ಕರ್ನಾಟಕ

karnataka

ETV Bharat / sports

ಗ್ರೇಮ್​ ಸ್ಮಿತ್​ ದಾಖಲೆ ಮುರಿದ ರೂಟ್​, ಕ್ಯಾಲೆಂಡರ್​ ವರ್ಷದಲ್ಲಿ ಗರಿಷ್ಠ ರನ್​ ಸಿಡಿಸಿದ 3ನೇ ಬ್ಯಾಟರ್​ - ಗ್ರೇಮ್​ ಸ್ಮಿತ್ ದಾಖಲೆ ಮುರಿದ ಜೋ ರೂಟ್

ಜೋ ರೂಟ್​ ಈ ವರ್ಷ ಇನ್ನೂ ಒಂದು ಇನ್ನಿಂಗ್ಸ್​ ಬ್ಯಾಟಿಂಗ್ ಮಾಡಲು ಅವಕಾಶವಿದೆ. ಬಾಕ್ಸಿಂಗ್​ ಡೇ ಟೆಸ್ಟ್ 2ನೇ ಇನ್ನಿಂಗ್ಸ್​​ನಲ್ಲಿ 109 ರನ್​ಗಳಿಸಿದರೆ ವರ್ಷವೊಂದರಲ್ಲಿ ಅತಿ ಹೆಚ್ಚು ರನ್​ಗಳಿಸಿದ ವಿಶ್ವ ದಾಖಲೆಗೆ ಪಾತ್ರರಾಗಲಿದ್ದಾರೆ..

Joe Root Surpasses Graeme Smith's Record
ಜೋ ರೂಟ್ ದಾಖಲೆ

By

Published : Dec 26, 2021, 7:02 PM IST

ಮೆಲ್ಬೋರ್ನ್​​: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 3ನೇ ಆ್ಯಶಸ್​ ಟೆಸ್ಟ್​ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದ ಇಂಗ್ಲೆಂಡ್​ ತಂಡದ ನಾಯಕ ಜೋ ರೂಟ್​ ವರ್ಷದಲ್ಲಿ ಹೆಚ್ಚು ಟೆಸ್ಟ್​ ರನ್​ಗಳಿಸಿದ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್​ ಸ್ಮಿತ್​ರನ್ನು ಹಿಂದಿಕ್ಕಿ 3ನೇ ಸ್ಥಾನ ಪಡೆದಿದ್ದಾರೆ.

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯದ ಮೊದಲ ದಿನ ಇಂಗ್ಲೆಂಡ್ ಜೋ ರೂಟ್​​ 82 ಎಸೆತಗಳಲ್ಲಿ 7 ಬೌಂಡರಿ ಸಹಿತ 50 ರನ್​ಗಳಿಸಿ ಔಟಾದರು. ಆದರೂ ಅವರು 2021ರಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ 1680 ರನ್​ಗಳಿಸುವ ಮೂಲಕ ಕ್ಯಾಲೆಂಡರ್​ ವರ್ಷದಲ್ಲಿ ಹೆಚ್ಚು ರನ್​ಗಳಿಸಿದ ವಿಶ್ವದ 3ನೇ ಬ್ಯಾಟರ್​ ಎನಿಸಿದರು.

ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 2008ರಲ್ಲಿ 15 ಪಂದ್ಯಗಳಿಂದ​ 1656 ರನ್​ಗಳಿಸಿ 3ನೇ ಸ್ಥಾನದಲ್ಲಿದ್ದರು. ಪಾಕಿಸ್ತಾನದ ಮೊಹಮ್ಮದ್ ಯೂಸುಫ್ 2006ರಲ್ಲಿ​ 1788 ರನ್ ಮತ್ತು ವೆಸ್ಟ್ ಇಂಡೀಸ್​ನ ಮಾಜಿ ನಾಯಕ ಸರ್​ ವಿವಿಯನ್ ರಿಚರ್ಡ್ಸ್​ 1710 ರನ್ ಗಳಿಸಿದ್ದು ರೂಟ್​ಗಿಂತ ಮುಂದಿದ್ದಾರೆ.

ಜೋ ರೂಟ್​ ಈ ವರ್ಷ ಇನ್ನೂ ಒಂದು ಇನ್ನಿಂಗ್ಸ್​ ಬ್ಯಾಟಿಂಗ್ ಮಾಡಲು ಅವಕಾಶವಿದೆ. ಬಾಕ್ಸಿಂಗ್​ ಡೇ ಟೆಸ್ಟ್ 2ನೇ ಇನ್ನಿಂಗ್ಸ್​​ನಲ್ಲಿ 109 ರನ್​ಗಳಿಸಿದರೆ ವರ್ಷವೊಂದರಲ್ಲಿ ಅತಿ ಹೆಚ್ಚು ರನ್​ಗಳಿಸಿದ ವಿಶ್ವ ದಾಖಲೆಗೆ ಪಾತ್ರರಾಗಲಿದ್ದಾರೆ.

ಈ ಸರಣಿಯಲ್ಲಿ ರೂಟ್​ ಈಗಾಗಲೇ ಕ್ಯಾಲೆಂಡರ್​ ವರ್ಷದಲ್ಲಿ ಹೆಚ್ಚು ರನ್​ಗಳಿಸಿದವರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್​(1544), ಸುನೀಲ್ ಗವಾಸ್ಕರ್​(1555), ಸಚಿನ್​ ತೆಂಡೂಲ್ಕರ್​(1562) ಮತ್ತು ಮೈಕಲ್​ ಕ್ಲಾರ್ಕ್​(1595) ದಾಖಲೆಗಳನ್ನು ಮುರಿದಿದ್ದಾರೆ. ಇಂಗ್ಲೆಂಡ್​ ಪರ ಈ ಹಿಂದೆ 1481 ರನ್​ಗಳಿಸಿದ್ದ ಮಾಜಿ ನಾಯಕ ಮೈಕಲ್ ವಾನ್​ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ರನ್​ಗಳಿಸಿದ ದಾಖಲೆ ಹೊಂದಿದ್ದರು.​

ಇದನ್ನೂ ಓದಿ:ಆ್ಯಶಸ್​​ 3ನೇ ಟೆಸ್ಟ್​​ನ ಮೊದಲ ದಿನ ಆಸೀಸ್​ ಪ್ರಾಬಲ್ಯ: 185ಕ್ಕೆ ಪತನ ಕಂಡ ಆಂಗ್ಲರು

ABOUT THE AUTHOR

...view details