ಪಲ್ಲೆಕೆಲೆ: ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನ ಆತಿಥೇಯ ಶ್ರೀಲಂಕಾ ಪ್ರಾಬಲ್ಯ ಸಾಧಿಸಿದೆ. ಆರಂಭಿಕರಾದ ನಾಯಕ ಕರುಣರತ್ನೆ ಮತ್ತು ಲಹಿರು ತಿರಿಮನ್ನೆ ಶತಕ ಸಿಡಿಸಿ ಬಾಂಗ್ಲಾ ಬೌಲರ್ಗಳ ವಿರುದ್ಧ ಮೆರೆದಾಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡಕ್ಕೆ ನಾಯಕ ಕರುಣರತ್ನೆ ಮತ್ತು ಲಹಿರು ತಿರಿಮನ್ನೆ ಮೊದಲ ವಿಕೆಟ್ಗೆ 209 ರನ್ಗಳ ಬೃಹತ್ ಜೊತೆಯಾಟ ನೀಡಿದರು. ಕಳೆದ ಪಂದ್ಯದಲ್ಲಿ ಇದೇ ಮೈದಾನದಲ್ಲಿ 244 ರನ್ ಸಿಡಿಸಿದ್ದ ಕರುಣರತ್ನೆ 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 19 ಎಸೆತಗಳಲ್ಲಿ 15 ಬೌಂಡರಿ ಸಹಿತ 118 ರನ್ಗಳಿಸಿದರು. ತಮ್ಮ 72ನೇ ಟೆಸ್ಟ್ನಲ್ಲಿ 12ನೇ ಶತಕ ಸಿಡಿಸಿದ ಅವರು ಶೊರಿಫೂಲ್ ಇಸ್ಲಾಮ್ ಬೌಲಿಂಗ್ನಲ್ಲಿ ಲಿಟನ್ ದಾಸ್ಗೆ ಕ್ಯಾಚ್ ನೀಡಿ ಔಟಾದರು.