ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಎರಡು ತಂಡಗಳ ನಡುವೆ ದ್ವಿತೀಯ ಟೆಸ್ಟ್ ಪಂದ್ಯ ನಡೆಯುತ್ತಿದೆ. ನ್ಯೂಜಿಲೆಂಡ್ ತವರು ನೆಲದಲ್ಲಿ ನೀರಸ ಪ್ರದರ್ಶನ ತೋರುತ್ತಿದೆ. ಮೊದಲ ಟೆಸ್ಟ್ ಪಂದ್ಯ ಗೆದ್ದಿರುವ ಇಂಗ್ಲೆಂಡ್ ಎರಡನೇ ಟೆಸ್ಟ್ನಲ್ಲು ಹಿಡಿತ ಸಾಧಿಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ ಆಂಗ್ಲರಿಗೆ ದಾರಾಳ ರನ್ ಬಿಟ್ಟುಕೊಟ್ಟಿತು. ಮೊದಲ ಇನ್ನಿಂಗ್ಸ್ನಲ್ಲಿ 8 ವಿಕೆಟ್ ನಷ್ಟಕ್ಕೆ 435ರನ್ ಗಳಿಸಿ ಆಂಗ್ಲರು ಡಿಕ್ಲೇರ್ ಘೋಷಿಸಿದರು.
ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ತವರು ನೆಲದಲ್ಲೇ ಕುಸಿಯಿತು. ಸತತ ವಿಕೆಟ್ ನಷ್ಟ ಅನುಭವಿಸಿದ ತಂಡ 209ಕ್ಕೆ ತನ್ನೆಲ್ಲಾ ವಿಕೆಟ್ ಕಳೆದು ಕೊಂಡು ಫಾಲೋ ಆನ್ ಎದುರಿಸಿತು. ಫಾಲೋ ಆನ್ ಪಡೆದುಕೊಂಡ ಕಿವೀಸ್ ಪಡೆ ಎರಡನೇ ಇನ್ನಿಂಗ್ಸ್ನಲ್ಲಿ ಪುಟಿದೆದ್ದಿತು. ನ್ಯೂಜಿಲೆಂಡ್ ಬ್ಯಾಟರ್ಗಳು ಪಿಚ್ನ ಗುಣಲಕ್ಷಣ ಅರಿತು ಸ್ಕೋರ್ ಮಾಡಲು ಆರಂಭಿಸಿದರು. ಮಾಜಿ ನಾಯಕ ಕೇನ್ ವಿಲಿಯಮ್ಸನ್ ಬಹಳ ದಿನಗಳ ನಂತರ ಟೆಸ್ಟ್ನಲ್ಲಿ ಘರ್ಜಿಸಿದರು.
ನಾಲ್ಕನೇ ದಿನದ ಮೂರನೇ ಸೆಷನ್ನಲ್ಲಿ 9 ವಿಕೆಟ್ ನಷ್ಟ ಅನಿಭವಿಸಿದ್ದು, 257 ರನ್ಗಳ ಮುನ್ನಡೆ ಸಾಧಿಸಿದೆ. ಪಂದ್ಯ ಡ್ರಾದತ್ತ ಸಾಗುತ್ತಿದ್ದು, ಇಂದು ಸಂಪೂರ್ಣ ಕಿವಿಸ್ ಬ್ಯಾಟ್ ಮಾಡಿ 300+ ರನ್ ಗುರಿ ನೀಡುವ ಸಾಧ್ಯತೆ ಇದೆ. ನಾಳೆ ಒಂದು ದಿನ ಇಂಗ್ಲೆಂಡ್ ಬಳಿ ಇದ್ದು, ವೇಗವಾಗಿ ರನ್ ಗಳಿಸಬೇಕು. ಇಲ್ಲವೇ ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕಿದೆ. ಕೊನೆಯ ದಿನ ಬೌಲಿಂಗ್ ಸ್ನೇಹಿಯಾಗಿ ಪಿಚ್ ವರ್ತಿಸಿದಲ್ಲಿ ಕಿವೀಸ್ಗೆ ತವರಿನಲ್ಲಿ ಗೆಲುವಿನ ಸಿಹಿ ಸಿಗಲಿದೆ.
ಕೇನ್ ವಿಲಿಯಮ್ಸನ್ ರನ್ ದಾಖಲೆ: ಕೇನ್ ವಿಲಿಯಮ್ಸನ್ ಟೆಸ್ಟ್ನಲ್ಲಿ ನ್ಯೂಜಿಲೆಂಡ್ ಪರ ಅತೀ ಹೆಚ್ಚು ರನ್ಗಳಿಸಿದ ಬ್ಯಾಟರ್ ಆಗಿದ್ದಾರೆ. ರಾಸ್ ಟೇಲರ್ ಅವರ ದಾಖಲೆಯನ್ನು ಮುರಿದಿರುವ ವಿಲಿಯಮ್ಸನ್ 7787 ರನ್ ಗಳಿಸಿದ್ದಾರೆ. ಎರಡನೇ ಟೆಸ್ಟ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ ಶತಕ ದಾಖಲಿಸಿದ ಅವರು ಈ ಸಾಧನೆಯನ್ನೂ ಮಾಡಿದ್ದಾರೆ. ಕಿವೀಸ್ ಪರ ರಾಸ್ ಟೇಲರ್ 7683, ಸ್ಟೀಫನ್ ಫ್ಲೆಮಿಂಗ್ 7172,ಬ್ರೆಂಡನ್ ಮೆಕಲಮ್ 6453,ಮಾರ್ಟಿನ್ ಕ್ರೋವ್5444 ರನ್ ಗಳಿಸಿ ನಂತರದ ಸ್ಥಾನಗಳಲ್ಲಿದ್ದಾರೆ.
ಇದುವರೆಗೆ 92 ಟೆಸ್ಟ್ಗಳಲ್ಲಿ 161 ಇನ್ನಿಂಗ್ಸ್ಗಳನ್ನು ಆಡಿರುವ ಕೇನ್ ವಿಲಿಯಮ್ಸನ್ 53.34 ರ ಸರಾಸರಿಯಲ್ಲಿ 7787 ರನ್ಗಳಿಸಿದ್ದಾರೆ. ವಿಲಿಯಮ್ಸನ್ ತನ್ನ ಹೆಸರಿಗೆ 26 ಟೆಸ್ಟ್ ಶತಕ ಮತ್ತು 5 ದ್ವಿಶತಕ ಗಳಿಸಿದ್ದಾರೆ. 251 ಅವರ ಟೆಸ್ಟ್ನ ಅತ್ಯಂತ ಉತ್ತಮ ರನ್ ಆಗಿದೆ. 53ರ ಸರಾಸರಿಯನ್ನು ಕಾಯ್ದುಕೊಂಡ ಕಿವೀಸ್ನ 20 ಬ್ಯಾಟರ್ಗಳ ಪಟ್ಟಿ ಸೇರಿದ್ದಾರೆ.