಿಕ್ಕಲ್ ಮತ್ತು ಕೊಹ್ಲಿ ಮೊದಲ ವಿಕೆಟ್​ಗೆ 49 ರನ್​ಗಳ ಉತ್ತಮ ಜೊತೆಯಾಟ ನೀಡಿದರು. ಆದರೆ, ಪಡಿಕ್ಕಲ್ 21 ರನ್​ಗಳಿಸಿ ಔಟಾಗುತ್ತಿದ್ದಂತೆ ಕೆಕೆಆರ್​ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿತು.

ಕಳೆದ ಪಂದ್ಯದ ಹೀರೋ ಶ್ರೀಕಾರ್ ಭರತ್​ 16 ಎಸೆತಗಳನ್ನು ಎದುರಿಸಿ ಒಂದೂ ಬೌಂಡರಿಯಿಲ್ಲದೇ ಕೇವಲ 9 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ 33 ಎಸೆತಗಳಲ್ಲಿ 39 ರನ್​ಗಳಿಸಿದ್ದ ಕೊಹ್ಲಿ ನರೈನ್ ಓವರ್​ನಲ್ಲಿ ಕ್ಲೀನ್ ಬೌಲ್ಡ್ ಆದರು. ಕೊಹ್ಲಿ ಔಟಾಗುತ್ತಿದ್ದಂತೆ ಆರ್​ಸಿಬಿ ಪತನ ಕೂಡ ಆರಂಭವಾಯಿತು.

ನಂತರ ಬಂದ ಎಬಿ ಡಿ ವಿಲಿಯರ್ಸ್ ಕೇವಲ 11 ರನ್​ಗಳಿಸಿ ನರೈನ್​ಗೆ ವಿಕೆಟ್ ಒಪ್ಪಿಸುವ ಮೂಲಕ ಇಂದಿನ ಪಂದ್ಯದಲ್ಲಿಯೂ ವೈಫಲ್ಯ ಅನುಭವಿಸಿದರು. ಆರ್​ಸಿಬಿಯ ಆಪತ್ಬಾಂಧವನಾಗಿದ್ದ ಗ್ಲೇನ್ ಮ್ಯಾಕ್ಸ್​ವೆಲ್(15) ಕೂಡ ನರೈನ್ ಓವರ್​ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್​ ಕಳೆದುಕೊಂಡರು. ಡೇನಿಯಲ್ ಕ್ರಿಶ್ಚಿಯನ್ 9, ಮೊಹಮ್ಮದ್ ಶಹ್ಬಾಜ್ 13, ಹರ್ಷಲ್ ಪಟೇಲ್ 8 ರನ್​ಗಳಿಸಿದರು.

ಸುನಿಲ್ ನರೈನ್ 21 ರನ್​ ನೀಡಿ 4 ವಿಕೆಟ್ ಪಡೆದರೆ, ಲಾಕಿ ಫರ್ಗುಸನ್ 30ಕ್ಕೆ 2 ವಿಕೆಟ್ ಪಡೆದು ಮಿಂಚಿದರು. ವರುಣ್ ಚಕ್ರವರ್ತಿ ಮತ್ತು ಶಕಿಬ್ ವಿಕೆಟ್ ಪಡೆಯದಿದ್ದರೂ ಕ್ರಮವಾಗೊ 20 ಮತ್ತು 24 ರನ್​ ನೀಡಿ ಆರ್​ಸಿಬಿಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು.

Last Updated : Oct 11, 2021, 9:39 PM IST

ABOUT THE AUTHOR

...view details