ಕರ್ನಾಟಕ

karnataka

ETV Bharat / sports

'ಹಿರಿಯ ಆಟಗಾರರು ಐಪಿಎಲ್‌ನಲ್ಲಿ ಆಡಬಹುದು, ಆದರೆ..': ಏಕದಿನ ವಿಶ್ವಕಪ್‌, ಐಪಿಎಲ್‌ ಬಗ್ಗೆ ದ್ರಾವಿಡ್ ಮಾತು - ETV Bharat Kannada News

ಭಾರತ ಕ್ರಿಕೆಟ್​ ತಂಡದ ಆಟಗಾರರನ್ನು ಗಾಯದ ಸಮಸ್ಯೆಗಳು ಕಾಡದೇ ಇದ್ದರೆ ಅವರು ಐಪಿಎಲ್‌ನಲ್ಲಿ​ ಆಡಬಹುದು ಎಂದು ರಾಹುಲ್ ದ್ರಾವಿಡ್‌ ಹೇಳಿದರು.

Rahul Dravid is the head coach of Indian men's cricket team
ಭಾರತ ಪುರುಷರ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್

By

Published : Jan 24, 2023, 11:51 AM IST

ಇಂದೋರ್ (ಮಧ್ಯ ಪ್ರದೇಶ) :ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವಏಕದಿನ ವಿಶ್ವಕಪ್ ಕ್ರಿಕೆಟ್ ಮುಂಬರುವ ಅಕ್ಟೋಬರ್-ನವೆಂಬರ್‌ ತಿಂಗಳಲ್ಲಿ ನಡೆಯಲಿದೆ. ಪ್ರತಿಷ್ಟಿತ ಟೂರ್ನಿಗಾಗಿ ಭಾರತ ತಂಡವನ್ನು ಆಯ್ಕೆ ಮಾಡುವ ಸವಾಲು ಬಿಸಿಸಿಐ ಮುಂದಿದೆ. ಇದರ ನಡುವೆ ತಂಡದಲ್ಲಿ ಈಗಾಗಲೇ ಹಲವು ಪ್ರಮುಖ ಆಟಗಾರರು ಗಾಯದ ಸಮಸ್ಯೆಗೆ ತುತ್ತಾಗಿ, ಹೊರಗುಳಿದಿದ್ಧಾರೆ.

ಮುಖ್ಯಕೋಚ್​ ರಾಹುಲ್​ ದ್ರಾವಿಡ್ ಈ ಕುರಿತು ಪ್ರತಿಕ್ರಿಯಿಸಿ,​​ "ಏಕದಿನ ವಿಶ್ವಕಪ್​ಗಾಗಿ ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ತಂಡದ ಪ್ರಮುಖ ಹಿರಿಯ ಆಟಗಾರರಾದ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಅವರು ಆಟದ ಸಮಯದಲ್ಲಿ ಯಾವುದೇ ಒತ್ತಡಕ್ಕೆ ಸಿಲುಕದೆ ಮತ್ತು ಗಾಯದ ಸಮಸ್ಯೆಗಳಿಗೆ ಒಳಗಾಗದೇ ಇದ್ದರೆ ಮುಂಬರುವ ಐಪಿಎಲ್‌ನಲ್ಲಿ ಆಡುತ್ತಾರೆ" ಎಂದರು. ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಆಟವಾಡಲು ಟಿ20 ಕೌಶಲ್ಯಗಳು ಬೇಕು ಎಂದು ಅವರು ಹೇಳಿದರು.

ಬಿಸಿಸಿಐನ ಹೊಸ ನಿಯಮದ ಪ್ರಕಾರ, ಈ ವರ್ಷದ ಐಪಿಎಲ್‌ನಲ್ಲಿ ಆಡುವ ಪ್ರಮುಖ ಆಟಗಾರರ ಒತ್ತಡವನ್ನು ಎನ್‌ಸಿಎ ಮತ್ತು ಸಂಬಂಧಪಟ್ಟ ಫ್ರಾಂಚೈಸಿಗಳು ನಿಭಾಯಿಸಲಿವೆ. ಈ ಮೊದಲು 2023ರ ಏಕದಿನ ವಿಶ್ವಕಪ್​ ಪಂದ್ಯಾವಳಿಯನ್ನು ಫೆಬ್ರವರಿ 9 ರಿಂದ ಮಾರ್ಚ್ 26 ವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಟೂರ್ನಿಯನ್ನು ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಅಕ್ಟೋಬರ್‌ನಲ್ಲಿ ಟೂರ್ನಿ ಆರಂಭವಾದರೆ ಫೈನಲ್ ನವೆಂಬರ್ 26ರಂದು ನಡೆಯಲಿದೆ.

ಆಟಗಾರರು ಫಿಟ್ ಆಗಿದ್ದರೆ ಐಪಿಎಲ್: ಐಪಿಎಲ್ ನಡೆಯುವ ಸಂದರ್ಭದಲ್ಲಿ ಎನ್‌ಸಿಎ ಮತ್ತು ನಮ್ಮ ವೈದ್ಯಕೀಯ ಸಿಬ್ಬಂದಿ ಫ್ರಾಂಚೈಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲಿದ್ದಾರೆ. ಆಟಗಾರರಿಗೆ ಯಾವುದೇ ಸಮಸ್ಯೆಗಳು ಅಥವಾ ಗಾಯಗಳಿದ್ದರೆ ನಾವು ಅವರೊಂದಿಗೆ ಸಂಪರ್ಕ ಸಾಧಿಸುತ್ತೇವೆ. ಬಹಳ ಮುಖ್ಯವಾಗಿ, ಆಟಗಾರರು ಫಿಟ್ ಆಗಿದ್ದರೆ ಮಾತ್ರ ನಾವು ಅವರನ್ನು ಐಪಿಎಲ್‌ನಲ್ಲಿ ಆಡಲು ಬಿಡುತ್ತೇವೆ. ಏಕೆಂದರೆ, ಐಪಿಎಲ್​ ಪ್ರಮುಖ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಇದೇ ವೇಳೆ 2024ರ ಟಿ-20 ವಿಶ್ವಕಪ್‌ಗೂ ಹೊಸ ತಂಡವನ್ನು ಕಟ್ಟುವ ತಯಾರಿಯಲ್ಲಿದ್ದೇವೆ. ಐಪಿಎಲ್​ ಬಿಸಿಸಿಐಗೆ ಬಹಳ ದೊಡ್ಡ ಪಂದ್ಯಾವಳಿಯೂ ಹೌದು. ನಿರ್ದಿಷ್ಟ ಟಿ-20 ಮಾದರಿಯ ಪಂದ್ಯಾವಳಿಯಲ್ಲಿ ನಮ್ಮ ಆಟಗಾರರ ಪ್ರದರ್ಶನಕ್ಕೆ ಇದು ಸಹಾಯ ಮಾಡುತ್ತದೆ ಎಂದರು.

ಇದನ್ನೂ ಓದಿ:ಭಾರತದ ಅದೃಷ್ಟದ ಮೈದಾನದಲ್ಲಿ ಕಿವೀಸ್​ಗೆ ಅಗ್ನಿಪರೀಕ್ಷೆ.. ಇಂದೋರ್​ನಲ್ಲಿ ಸೋಲೇ ಕಾಣದ ಟೀಂ ಇಂಡಿಯಾ

ABOUT THE AUTHOR

...view details