ಸೇಂಟ್ ಜಾನ್ಸ್: ಫೆಬ್ರವರಿ 6ರಿಂದ ನಡೆಯಲಿರುವ ಭಾರತ ವಿರುದ್ಧದ ಏಕದಿನ ಸರಣಿಗೆ ವೇಗದ ಬೌಲರ್ ಕೆಮರ್ ರೋಚ್ ವಿಂಡೀಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು 2019ರ ಏಕದಿನ ವಿಶ್ವಕಪ್ ನಂತರ ಇದೇ ಮೊದಲ ಬಾರಿಗೆ ಏಕದಿನ ತಂಡದಲ್ಲಿ ಆಡಲಿದ್ದಾರೆ.
ಗುರುವಾರ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಕೆಮರ್ ರೋಚ್ ಜೊತೆಗೆ ಅನುಭವಿ ಎಂಕ್ರೂಮಾ ಬೋನರ್, ಆರಂಭಿಕ ಬ್ಯಾಟರ್ ಬ್ರೆಂಡನ್ ಕಿಂಗ್ ಅವರನ್ನು ಏಕದಿನ ತಂಡಕ್ಕೆ ಮರು ಕರೆ ನೀಡಲಾಗಿದೆ. ಟೆಸ್ಟ್ ತಂಡದ ಖಾಯಂ ಸದಸ್ಯನಾಗಿರುವ ರೋಚ್ 92 ಏಕದಿನ ಪಂದ್ಯಗಳನ್ನಾಡಿದ್ದು 124 ವಿಕೆಟ್ ಪಡೆದಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೆಬ್ರವರಿ 6,9 ಮತ್ತು 11 ರಂದು ಏಕದಿನ ಪಂದ್ಯಳು ನಡೆಯಲಿವೆ. ಈ ಸರಣಿ ಮುಗಿಯುತ್ತಿದ್ದಂತೆ ಫೆಬ್ರವರಿ 16, 18 ಮತ್ತು 20ರಂದು ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಟಿ20 ಸರಣಿ ನಡೆಯಲಿದೆ. ಶುಕ್ರವಾರ ಈ ಸರಣಿಗೆ ತಂಡವನ್ನು ಘೋಷಿಸುವ ನಿರೀಕ್ಷೆಯಿದೆ.
ಭಾರತ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ಏಕದಿನ ತಂಡ
ಕೀರಾನ್ ಪೊಲಾರ್ಡ್ (ನಾಯಕ), ಫ್ಯಾಬಿಯನ್ ಅಲೆನ್, ಎಂಕ್ರೂಮಾ ಬೊನರ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಂಡನ್ ಕಿಂಗ್, ನಿಕೋಲಸ್ ಪೂರನ್, ಕೆಮರ್ ರೋಚ್, ರೊಮಾರಿಯೊ ಶೆಫರ್ಡ್, ಒಡೆನ್ ಸ್ಮಿತ್, ಹೇಡನ್ ವಾಲ್ಶ್
ಬುಧವಾರ ಬಿಸಿಸಿಐ ಕೂಡ ವಿಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ತಲಾ 18 ಸದಸ್ಯರ ತಂಡವನ್ನು ಪ್ರಕಟಿಸಿದೆ. ರವಿ ಬಿಷ್ಣೋಯ್ ಸೇರಿದಂತೆ ಕೆಲವು ಯುವ ಆಟಗಾರರು ಭಾರತ ತಂಡದಲ್ಲಿ ಮೊದಲ ಬಾರಿ ಅವಕಾಶ ಪಡೆದಿದ್ದಾರೆ.
ಭಾರತ ಏಕದಿನ ತಂಡ:ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಬ್ ಪಂತ್ (ವಿ.ಕೀ), ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಯುಜುವೇಂದ್ರ ಚಹಲ್, ಕುಲದೀಪ್ ಯಾದವ್ , ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್
ಇದನ್ನೂ ಓದಿ:ಕ್ರಿಕೆಟಿಗ ರವಿ ಬಿಷ್ಣೋಯ್ಗೆ ಡಬಲ್ ಧಮಾಕಾ.. ಭಾರತ ರಾಷ್ಟ್ರೀಯ ತಂಡದಲ್ಲಿ ಸ್ಥಾನ, ಐಪಿಎಲ್ನಲ್ಲಿ 4 ಕೋಟಿಗೆ ಖರೀದಿ