ಕರ್ನಾಟಕ

karnataka

ETV Bharat / sports

ಕರುಣ್​ ನಾಯರ್ ಒಂದೆರಡು ಪಂದ್ಯದಲ್ಲಿ ವಿಫಲರಾಗಿದ್ದಕ್ಕೆ ಸೈಡ್​ಲೈನ್ ಮಾಡಲಾಯ್ತು: ಸಂಜಯ್ ಬಂಗಾರ್​ - ಕರುಣ್ ನಾಯರ್ ತ್ರಿಶತಕ

ಕರುಣ್ ನಾಯರ್ ಅವರ ಒಟ್ಟಾರೆ ಪ್ರಥಮ ದರ್ಜೆ ದಾಖಲೆಗಳ ಆಧಾರದ ಮೇಲೆ ಟೆಸ್ಟ್ ತಂಡದಲ್ಲಿ ಮತ್ತೊಮ್ಮೆ ಸ್ಥಾನ ಪಡೆಯಲು ಅವಕಾಶವಿದೆ ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ. ​

By

Published : Jul 4, 2021, 9:24 PM IST

ನವದೆಹಲಿ: ಕೇವಲ ಒಂದೆರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಕ್ಕೆ ಕರುಣ್​ ನಾಯರ್​ ಅವರನ್ನು ಡ್ರಾಪ್ ಮಾಡುವ ಮೂಲಕ ಮ್ಯಾನೇಜ್​ಮೆಂಟ್​ ಕರ್ನಾಟಕ ಬ್ಯಾಟ್ಸ್​ಮನ್ ವಿಚಾರದಲ್ಲಿ ತುಂಬಾ ಒರಟು ನಿರ್ಧಾರ ತೆಗೆದುಕೊಂಡಿತು ಎಂದು ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್​ ಸಂಜಯ್ ಬಂಗಾರ್​ ಅಭಿಪ್ರಾಯಪಟ್ಟಿದ್ದಾರೆ.

ಕರುಣ್ ನಾಯರ್

2016ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಕನ್ನಡಿಗ ಕರುಣ್ ನಾಯರ್ ಚೆನ್ನೈನಲ್ಲಿ ನಡೆದಿದ್ದ ಇಂಗ್ಲೆಂಡ್​ ವಿರುದ್ದದ ಪಂದ್ಯದಲ್ಲಿ ಆಕರ್ಷಕ ತ್ರಿಶತಕ ಬಾರಿಸಿದ್ದರು. ಸೆಹ್ವಾಗ್​ ಹೊರತುಪಡಿಸಿದರೆ ಭಾರತದ ಪರ ತ್ರಿಶತಕ ಬಾರಿಸಿದ ಏಕೈಕ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದರು. ಜೊತೆಗೆ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಮೊದಲ ಶತಕವನ್ನೇ ತ್ರಿಶತಕವನ್ನಾಗಿ ಪರಿವರ್ತಿಸಿದ ವಿಶ್ವದ 3ನೇ ಬ್ಯಾಟ್ಸ್​ಮನ್ ಆಗಿದ್ದರು.

ಕರುಣ್ ನಾಯರ್ ಅವರ ಒಟ್ಟಾರೆ ಪ್ರಥಮ ದರ್ಜೆ ದಾಖಲೆಗಳ ಆಧಾರದ ಮೇಲೆ ಟೆಸ್ಟ್ ತಂಡದಲ್ಲಿ ಮತ್ತೊಮ್ಮೆ ಸ್ಥಾನ ಪಡೆಯಲು ಅವಕಾಶವಿದೆ ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ. ​

ಭಾರತದ ಪರ ಮಧ್ಯಮ ಕ್ರಮಾಂಕದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿರುವ ಆಟಗಾರರಲ್ಲಿ ಕರುಣ್ ನಾಯರ್ ಮೊದಲಿಗರಾಗಿದ್ದಾರೆ. ಅವರ ಟೆಸ್ಟ್​ ಪಂದ್ಯದ ದಾಖಲೆಮತ್ತು ಅವರ ಪ್ರಥಮ ದರ್ಜೆ ಅಂಕಿ ಸಂಖ್ಯೆಗಳು ಕೂಡ ಅವರ ಕಮ್​ಬ್ಯಾಕ್​ಗೆ ಪೂರಕವಾಗಿವೆ. ಅವರು ಕೇವಲ ಒಂದೆರಡು ಪಂದ್ಯಗಳಲ್ಲಿ ಮಾತ್ರ ಸರಾಸರಿ ಪ್ರದರ್ಶನವನ್ನು ತೋರಿದ್ದಕ್ಕೆ ಮ್ಯಾನೇಜ್​ಮೆಂಟ್​ನಿಂದ ಸೈಡ್​ಲೈನ್​ಗೆ ಒಳಗಾದರು ಎಂದು Cricket.comಗೆ ತಿಳಿಸಿದ್ದಾರೆ.

ಕರುಣ್ ನಾಯರ್​ ಭಾರತದ ಪರ 6 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. 7 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್ ಮಾಡಿದ್ದು ತ್ರಿಶತಕ ಸಹಿತ 374 ರನ್​ಗಳಿಸಿದ್ದಾರೆ.

ಇದನ್ನೂ ಓದಿ: ಗಿಲ್ ಬದಲಿಗೆ ಬೇರೊಬ್ಬರಿಗೆ ಅವಕಾಶ ನೀಡಿದ್ರೆ ರಾಹುಲ್-ಮಯಾಂಕ್​ಗೆ ಅವಮಾನ ಮಾಡಿದಂತೆ: ಕಪಿಲ್ ಎಚ್ಚರಿಕೆ

ABOUT THE AUTHOR

...view details