ಬೆಂಗಳೂರು :ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ರನ್ನು 8 ಕೋಟಿ ರೂ. ನೀಡಿ ಮುಂಬೈ ಇಂಡಿಯನ್ಸ್ ಖರೀದಿಸುವ ಮೂಲಕ ಮತ್ತೆ ಐಪಿಎಲ್ನಲ್ಲಿ ಅತ್ಯಂತ ಬಲಿಷ್ಠ ಬೌಲಿಂಗ್ ವಿಭಾಗ ಹೊಂದಿರುವ ತಂಡ ಎಂಬ ಹೆಗ್ಗಳಿಕೆ ಕಾಪಾಡಿಕೊಂಡಿದೆ.
ಕಳೆದ ಮೂರು ವರ್ಷಗಳಿಂದ ರಾಜಸ್ಥಾನ್ ರಾಯಲ್ಸ್ನಲ್ಲಿದ್ದ ಜೋಫ್ರಾ ಕಳೆದ ಆವೃತ್ತಿಯಲ್ಲಿ ಗಾಯಗೊಂಡು ಆಡಿರಲಿಲ್ಲ. ಇನ್ನೂ ಚೇತರಿಸಿಕೊಳ್ಳದಿದ್ದರೂ ಸಹಾ ಅವರ ಮೇಲಿನ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಸನ್ರೈಸರ್ಸ್ ಜೊತೆಗೆ ಭಾರಿ ಪೈಪೋಟಿ ನಡೆಸಿದ ಮುಂಬೈ ಕೊನೆಗೂ 8 ಕೋಟಿ ರೂ.ಗೆ ಖರೀದಿಸಿದೆ.
ಆರ್ಚರ್ ಅಲ್ಲದೆ ಆಸ್ಟ್ರೇಲಿಯಾದ ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ರನ್ನು ₹2.6 ಕೋಟಿ, ಇಂಗ್ಲೆಂಡ್ ಬೌಲರ್ 1.15 ಕೋಟಿ ರೂ. ನೀಡಿ ಖರೀದಿಸಿದೆ. ಜೊತೆಗೆ ಸಿಂಗಾಪುರ್ನ ಟಿಮ್ ಡೇವಿಡ್ ಅವರನ್ನು 8.25 ಕೋಟಿ ರೂ.ಗಳಿಗೆ ಖರೀದಿಸಿದೆ.
ಮುಂಬೈ ಇಂಡಿಯನ್ಸ್ ಖರೀದಿಸಿದ ಆಟಗಾರರು
- ಇಶಾನ್ ಕಿಶನ್ -ಭಾರತೀಯ ವಿಕೆಟ್ ಕೀಪರ್ ₹15,25,00,000
- ಡೆವಾಲ್ಡ್ ಬ್ರೆವಿಸ್- ವಿದೇಶಿ ಬ್ಯಾಟ್ಸ್‌ಮನ್ ₹3,00,00,000
- ಬಾಸಿಲ್ ಥಂಪಿ- ಭಾರತೀಯ ಬೌಲರ್ ₹30,00,000
- ಮುರುಗನ್ ಅಶ್ವಿನ್ -ಭಾರತೀಯ ಬೌಲರ್ ₹1,60,00,000
- ಜಯದೇವ್ ಉನಾದ್ಕತ್- ಭಾರತೀಯ ಬೌಲರ್ ₹1,30,00,000
- ಮಯಾಂಕ್ ಮಾರ್ಕಂಡೆ -ಭಾರತೀಯ ಬೌಲರ್ ₹65,00,000
- ಎನ್.ತಿಲಕ್ ವರ್ಮಾ -ಭಾರತೀಯ ಆಲ್ ರೌಂಡರ್ ₹1,70,00,000
- ಸಂಜಯ್ ಯಾದವ್- ಭಾರತೀಯ ಆಲ್ ರೌಂಡರ್ ₹50,00,000
- ಜೋಫ್ರಾ ಆರ್ಚರ್- ವಿದೇಶಿ ಆಲ್ ರೌಂಡರ್ ₹8,00,00,000
- ಡೇನಿಯಲ್ ಸ್ಯಾಮ್ಸ್- ವಿದೇಶಿ ಆಲ್ ರೌಂಡರ್ ₹2,60,00,000
- ಟೈಮಲ್ ಮಿಲ್ಸ್- ವಿದೇಶಿ ಬೌಲರ್ ₹1,50,00,000
- ಟಿಮ್ ಡೇವಿಡ್- ವಿದೇಶಿ ಆಲ್ ರೌಂಡರ್ ₹8,25,00,000
ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಸಿಂಗಾಪುರದ ದೈತ್ಯನನ್ನ 8.25 ಕೋಟಿಗೆ ಖರೀದಿಸಿದ ಮುಂಬೈ ಇಂಡಿಯನ್ಸ್