ಕರ್ನಾಟಕ

karnataka

ETV Bharat / sports

ದಿನೇಶ್ ಕಾರ್ತಿಕ್​ ನನಗೆ ಮತ್ತೆ ಕ್ರಿಕೆಟ್​ ಆಡಬೇಕೆಂಬ ಭಾವನೆ ಮೂಡಿಸುತ್ತಿದ್ದಾರೆ: ಎಬಿ ಡಿ - ಆರ್​ಸಿಬಿ ದಿನೇಶ್ ಕಾರ್ತಿಕ್

ಈಗಾಗಲೇ ಡಿಕೆ ಆಟಕ್ಕೆ ಮನಸೋತಿರುವ ಸಾಕಷ್ಟು ಲೆಜೆಂಡರಿ ಕ್ರಿಕೆಟಿಗರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಆ ಸಾಲಿಗೆ ಕಳೆದ ದಶಕದಲ್ಲಿ ಆರ್​ಸಿಬಿ ಆಪತ್ಬಾಂಧವ ಎನಿಸಿಕೊಂಡಿದ್ದ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಕೂಡ ಸೇರಿಕೊಂಡಿದ್ದು, ಸ್ಥಿರ ಪ್ರದರ್ಶನ ತೋರುತ್ತಿರುವ ಕಾರ್ತಿಕ್ ಆಟ ನನ್ನಲ್ಲಿ ಮತ್ತೆ ಕ್ರಿಕೆಟ್​ ಆಡಬೇಕೆಂಬ ಭಾವನೆ ಹುಟ್ಟುಹಾಕುತ್ತಿದೆ ಎಂದು ತಿಳಿಸಿದ್ದಾರೆ.

AB de Villiers on Dinesh Karthik
ಎಬಿಡಿ ವಿಲಿಯರ್ಸ್ ದಿನೇಶ್ ಕಾರ್ತಿಕ್

By

Published : Apr 19, 2022, 6:16 PM IST

ಹೈದರಾಬಾದ್(ಡೆಸ್ಕ್): ದಿನೇಶ್​ ಕಾರ್ತಿಕ್ ಈ ಬಾರಿ ಐಪಿಎಲ್​ನ ಆಶ್ಚರ್ಯಕರ ಪ್ಯಾಕೇಜ್. ಕ್ರಿಕೆಟ್ ಅಭಿಮಾನಿಗಳು, ತಜ್ಞರಿಗೆ ತಮ್ಮ ಪ್ರದರ್ಶನದ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆಡಿರುವ ಎಲ್ಲಾ ಪಂದ್ಯಗಳಲ್ಲೂ ಆರ್​ಸಿಬಿಗೆ ಅತ್ಯುತ್ತಮ ಕೊಡುಗೆ ನೀಡಿರುವ ಅವರು 2 ಬಾರಿ ಮ್ಯಾಚ್​ ವಿನ್ನರ್ ಆಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಈಗಾಗಲೇ ಡಿಕೆ ಆಟಕ್ಕೆ ಮನಸೋತಿರುವ ಸಾಕಷ್ಟು ಲೆಜೆಂಡರಿ ಕ್ರಿಕೆಟಿಗರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ಆ ಸಾಲಿಗೆ ಕಳೆದ ದಶಕದಲ್ಲಿ ಆರ್​ಸಿಬಿ ಆಪತ್ಬಾಂಧವ ಎನಿಸಿಕೊಂಡಿದ್ದ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಕೂಡ ಸೇರಿಕೊಂಡಿದ್ದು, ಸ್ಥಿರ ಪ್ರದರ್ಶನ ತೋರುತ್ತಿರುವ ಕಾರ್ತಿಕ್ ಆಟ ನನ್ನಲ್ಲಿ ಮತ್ತೆ ಕ್ರಿಕೆಟ್​ ಆಡಬೇಕೆಂಬ ಭಾವನೆ ಹುಟ್ಟುಹಾಕುತ್ತಿದೆ ಎಂದು ತಿಳಿಸಿದ್ದಾರೆ.

ಈ ಆವೃತ್ತಿಗೂ ಮುನ್ನ ಎಬಿ ಡಿ ವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್​ಗೂ ನಿವೃತ್ತಿ ಘೋಷಿಸಿದ್ದರು. ಹಾಗಾಗಿ ಆರ್​ಸಿಬಿಯಲ್ಲಿ ಅವರ ಸ್ಥಾನವನ್ನು ತುಂಬಬಲ್ಲ ಆಟಗಾರ ಯಾರು ಎಂಬುದು ಪ್ರತಿಯೊಬ್ಬರ ತಲೆಯಲ್ಲಿದ್ದ ಅನುಮಾನವಾಗಿತ್ತು. ಎಬಿಡಿ ಸ್ಥಾನವನ್ನು ತುಂಬುವುದು ತುಂಬಾ ಕಷ್ಟವಾದರೂ ಈ ಆವೃತ್ತಿಯಲ್ಲಿ ದಿನೇಶ್ ಕಾರ್ತಿಕ್​ ಫ್ರಾಂಚೈಸಿಯಲ್ಲಿ ದಕ್ಷಿಣ ಆಫ್ರಿಕಾ ಲೆಜೆಂಡ್​ ಕೊರತೆ ಕಾಣದಂತೆ ಮಾಡಿದ್ದಾರೆ. ತಂಡ ಯಾವುದೇ ಸ್ಥಿತಿಯಲ್ಲಿದ್ದರೂ ಕ್ರೀಸ್​ಗೆ ಆಗಮಿಸಿ ಇಡೀ ಪಂದ್ಯದ ಸ್ಥಿತಿಯನ್ನೇ ಬದಲಾಯಿಸಿ ಗೆಲುವಿಗೆ ಕಾರಣರಾಗುತ್ತಿದ್ದಾರೆ.

"ಡಿಕೆ ಪ್ರಸ್ತುತ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಈಗಾಗಲೆ ಆರ್​ಸಿಬಿಗೆ 2-3 ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಅವರು ತಮ್ಮ ವೃತ್ತಿ ಜೀವನದ ಅತ್ಯುತ್ತಮ ಲಯದಲ್ಲಿರುವಂತೆ ಭಾಸವಾಗುತ್ತಿದೆ. ಅದು ಅವರಿಗೆ ಹೇಗೆ ಸಾಧ್ಯವಾಗಿದೆಯೋ ಗೊತ್ತಿಲ್ಲ, ಏಕೆಂದರೆ ಅವರು ಸಾಕಷ್ಟು ಕ್ರಿಕೆಟ್​ ಆಡಿರಲಿಲ್ಲ. ಆದರೆ ಆತ ಅದ್ಭುತ ಲಯದಲ್ಲಿದ್ದಾರೆ ಮತ್ತು ವಿಕೆಟ್​ ಸುತ್ತಲೂ 360 ಡಿಗ್ರಿಯಲ್ಲಿ ಆಡುತ್ತಿದ್ದಾರೆ. ಅವರು ನಾನು ಮತ್ತೆ ಹಿಂತಿರುಗಿ ಕ್ರಿಕೆಟ್​ ಆಡಬೇಕೆಂಬ ಹಾಗೂ ಆತ ಬ್ಯಾಟಿಂಗ್ ಮಾಡುವುದನ್ನು ಕಣ್ಣಾರೆ ನೋಡಬೇಕೆಂಬ ಭಾವನೆಯನ್ನು ನನ್ನಲ್ಲಿ ಮಾಡಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಒತ್ತಡದಲ್ಲಿ ಆಡುತ್ತಿದ್ದಾರೆ ಮತ್ತು ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಇದೇ ಫಾರ್ಮ್​ ಮುಂದುವರಿಸಿದರೆ ಆರ್​ಸಿಬಿ ಬಹಳ ದೂರ ಸಾಗುವ ಅವಕಾಶವಿದೆ" ಎಂದು ಎಬಿ ಡಿ ವಿಲಿಯರ್ಸ್ ವಿಯು ಸ್ಪೋರ್ಟ್ಸ್​ಗೆ​ ತಿಳಿಸಿದ್ದಾರೆ.

ಇದನ್ನೂ ಓದಿ:ವಯಸ್ಸು ನೋಡದೆ ಟಿ20 ವಿಶ್ವಕಪ್​ನಲ್ಲಿ ಅವರಿಗೆ ಚಾನ್ಸ್‌ ಕೊಡಿ, ಉತ್ತಮ ಫಿನಿಶರ್ ಆಗ್ತಾರೆ: ಗವಾಸ್ಕರ್

ABOUT THE AUTHOR

...view details