ಲಂಡನ್:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಇನ್ನು ಮೂರು ದಿನ ಬಾಕಿ ಇದೆ. ಈ ನಡುವೆ ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ. 15 ಜನರ ತಂಡದಲ್ಲಿದ್ದ ಅನುಭವಿ ಬೌಲರ್ನ್ನು ಹೊರಗಿಟ್ಟು ಅವರ ಜಾಗಕ್ಕೆ ಹೊಸ ಫೇಸರ್ನ್ನು ಆಡಿಸಲಾಗುತ್ತಿದೆ. ಗಾಯದ ಕಾರಣ ಸೀಮರ್ ಜೋಶ್ ಹ್ಯಾಜಲ್‌ವುಡ್ ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ ತಂಡದಿಂದ ಹೊರಗಿಟ್ಟಿದೆ. ಅವರು ಇನ್ನೂ ಅಕಿಲ್ಸ್ ಮತ್ತು ಸೈಡ್ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಜೋಶ್ ಹ್ಯಾಜಲ್‌ವುಡ್ ಈ ವರ್ಷ ಗಾಯದಿಂದ ಬಳಲುತ್ತಿದ್ದರು. ಅವರು ಕೇವಲ ಮೂರು ಪಂದ್ಯದಲ್ಲಿ ಆರ್ಸಿಬಿಯನ್ನು ಈ ವರ್ಷ ಪ್ರತಿನಿಧಿಸಿದ್ದಾರೆ. ಆದರೆ ನಂತರ ಮತ್ತೆ ಗಾಯದ ಸಮಸ್ಯೆಯಿಂದ ತವರಿಗೆ ಮರಳಿದ್ದರು ನಂತರ ಅವರು ಚೇತರಿಸಿಕೊಂಡು ಟೆಸ್ಟ್ ತಂಡವನ್ನು ಸೇರಿಕೊಂಡಿದ್ದರು. ಅವರು ಚೇತರಿಸಿಕೊಂಡಿದ್ದಾರೆ, ಟೆಸ್ಟ್ ಚಾಂಪಿಯನ್‌ಶಿಪ್ ಆಡಲಿದ್ದಾರೆ ಎನ್ನಲಾಗಿತ್ತು.
ಫಿಟ್ ಆಗಿದ್ದ ಜೋಶ್ ಹ್ಯಾಜಲ್‌ವುಡ್ ಅಭ್ಯಾಸದಲ್ಲಿ ತೊಡಗಿಕೊಂಡಿರುವ ಫೋಟೋಗಳು ಹರಿದಾಡಿದ್ದವು. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ದಿಢೀರ್ ಬದಲಾವಣೆಯನ್ನು ಪಂದ್ಯಕ್ಕೆ ಮೂರು ದಿನ ಮುಂಚಿತವಾಗಿ ತೆಗೆದುಕೊಂಡಿದ್ದು, ಬಲಗೈ ಬೌಲರ್ಗೆ ಹೆಚ್ಚಿನ ಒತ್ತಡ ನೀಡದೇ ಸಂಪೂರ್ಣ ಚೇತರಿಕೆಗೆ ಅವಕಾಶ ನೀಡುವಂತೆ ಕಾಣುತ್ತಿದೆ.
ಇನ್-ಫಾರ್ಮ್ ಆಲ್-ರೌಂಡರ್ ಮೈಕೆಲ್ ನೆಸರ್ ದಕ್ಷಿಣ ಲಂಡನ್‌ನಲ್ಲಿ ನಡೆಯಲಿರುವ ಒಂದು ಟೆಸ್ಟ್‌ಗಾಗಿ ಆಸ್ಟ್ರೇಲಿಯಾದ 15 ಆಟಗಾರರ ತಂಡಕ್ಕೆ ಸೇರಿಕೊಂಡಿದ್ದಾರೆ. ಅವರ ಸೇರ್ಪಡೆಯನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಈವೆಂಟ್ ತಾಂತ್ರಿಕ ಸಮಿತಿಯು ಅನುಮೋದಿಸಿದೆ. ನೆಸರ್ ಇತ್ತೀಚೆಗೆ ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಗ್ಲಾಮೊರ್ಗಾನ್‌ಗಾಗಿ ಅತ್ಯುತ್ತಮ ಸಂಪರ್ಕದಲ್ಲಿದ್ದಾರೆ. 33 ವರ್ಷ ವಯಸ್ಸಿನವರು ಐದು ಪಂದ್ಯಗಳಿಂದ 19 ವಿಕೆಟ್‌ಗಳನ್ನು ಪಡೆದಿದ್ದಾರೆ.