ಆಕ್ಲೆಂಡ್ :ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಪ್ರಸ್ತುತ ನಡೆಯುತ್ತಿರುವ ಟಿ20(ind vs nz t20 series) ಸರಣಿ ಅರ್ಥಹೀನವಾಗಿದೆ ಎಂದು ಕಿವೀಸ್ ತಂಡದ ವೇಗಿ ಮಿಚೆಲ್ ಮೆಕ್‌ಕ್ಲೆನಾಘನ್(mitchell mcclenaghan) ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡ ಈಗಾಗಲೇ ನ್ಯೂಜಿಲ್ಯಾಂಡ್ ವಿರುದ್ಧ ಸತತ ಎರಡು ಪಂದ್ಯಗಳನ್ನು ಗೆದ್ದು ಇನ್ನೊಂದು ಪಂದ್ಯ ಉಳಿದಿರುವಂತೆ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ.
ಶುಕ್ರವಾರ ಎಬಿಡಿ ವಿಲಿಯರ್ಸ್(Ab ab de villiers) ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಮಾಡಿದ್ದ ಟ್ವೀಟ್ಗೆ ಮೆಕ್‌ಕ್ಲೆನಾಘನ್ "ನಿಮ್ಮದು ಅದ್ಭುತವಾದ ವೃತ್ತಿ ಜೀವನ, 360 ಆಟದ ಮೂಲಕ ಬೌಲರ್ಗಳಿಗೆ ಭಯ ತರುತ್ತಿದ್ದ ನಾಯಕ, ನೈಜ ಚಾಂಪಿಯನ್" ಎಂದು ಕಮೆಂಟ್ ಮಾಡಿದ್ದರು.
ಈ ಟ್ವೀಟ್ಗೆ ಅಭಿಮಾನಿಯೊಬ್ಬ ನ್ಯೂಜಿಲ್ಯಾಂಡ್ ಸರಣಿಯನ್ನು ಕಳೆದುಕೊಂಡಿದೆ ಎಂದು ನಗುವಿನ ಇಮೋಜಿ ಮೂಲಕ ಕಮೆಂಟ್ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಮಿಚ್, "ಇದು ಅವರು ಮಾಡಿದ್ರ?ವಿಶ್ವಕಪ್ ಫೈನಲ್ ಸೋಲಿನ ನಂತರ 72 ಗಂಟೆಗಳ ನಂತರ ಕೇವಲ 5 ದಿನಗಳಲ್ಲಿ 3 ಪಂದ್ಯಗಳ ಈ ಅರ್ಥಹೀನ ಸರಣಿ ಆಡಿದೆ. ಭಾರತ ತಂಡ 10 ದಿನಗಳ ವಿಶ್ರಾಂತಿ ಪಡೆದು ತವರಿನ ಪರಿಸ್ಥಿತಿಯಲ್ಲಿ ಆಡುವ ನೋವು ಅರ್ಥಮಾಡಿಕೊಂಡಿದ್ದೀರಾ?" ಎಂದು ಕಿಡಿ ಕಾರಿದ್ದಾರೆ.
ನ್ಯೂಜಿಲ್ಯಾಂಡ್ ಕಳೆದ 21 ದಿನಗಳಲ್ಲಿ 8 ಪಂದ್ಯಗಳನ್ನಾಡಿದೆ. ವಿಶ್ವಕಪ್ನಲ್ಲಿ ನವೆಂಬರ್ 3 ರಿಂದ 14ರವರೆಗೆ 5 ಪಂದ್ಯಗಳನ್ನಾಡಿದ್ದ ಕಿವೀಸ್, ವಿಶ್ವಕಪ್ ಮುಗಿದ ಮೂರೇ ದಿನದಲ್ಲಿ ಭಾರತಕ್ಕೆ ಆಗಮಿಸಿ 5 ದಿನಗಳಲ್ಲಿ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಂಡಿದೆ. ಇದೇ ಕಾರಣಕ್ಕೆ ಕೇನ್ ವಿಲಿಯಮ್ಸನ್ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ.
ಇದನ್ನು ಓದಿ:2022ರ ಐಪಿಎಲ್ ನಡೆಯುವ ಸ್ಥಳ ಖಚಿತ ಪಡಿಸಿದ ಜಯ್ ಶಾ