ಪಲ್ಲೆಕೆಲೆ: ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ ದ್ವಿಶತಕ ಮತ್ತು ಧನಂಜಯ ಡಿ ಸಿಲ್ವಾ ಅವರ ಆಕರ್ಷಕ ಶತಕದ ನೆರವಿನಿಂದ ಶ್ರೀಲಂಕಾ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 4ನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 512 ರನ್ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ನಜ್ಮುಲ್ ಹುಸೇನ್ ಶಾಂಟೊ(163) ಮತ್ತು ನಾಯಕ ಮೊಮಿನುಲ್ ಹಕ್(127) ಶತಕ ಹಾಗೂ ತಮೀಮ್(90) ರಹೀಮ್(68) ಮತ್ತು ಲಿಟನ್ ದಾಸ್(50) ಅರ್ಧಶತಕಗಳ ನೆರವಿನಿಂದ 7 ವಿಕೆಟ್ ಕಳೆದುಕೊಂಡು 541 ರನ್ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿಕೊಂಡಿತು.
ಮೂರನೇ ದಿನ ಬ್ಯಾಟಿಂಗ್ ಆರಂಭಿಸಿದ್ದ ಅತಿಥೇಯ ಶ್ರೀಲಂಕಾ 73 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 229 ರನ್ಗಳಿಸಿತ್ತು. ಕರುಣರತ್ನೆ 85 ರನ್ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದರು.