ಕರ್ನಾಟಕ

karnataka

ETV Bharat / sports

Syed Mushtaq Ali Trophy: ಮನೀಶ್​, ಕರುಣ್ ಅಬ್ಬರ.. ಮುಂಬೈ ವಿರುದ್ಧ ಕರ್ನಾಟಕ ಜಯಭೇರಿ - ಮನೀಶ್ ಪಾಂಡೆ ಅರ್ಧಶತಕ

ಕರ್ನಾಟಕ ತಂಡ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 166ರನ್​ಗಳಿಸಿತ್ತು. 167 ರನ್​ಗಳ ಗುರಿ ಬೆನ್ನಟ್ಟಿದ ಮುಂಬೈ ತಂಡ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್​ಗಳಿಸಲಷ್ಟೇ ಶಕ್ತವಾಗಿ 9 ರನ್​ಗಳ ಸೋಲು ಕಂಡಿತು.

Karnataka beat Mumbai by 9 runs
ಮುಂಬೈ ವಿರುದ್ಧ ಕರ್ನಾಟಕ ಜಯಭೇರಿ

By

Published : Nov 4, 2021, 5:57 PM IST

ಗುವಾಹಟಿ: ಮನೀಶ್ ಪಾಂಡೆ ಮತ್ತು ಕರುಣ್ ನಾಯರ್ ಅವರ ಅಬ್ಬರದ ಅರ್ಧಶತಕ ಮತ್ತು ಬೌಲರ್​ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್​​ನಲ್ಲಿ ಮುಂಬೈ ವಿರುದ್ಧ 9 ರನ್​ಗಳ ಜಯ ಸಾಧಿಸಿ ಶುಭಾರಂಭ ಮಾಡಿದೆ.

ಇಂದಿನಿಂದ ಆರಂಭವಾಗಿರುವ ಟೂರ್ನಿಯಲ್ಲಿ ಟಾಸ್​ ಸೋತು ಬ್ಯಾಟಿಂಗ್ ನಡೆಸಿದ ಕರ್ನಾಟಕ ತಂಡ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 166 ರನ್​ಗಳಿಸಿತ್ತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಮಯಾಂಕ್ ಅಗರ್​ವಾಲ್(0) ಮತ್ತು ದೇವದತ್​ ಪಡಿಕ್ಕಲ್​(5) ವಿಫಲರಾದರು. ಆದರೆ ನಾಯಕ ಮನೀಶ್ ಪಾಂಡೆ 64 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 84 ರನ್​ಗಳಿಸಿದರೆ, ಇವರಿಗೆ ಸಾಥ್ ನೀಡಿದ ಕರುಣ್ ನಾಯರ್​ 53 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ಗಳ ನೆರವಿನಿಂದ 72 ರನ್​ಗಳಿಸಿದ್ದಲ್ಲದೆ, 3ನೇ ವಿಕೆಟ್ ಜೊತೆಯಾಟದಲ್ಲಿ149 ರನ್​ ಸೇರಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ತಂಡಕ್ಕೆ ನೆರವಾದರು.

ಮುಂಬೈ ಪರ ಮೋಹಿತ್​ ಅವಸ್ತಿ 32 ರನ್​ ನೀಡಿ 2 ವಿಕೆಟ್ ಪಡೆದರೆ, ತುಷಾರ್ ದೇಶಪಾಂಡೆ 38 ರನ್​ ನೀಡಿ 2 ವಿಕೆಟ್ ಪಡೆದರು.

ರಹಾನೆ ಏಕಾಂಗಿ ಹೋರಾಟ ವ್ಯರ್ಥ

167 ರನ್​ಗಳ ಗುರಿ ಬೆನ್ನಟ್ಟಿದ ಮುಂಬೈ ತಂಡ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್​ಗಳಿಸಲಷ್ಟೇ ಶಕ್ತವಾಗಿ 9 ರನ್​ಗಳ ಸೋಲು ಕಂಡಿತು. ಸ್ಫೋಟಕ ಆಟಕ್ಕೆ ಹೆಸರಾದ ಪೃಥ್ವಿ ಶಾ (4) ಜೈಸ್ವಾಲ್​(13) ಬೇಗನೆ ವಿಕೆಟ್​ ಒಪ್ಪಿಸಿದರು. ಆದರೆ 3ನೇ ವಿಕೆಟ್​ಗೆ ಸಿದ್ಧಾರ್ಥ್​ ಲಾಡ್​ ಜೊತೆ ಸೇರಿದ ರಹಾನೆ 81 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು.

ಆದರೆ 54 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್​ಗಳ ನೆರವಿನಿಂದ 75 ರನ್​ಗಳಿಸಿದ್ದ ರಹಾನೆ ಔಟಾಗುತ್ತಿದ್ದಂತೆ ಕರ್ನಾಟಕ ತಂಡ ಮೇಲುಗೈ ಸಾಧಿಸಿತು. ರಹಾನೆ ನಂತರ ಬಂದ ಯಾವುದೇ ಬ್ಯಾಟರ್​ಗಳನ್ನು ದೊಡ್ಡ ಮೊತ್ತ ಗಳಿಸಿದಂತೆ ಕರ್ನಾಟಕ ಬೌಲರ್​ಗಳು ಯಶಸ್ವಿಯಾದರು.

ಸಿದ್ಧಾರ್ಥ್ ಲಾಡ್​ 25 ಎಸೆತಗಳಲ್ಲಿ 32, ದುಬೆ 3, ಅಮನ್​ ಖಾನ್​ 1 ರನ್​ಗಳಿಸಿ ವಿಕೆಟ್​ ಒಪ್ಪಿಸಿದರೆ, ಆದಿತ್ಯ ತಾರೆ ಅಜೇಯ 12, ಅಥರ್ವ ಅಂಕೋಲೆಕರ್​ ಅಕೇಯ 13 ರನ್​ಗಳಿಸಿದರಾದರೂ ಗೆಲುವಿನ ಗಡಿ ದಾಟಿಸಲು ಸಾಧ್ಯವಾಗಲಿಲ್ಲ.

ಇದನ್ನು ಓದಿ:ಬಿಗ್​ಬ್ಯಾಷ್​ ಲೀಗ್​ನಲ್ಲಿ ಆಡಲಿದ್ದಾರೆ ಭಾರತಕ್ಕೆ ಅಂಡರ್​ 19 ವಿಶ್ವಕಪ್​ ಗೆದ್ದುಕೊಟ್ಟಿದ್ದ ನಾಯಕ!

ABOUT THE AUTHOR

...view details