ಲಾಹೋರ್: ಪಾಕಿಸ್ತಾನ ಹಿರಿಯ ಬ್ಯಾಟರ್ ಕಮ್ರಾನ್ ಅಕ್ಮಲ್ ಕೆಳಗಿನ ವರ್ಗಕ್ಕೆ ಹಿಂಬಡ್ತಿ ನೀಡಿದ ಕಾರಣ ಮುಂಬರುವ ಪಾಕಿಸ್ತಾನ ಪ್ರೀಮಿಯರ್ ಲೀಗ್ನಲ್ಲಿ ಪೇಜಾವರ್ ಜಾಲ್ಮಿಯ ಪರ ಆಡದಿರುವ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ.
ಪಾಕಿಸ್ತಾನ ಸೂಪರ್ ಲೀಗ್ 2022ರ ಆವೃತ್ತಿಗೂ ಮುನ್ನ ನಡೆದ ಡ್ರಾಪ್ ವೇಳೆ ಅಕ್ಮಲ್ರನ್ನು ಗೋಲ್ಡ್ ಕೆಟಗರಿಯ ಬದಲಿಗೆ ಸಿಲ್ವರ್ ಕೆಟಗರಿಗೆ ಹಿಂಬಡ್ತಿ ನೀಡಿದ್ದರು. ಈ ಕಾರಣಕ್ಕೆ ಅಕ್ಮಲ್ ಬೇಸರ ವ್ಯಕ್ತಪಡಿಸಿದ್ದು, ತಾವೂ ಸಿಲ್ವರ್ ಕೆಟಗರಿಯಲ್ಲಿ ಆಡುವುದಕ್ಕೆ ಇಷ್ಟವಿಲ್ಲ ಎಂದು ತಿಳಿಸಿ ಟ್ವೀಟ್ ಮೂಲಿಕ ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಿಎಸ್ಎಲ್ನಲ್ಲಿ ಒಟ್ಟು 18 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶವಿತ್ತು. ಪ್ಲಾಟಿನಂ, ಡೈಮಂಡ್ ಮತ್ತು ಗೋಲ್ಡ್ ವರ್ಗದಲ್ಲಿ ತಲಾ ಮೂರು ಆಟಗಾರರು, ಸಿಲ್ವರ್ ವಿಭಾಗಕ್ಕೆ 5 ಹಾಗೂ ಇಬ್ಬರು ಎಮರ್ಜಿಂಗ್ ಹಾಗೂ ಇಬ್ಬರು ಸಪ್ಲೆಮೆಂಟರಿ ವರ್ಗದಲ್ಲಿ ಆಯ್ಕೆ ಮಾಡಿಕೊಳ್ಳಬಹುದಿತ್ತು.
ಪಿಸಿಬಿ ಪಿಎಸ್ಎಲ್ ಡ್ರಾಫ್ಟ್ಗೂ ಮುನ್ನ ಭಾನುವಾರ ಆಟಗಾರರ ಕೆಟಗರಿ ಬಿಡುಗಡೆ ಮಾಡಿದ್ದು, ಅಕ್ಮಲ್ರನ್ನು ಡೈಮಂಡ್ ಕೆಟಗರಿಯಿಂದ ಗೋಲ್ಡನ್ ಕೆಟಗರಿಗೆ ವರ್ಗಾಯಿಸಿತ್ತು. ಆದರೆ, ಡ್ರಾಪ್ಟ್ನಲ್ಲಿ ಅಕ್ಮಲ್ರನ್ನು ಗೋಲ್ಡನ್ ಕೆಟಗರಿಯ ಆಯ್ಕೆಯ ವೇಳೆ ಯಾವುದೇ ಫ್ರಾಂಚೈಸಿ ಆಯ್ಕೆ ಮಾಡಲಿಲ್ಲ. ಕೊನೆಗೆ ಸಿಲ್ವರ್ ಕೆಟಗರಿಯ ಡ್ರಾಫ್ಟ್ ವೇಳೆ ಪೇಜಾವರ್ ಜಾಲ್ಮಿ ಖರೀದಿಸಿತ್ತು. ಆದರೆ, 2016ರಿಂದ ಫ್ರಾಂಚೈಸಿಯಲ್ಲಿ ಆಡಿದರೂ ತಮ್ಮನ್ನು ಕಡೆಗಣಿಸಿ ಸಿಲ್ವರ್ ಕೆಟಗರಿಯಲ್ಲಿ ಖರೀದಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿ ಫ್ರಾಂಚೈಸಿ ಪರ ಆಡದಿರಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ:ಭಾರತ ತಂಡಕ್ಕೆ ಹೇಳಿ ಮಾಡಿಸಿದ ಪ್ಲೇಯರ್.. ಹಾರ್ದಿಕ್ ಪಾಂಡ್ಯಗೆ ಭೀತಿ ತಂದ 'ಆಲ್ರೌಂಡರ್'ನ ಆಟ