ಕರ್ನಾಟಕ

karnataka

ETV Bharat / sports

ಹಾರ್ದಿಕ್​ ಪಾಂಡ್ಯಾ ರೀತಿ ಆಟಗಾರರು ಹಲವು ವರ್ಷಕ್ಕೊಮ್ಮೆ ಬರ್ತಾರೆ: ಕೀರನ್​ ಪೊಲಾರ್ಡ್​ - Pollard praises Pandya

ಭಾರತ ಕ್ರಿಕೆಟ್​ ತಂಡದ ತಾರಾ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾ ಆಟವನ್ನು ಕ್ರಿಕೆಟ್​ ಲೋಕ ಕಣ್ಣರಳಿಸಿ ನೋಡುತ್ತಿದೆ. ಕೆರೆಬಿಯನ್​ ಆಲ್​ರೌಂಡರ್​ ಕೀರನ್​ ಪೊಲಾರ್ಡ್ ಇಂತಹ ಆಟಗಾರರು ಹಲವು ವರ್ಷಕ್ಕೊಮ್ಮೆ ಮಾತ್ರ ಬರುತ್ತಾರೆ ಎಂದು ಬಣ್ಣಿಸಿದ್ದಾರೆ.

kieron-pollard-praise-hardik-pandya
ಕೀರನ್​ ಪೊಲಾರ್ಡ್​

By

Published : Oct 9, 2022, 11:06 AM IST

ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್​ ಮೇಲೆ ಕಣ್ಣಿಟ್ಟಿರುವ ಭಾರತ ಅಗತ್ಯ ಯೋಜನೆ ರೂಪಿಸಿದೆ. ಬಲಿಷ್ಠ ತಂಡದ ಸಮೇತ ಆಸೀಸ್​ ಪ್ರವಾಸ ಕೈಗೊಂಡಿದ್ದು, ಆಟಗಾರರು ಇತಿಹಾಸ ಮರುಕಳಿಸುವಂತೆ ಮಾಡುವ ಉತ್ಸಾಹದಲ್ಲಿದ್ದಾರೆ.

ಟೀಂ ಇಂಡಿಯಾ ಆಲ್​ರೌಂಡರ್​ ರವೀಂದ್ರ ಜಡೇಜಾ ಗಾಯಗೊಂಡಿದ್ದು, ವಿಶ್ವಕಪ್​ನಲ್ಲಿ ಸ್ಥಾನ ಪಡೆದಿಲ್ಲ. ಈಗ ತಾರಾ ಆಲ್​ರೌಂಡರ್​ ಆಗಿ ತಂಡದಲ್ಲಿ ಹಾರ್ದಿಕ್​ ಪಾಂಡ್ಯಾ ಒಬ್ಬರೇ ಉಳಿದುಕೊಂಡಿದ್ದಾರೆ. ಹಾರ್ದಿಕ್​ ಪಾಂಡ್ಯಾರ ಇತ್ತೀಚೆಗಿನ ಪ್ರದರ್ಶನ ಕ್ರಿಕೆಟ್​ ಪಂಡಿತರನ್ನು ಅಚ್ಚರಿಗೀಡು ಮಾಡಿದೆ. ವೆಸ್ಟ್​ ಇಂಡೀಸ್​ ದೈತ್ಯ ಕೀರನ್​ ಪೊಲಾರ್ಡ್​ ಕೂಡ ಹಾರ್ದಿಕ್​ ಆಟಕ್ಕೆ ಮನಸೋತಿದ್ದು, "ಇಂತಹ ಆಟಗಾರರು ಹಲವು ವರ್ಷಕ್ಕೆ ಒಬ್ಬರು ಮಾತ್ರ ಕಾಣಸಿಗುತ್ತಾರೆ" ಎಂದು ಬಣ್ಣಸಿದ್ದಾರೆ.

ಅದ್ಭುತ ಕ್ರಿಕೆಟಿಗ, ಭಾರತ ತಂಡದ ಆಧಾರ:ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಕೀರನ್ ಪೊಲಾರ್ಡ್ ಅವರು ಹಾರ್ದಿಕ್ ಪಾಂಡ್ಯಾರನ್ನು ಅದ್ಭುತ ಕ್ರಿಕೆಟಿಗ ಎಂದು ಹೊಗಳಿದ್ದಾರೆ. ಭಾರತ ತಂಡದ ಅಮೂಲ್ಯ ಆಟಗಾರನಲ್ಲದೇ, ವಿಶ್ವಕಪ್​ನಲ್ಲಿ ತಂಡಕ್ಕೆ ಆಧಾರವಾಗಲಿದ್ದಾರೆ ಎಂದು ಹೇಳಿದ್ದಾರೆ.

“ಹಾರ್ದಿಕ್ ಆಟ ಮುನ್ನುಗ್ಗುತ್ತಿದೆ. ಐಪಿಎಲ್​ಗೂ ಮೊದಲು ಪಾಂಡ್ಯಾ ಸಂಕಷ್ಟದಲ್ಲಿದ್ದರು. ಗಾಯದಿಂದ ಭರ್ಜರಿ ವಾಪಸ್​ ಮಾಡಿರುವ ಅವರು ಗುಜರಾತ್​ ತಂಡವನ್ನು ಚಾಂಪಿಯನ್​ ಮಾಡಿದರು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚು ಹರಿಸುತ್ತಿದ್ದು, ಅವರ ಕಠಿಣ ಪರಿಶ್ರಮ ಕಾಣುತ್ತಿದೆ ಎಂದು ಪೊಲಾರ್ಡ್ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.

“ಅವರೊಬ್ಬ ಅದ್ಭುತ ಕ್ರಿಕೆಟಿಗ. ಅವರಂತಹ ಕ್ರಿಕೆಟಿಗರು ಎಷ್ಟೋ ವರ್ಷಕ್ಕೊಮ್ಮೆ ಬರುತ್ತಾರೆ. ವಿಶ್ವಕಪ್​ನಲ್ಲಿ ಅವರಿಗೆ ಯಶಸ್ಸು ಸಿಗಲೆಂದು ಶುಭ ಹಾರೈಸುತ್ತೇನೆ" ಎಂದು ಕೆರೆಬಿಯನ್​ ಆಲ್‌ರೌಂಡರ್ ಹೇಳಿದರು.

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡ ಅಕ್ಟೋಬರ್ 17 ಮತ್ತು 19 ರಂದು ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯವಾಡಲಿದೆ. ಬಳಿಕ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ವಿಶ್ವಕಪ್​ ಅಭಿಯಾನ ಆರಂಭಿಸಲಿದೆ.

ಓದಿ: ಬಿಸಿಸಿಐಗೆ ಹೊಸ ಸಾರಥಿ ನಿರೀಕ್ಷೆ: ಮುಂಚೂಣಿಯಲ್ಲಿ ಕನ್ನಡಿಗ ರೋಜರ್ ಬಿನ್ನಿ ಹೆಸರು

ABOUT THE AUTHOR

...view details