ಚೆನ್ನೈ: ಪಾಂಡಿಚೇರಿ ವಿರುದ್ಧ ನಡೆಯುತ್ತಿರುವ ಲೀಗ್ ಹಂತದ ಮೂರನೇ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡದ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಶತಕ ಸಿಡಿಸಿ ಅಬ್ಬರಿಸಿದರು. ಇದು ಅವರ ಮೊದಲ ಪ್ರಥಮ ದರ್ಜೆ ಶತಕವಾಗಿದೆ. ಈ ಹಿಂದೆ 99 ರನ್ಗಳಿಸಿದ್ದು ಅವರ ಗರಿಷ್ಠ ಮೊತ್ತವಾಗಿತ್ತು.
ಕರ್ನಾಟಕ ತಂಡ 39 ರನ್ಗಳಿಗೆ ಸಮರ್ಥ್(11) ಮತ್ತು ಕರುಣ್ ನಾಯರ್(6) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಈ ಸಂದರ್ಭದಲ್ಲಿ ಅದ್ಭುತ ಲಯದಲ್ಲಿರುವ ಸಿದ್ಧಾರ್ಥ್ ಕೆ.ವಿ ಜೊತೆಗೂಡಿದ ಪಡಿಕ್ಕಲ್ 3ನೇ ವಿಕೆಟ್ಗೆ 150 ಕ್ಕೂ ಹೆಚ್ಚು ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಸುಸ್ಥಿತಿಗೆ ತಂದಿದ್ದಾರೆ.