ಕರ್ನಾಟಕ

karnataka

ETV Bharat / sports

IND vs WI ODI : ಭಾರತ ತಂಡಕ್ಕೆ ಇಬ್ಬರು ಸ್ಫೋಟಕ ಬ್ಯಾಟರ್​ಗಳ ಸೇರ್ಪಡೆ - ರೋಹಿತ್ ಶರ್ಮಾ ನಾಯಕ

ಪ್ರಸ್ತುತ ತಂಡದಲ್ಲಿರುವ ಆಟಗಾರರಲ್ಲಿ ಆರಂಭಿಕ ಸ್ಥಾನಕ್ಕೆ ಇಶಾನ್​ ಕಿಶನ್​ ನಮ್ಮ ಮುಂದಿರುವ ಏಕೈಕ ಆಯ್ಕೆಯಾಗಿದೆ. ಅವರು ನನ್ನ ಜೊತೆ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್​ ಆರಂಭಿಸುತ್ತಾರೆ. ಮಯಾಂಕ್​ ಅಗರ್ವಾಲ್​ ತಂಡಕ್ಕೆ ಸೇರ್ಪಡೆಯಾಗಿದ್ದರೂ, ಅವರು ಇನ್ನೂ ಐಸೊಲೇಷನ್‌ನಲ್ಲಿದ್ದಾರೆ..

Kishan, Shahrukh added to India's ODI squad
ಶಾರುಖ್ ಖಾನ್, ಇಶಾನ್​ ಕಿಶನ್​

By

Published : Feb 5, 2022, 9:36 PM IST

ಅಹ್ಮದಾಬಾದ್ :ಕೋವಿಡ್-19 ಸೋಂಕಿಗೆ ಒಳಗಾಗಿ ಕೆಲವು ಆಟಗಾರರು ವಿಂಡೀಸ್ ಸರಣಿಯಿಂದ ಹೊರಗುಳಿದಿದ್ದಾರೆ. ಹಾಗಾಗಿ, ಆಯ್ಕೆ ಸಮಿತಿ ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೆ ಭಾರತ ತಂಡ ಆರಂಭಿಕರಾಗಿ ಬ್ಯಾಟರ್ ಇಶಾನ್ ಕಿಶನ್​ ಮತ್ತು ಸ್ಫೋಟಕ ಬ್ಯಾಟರ್​ ಶಾರುಖ್​ ಖಾನ್​ ಅವರನ್ನು ಸೇರ್ಪಡೆಗೊಳಿಸಿದೆ.

ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈಗಾಗಲೇ ಇಶಾನ್​ ಕಿಶನ್​ ಅವರು ತಮ್ಮ ಜೊತೆಗೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆ ಎಂದು ಖಚಿತಪಡಿಸಿದ್ದರು.

ಇದೀಗ ಬಿಸಿಸಿಐ ಆಯ್ಕೆ ಸಮಿತಿ ಇಬ್ಬರು ಯುವ ಆಟಗಾರರು ಭಾರತ ತಂಡಕ್ಕೆ ಆಯ್ಕೆ ಮಾಡಿದ್ದು, ಮೊದಲ ಪಂದ್ಯದ ಆಯ್ಕೆಗೆ ಲಭ್ಯರಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಪ್ರಕಟಣೆಯ ಮೂಲಕ ತಿಳಿಸಲಿದ್ದಾರೆ.

"ಪ್ರಸ್ತುತ ತಂಡದಲ್ಲಿರುವ ಆಟಗಾರರಲ್ಲಿ ಆರಂಭಿಕ ಸ್ಥಾನಕ್ಕೆ ಇಶಾನ್​ ಕಿಶನ್​ ನಮ್ಮ ಮುಂದಿರುವ ಏಕೈಕ ಆಯ್ಕೆಯಾಗಿದೆ. ಅವರು ನನ್ನ ಜೊತೆ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್​ ಆರಂಭಿಸುತ್ತಾರೆ. ಮಯಾಂಕ್​ ಅಗರ್ವಾಲ್​ ತಂಡಕ್ಕೆ ಸೇರ್ಪಡೆಯಾಗಿದ್ದರೂ, ಅವರು ಇನ್ನೂ ಐಸೊಲೇಷನ್‌ನಲ್ಲಿದ್ದಾರೆ.

ಅವರು ತಡವಾಗಿ ತಂಡ ಸೇರಿದ್ದರಿಂದ ನಿಯಮಗಳ ಪ್ರಕಾರ 3 ದಿನಗಳ ಕ್ವಾರಂಟೈನ್​​ನಲ್ಲಿದ್ದಾರೆ. ಅವರು ಇನ್ನೂ ಕ್ವಾರಂಟೈನ್​ ಮುಗಿಸಿಲ್ಲ. ಹಾಗಾಗಿ, ಇಂದು ನಡೆಯುವ ಅಭ್ಯಾಸದಲ್ಲಿ ಗಾಯಗೊಳ್ಳದಿದ್ದರೆ, ಇಶಾನ್​ ಕಿಶನ್ ಖಂಡಿತ​ ಇನ್ನಿಂಗ್ಸ್​ ಆರಂಭಿಸಲಿದ್ದಾರೆ" ಎಂದು ರೋಹಿತ್​ ಹೇಳಿದ್ದಾರೆ.

23 ವರ್ಷದ ಇಶಾನ್​ ಕಿಶನ್​ ಭಾರತದ ಪರ ಈಗಾಗಲೇ 2 ಏಕದಿನ ಪಂದ್ಯಗಳನ್ನಾಡಿದ್ದಾರೆ. ಅವುಗಳಲ್ಲಿ ಅವರು 59 ರನ್​ ಗರಿಷ್ಠ ಸೇರಿದಂತೆ 60 ರನ್​ಗಳಿಸಿದ್ದಾರೆ. ಅಲ್ಲದೆ ಆತ ರಾಷ್ಟ್ರೀಯ ತಂಡದ ಪರ 5 ಟಿ20 ಪಂದ್ಯಗಳನ್ನಾಡಿದ್ದು, 113 ರನ್​ಗಳಿಸಿದ್ದಾರೆ.

ಇನ್ನು 26 ವರ್ಷದ ತಮಿಳುನಾಡಿನ ಶಾರುಖ್​, ಫಿನಿಷರ್​ ಆಗಿ ಗುರುತಿಸಿಕೊಂಡಿದ್ದು, ಬಲಗೈ ಬ್ಯಾಟರ್​ ಆಗಿದ್ದಾರೆ. ಅವರು 33 ಲಿಸ್ಟ್​ ಪಂದ್ಯಗಳಿಂದ 737 ರನ್​ಗಳಿಸಿದ್ದಾರೆ.

ಇದನ್ನು ಓದಿ:ನಿವೃತ್ತಿ ಘೋಷಿಸಿ ಹತಾಶನಾಗಿದ್ದ ನನಗೆ ಮತ್ತೆ ಕ್ರಿಕೆಟ್​ಗೆ ಮರಳಲು ಸಿಎಸ್​ಕೆ-ಧೋನಿ ಕಾರಣ : ಅಂಬಾಟಿ ರಾಯುಡು

ABOUT THE AUTHOR

...view details