ಆ್ಯಂಟಿಗುವಾ:ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಜೋ ರೂಟ್ ಇಂಗ್ಲೆಂಡ್ ಪರ ಹೆಚ್ಚು ಶತಕ ಸಿಡಿಸಿ 2ನೇ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು.
ಮೊದಲ ರಿಚರ್ಡ್ಸ್-ಬಾಥಮ್ ಟೆಸ್ಟ್ನ ಅಂತಿಮ ದಿನವಾದ ಇಂದು ಜೋ ರೂಟ್ ತಮ್ಮ ವೃತ್ತಿ ಜೀವನದ 24ನೇ ಶತಕ ಸಿಡಿಸಿದರು. ಈ ಮೂಲಕ ಮಾಜಿ ನಾಯಕ ಕೆವಿನ್ ಪೀಟರ್ಸನ್(23) ಅವರನ್ನು ಹಿಂದಿಕ್ಕಿ ಇಂಗ್ಲೆಂಡ್ ತಂಡದ ಪರ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡರು.
ಅಗ್ರಸ್ಥಾನದಲ್ಲಿ ಮಾಜಿ ನಾಯಕ ಅಲೈಸ್ಟರ್ ಕುಕ್ ಇದ್ದು, ಅವರು 161 ಪಂದ್ಯಗಳಿಂದ 33 ಶತಕಗಳ ಸಹಿತ 12, 472 ರನ್ಗಳಿಸಿ ಹೆಚ್ಚು ಶತಕ ಮತ್ತು ಹೆಚ್ಚು ರನ್ ಸಿಡಿಸಿದರು ಇಂಗ್ಲೆಂಡ್ ಬ್ಯಾಟರ್ ಎಂಬ ದಾಖಲೆಯನ್ನು ಹೊಂದಿದ್ದಾರೆ. ರೂಟ್ 115 ಪಂದ್ಯಗಳಿಂದ 24 ಶತಕ ಹಾಗೂ 53 ಅರ್ಧಶತಕಗಳ ಸಹಿತ 9722 ರನ್ಗಳಿಸಿದ್ದಾರೆ. ಈ ಸರಣಿಯಲ್ಲಿ 278 ರನ್ಗಳಿಸಿದರೆ ತಮ್ಮ ದೇಶದ ಪರ 10 ಸಾವಿರ ಪೂರೈಸಿದ 2ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.