ಇಂಗ್ಲೆಂಡ್ನ ಏಕದಿನ, ಟಿ20 ತಂಡದ ನಾಯಕರಾಗಿದ್ದ ಇಯಾನ್ ಮೋರ್ಗನ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು, ತೆರವಾದ ನಾಯಕನ ಸ್ಥಾನಕ್ಕೆ ಡ್ಯಾಶಿಂಗ್ ಬ್ಯಾಟರ್ ಜೋಸ್ ಬಟ್ಲರ್ರನ್ನು ನೇಮಿಸಲಾಗಿದೆ.
ಇಯಾನ್ ಮೋರ್ಗನ್ ನಿವೃತ್ತಿಗೂ ಮೊದಲು ಜೋಸ್ ಬಟ್ಲರ್ರನ್ನು ಉಪನಾಯಕನನ್ನಾಗಿ ನೇಮಿಸಲು ಕೋರಿಕೆ ಇಟ್ಟಿದ್ದರು. ಇದೀಗ ಅವರನ್ನೇ ನಾಯಕನ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ. ಭಾರತದ ವಿರುದ್ಧ ನಡೆಯುವ 3 ಪಂದ್ಯಗಳ ಟಿ20 ಸರಣಿ ಮೂಲಕ ಪೂರ್ಣಾವಧಿ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಜೋಸ್ ಬಟ್ಲರ್ ಈಗಾಗಲೇ 14 ಪಂದ್ಯಗಳಲ್ಲಿ ನಾಯಕನಾಗಿ ಇಂಗ್ಲೆಂಡ್ ತಂಡ ಮುನ್ನಡೆಸಿದ್ದಾರೆ. ಕಳೆದ ವಾರ ನೆದರ್ಲ್ಯಾಂಡ್ ವಿರುದ್ಧದ ಮೂರನೇ ಏಕದಿನದ ವೇಳೆ ಮೋರ್ಗನ್ ಗಾಯಗೊಂಡಾಗ ನಾಯಕತ್ವ ವಹಿಸಿಕೊಂಡಿದ್ದರು.