ಹೈದರಾಬಾದ್:ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿರುವ ವೆಸ್ಟ್ ಇಂಡೀಸ್ ದೈತ್ಯ ಆಲ್ರೌಂಡರ್ ಕೀರನ್ ಪೊಲಾರ್ಡ್ ಸದ್ಯ ವಿವಿಧ ಲೀಗ್ಗಳಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಈ ದಿಗ್ಗಜ ಆಟಗಾರ ಸದ್ಯ ಚುಟುಕು ಕ್ರಿಕೆಟ್ನಲ್ಲಿ ಐತಿಹಾಸಿಕ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಈ ಸಾಧನೆ ಮಾಡಿರುವ ವಿಶ್ವದ ಏಕೈಕ ಕ್ರಿಕೆಟರ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.
2006ರಲ್ಲಿ ಟಿ-20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಕೀರನ್ ಪೊಲಾರ್ಡ್, ಕಳೆದ ಕೆಲ ತಿಂಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಣೆ ಮಾಡಿದ್ದರು. ಸದ್ಯ ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡದ ವಿರುದ್ಧ ಆಡುವ ಮೂಲಕ ಹೊಸ ರೆಕಾರ್ಡ್ ಸೃಷ್ಟಿಸಿದ್ದಾರೆ. ಲಂಡನ್ ಸ್ಪಿರಿಟ್ ತಂಡದ ಪರ ಕಣಕ್ಕಿಳಿದು, 600 ಟಿ20 ಪಂದ್ಯ ಆಡಿರುವ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ. ಪಂದ್ಯದಲ್ಲಿ ತಾವು ಎದುರಿಸಿದ 11 ಎಸೆತಗಳಲ್ಲಿ ಒಂದು ಬೌಂಡರಿ, ನಾಲ್ಕು ಸಿಕ್ಸರ್ ಸಮೇತವಾಗಿ ಅಜೇಯ 34ರನ್ಗಳಿಸಿದ ಪೊಲಾರ್ಡ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.
ವಿಶ್ ಮಾಡಿದ ಬುಮ್ರಾ: ಐತಿಹಾಸಿಕ ಮೈಲುಗಲ್ಲು ತಲುಪಿರುವ ಪೊಲಾರ್ಡ್ಗೆ ಟ್ವಿಟರ್ನಲ್ಲಿ ವಿಶ್ ಮಾಡಿರುವ ಬುಮ್ರಾ, 600 ಪಂದ್ಯಗಳು, ಐತಿಹಾಸಿಕ ಮೂಲಿಗಲ್ಲು. ಅಭಿನಂದನೆಗಳು ಪೊಲ್ಲಿ ಎಂದು ಹೇಳಿದ್ದಾರೆ.