ಕರ್ನಾಟಕ

karnataka

ETV Bharat / sports

ಕನ್ನಡಿಗನಿಗೆ ಒಲಿದ ಅದೃಷ್ಟ: ಶ್ರೇಯಸ್ ಅಯ್ಯರ್ ಬದಲಿಗೆ ಡೆಲ್ಲಿ ತಂಡ ಸೇರಿದ ಅನಿರುದ್ಧ ಜೋಶಿ - ಅಕ್ಷರ್ ಪಟೇಲ್ ಬದಲಿ ಶಾಮ್ಸ್​ ಮುಲಾನಿ

ಅನಿರುದ್ಧ ಜೋಶಿ ಕರ್ನಾಟಕ ಪರ 17 ಲಿಸ್ಟ್​ ಪಂದ್ಯಗಳನ್ನಾಡಿದ್ದು 211 ರನ್​ಗಳಿಸಿದ್ದಾರೆ. 20 ಟಿ20 ಇನ್ನಿಂಗ್ಸ್​ಗಳಿಂದ 320 ರನ್​ಗಳಿಸಿದ್ದಾರೆ. ಈ ಹಿಂದೆ ಆರ್​ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದರಾದರೂ ಆಡುವ ಅವಕಾಶ ಸಿಕ್ಕಿರಲಿಲ್ಲ.

ಶ್ರೇಯಸ್ ಅಯ್ಯರ್ ಬದಲಿಗೆ ಡೆಲ್ಲಿ ತಂಡ ಸೇರಿದ ಅನಿವೃಧ್ ಜೋಶಿ
ಶ್ರೇಯಸ್ ಅಯ್ಯರ್ ಬದಲಿಗೆ ಡೆಲ್ಲಿ ತಂಡ ಸೇರಿದ ಅನಿವೃಧ್ ಜೋಶಿ

By

Published : Apr 15, 2021, 7:56 PM IST

Updated : Apr 15, 2021, 8:28 PM IST

ಮುಂಬೈ:ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ಶ್ರೇಯಸ್​ ಅಯ್ಯರ್ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ, ಕರ್ನಾಟಕದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಅನಿರುದ್ಧ ಜೋಶಿಯನ್ನುತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಗಾಯಗೊಂಡಿದ್ದ ಶ್ರೇಯಸ್​ ಅಯ್ಯರ್ 3ರಿಂದ 4 ತಿಂಗಳು ವಿಶ್ರಾಂತಿಯಲ್ಲಿರಬೇಕಾಗಿದೆ. ಆದ್ದರಿಂದ ರಿಷಭ್ ಪಂತ್​ ಅವರನ್ನು 2021ರ ಆವೃತ್ತಿಗೆ ನಾಯಕನನ್ನಾಗಿ ನೇಮಿಸಲಾಗಿದೆ. ಇದೀಗ ಅಯ್ಯರ್​ ಬದಲಿಗೆ ಈ ಆವೃತ್ತಿಗೆ ಮಾತ್ರ ಅನಿರುದ್ಧ ಜೋಶಿಗೆ ಮಣೆ ಹಾಕಿದೆ.

ಜೋಶಿ ಕರ್ನಾಟಕ ಪರ 17 ಲಿಸ್ಟ್​ ಪಂದ್ಯಗಳನ್ನಾಡಿದ್ದು 211 ರನ್​ಗಳಿಸಿದ್ದಾರೆ. 20 ಟಿ-20 ಇನ್ನಿಂಗ್ಸ್​ಗಳಿಂದ 320 ರನ್​ಗಳಿಸಿದ್ದಾರೆ. ಈ ಹಿಂದೆ ಆರ್​ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದರಾದರೂ ಆಡುವ ಅವಕಾಶ ಸಿಕ್ಕಿರಲಿಲ್ಲ.

ಅಕ್ಷರ್ ಪಟೇಲ್ ಬದಲಿಗೆ ಶಾಮ್ಸ್ ಮುಲಾನಿ ಆಯ್ಕೆ

ಕೋವಿಡ್ 19 ಸೋಂಕಿನಿಂದ ಬಳಲುತ್ತಿರುವ ಆಲ್​ರೌಂಡರ್​ ಅಕ್ಷರ್ ಪಟೇಲ್ ಬದಲಿಗೆ ಮುಂಬೈನ ಶಾಮ್ಸ್​ ಮುಲಾನಿಯನ್ನು ಸೀಮಿತ ಅವಧಿಗೆ ಬದಲೀ ಆಟಗಾರನಾಗಿ ಡೆಲ್ಲಿ ತಂಡ ಆಯ್ಕೆ ಮಾಡಿದೆ. ಎಡಗೈ ಸ್ಪಿನ್ನರ್​ ಆಗಿರುವ ಇವರು ಅಕ್ಷರ್ ಪಟೇಲ್ ಸಂಪೂರ್ಣ ಗುಣಮುಖರಾಗುವವರೆಗೆ ತಂಡದಲ್ಲಿರಲಿದ್ದಾರೆ.

ಇದನ್ನು ಓದಿ: ವಿಸ್ಡನ್ ದಶಕದ ಕ್ರಿಕೆಟಿಗ: ಸಚಿನ್, ರಿಚರ್ಡ್ಸ್​, ಕಪಿಲ್ ದೇವ್ ಸಾಲಿಗೆ ಕಿಂಗ್ ಕೊಹ್ಲಿ ಸೇರ್ಪಡೆ

Last Updated : Apr 15, 2021, 8:28 PM IST

ABOUT THE AUTHOR

...view details