ಕರ್ನಾಟಕ

karnataka

ETV Bharat / sports

2 ಹೊಸ ತಂಡಗಳ ಆಗಮನ: ಮುಂದಿನ ಐಪಿಎಲ್​ ಹರಾಜಿಗೆ ಹೆಸರು ನೋಂದಾಯಿಸಿದ ಜೋ ರೂಟ್​ - ಐಪಿಎಲ್​ ಹರಾಜಿನಲ್ಲಿ ಜೋ ರೂಟ್

ಪ್ರಸ್ತುತ ಕ್ರಿಕೆಟ್​ನ ಅತ್ಯಂತ ಶ್ರೇಷ್ಠ ಬ್ಯಾಟರ್​ಗಳಲ್ಲಿ ಒಬ್ಬರಾಗಿರುವ ಜೋ ರೂಟ್ 2018ರ ಐಪಿಎಲ್ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದರು. ಆದರೆ ಮುಂದಿನ ವರ್ಷದ ಐಪಿಎಲ್​ನಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಯಾಗುತ್ತಿದ್ದು, ತಮ್ಮ ಅದೃಷ್ಟ ಬದಲಾಗಬಹುದು ಎಂಬ ಭರವಸೆಯಲ್ಲಿದ್ದಾರೆ.

Joe Root eyes maiden IPL stint next year: Report
ಜೋ ರೂಟ್​

By

Published : Oct 14, 2021, 8:12 AM IST

ಲಂಡನ್: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್​ ಮುಂದಿನ ವರ್ಷದ ಐಪಿಎಲ್​ನಲ್ಲಿ ಪದಾರ್ಪಣೆ ಮಾಡುವ ವಿಶ್ವಾಸದಲ್ಲಿದ್ದಾರೆ. ಹಾಗಾಗಿ 2022ರ ಮೆಗಾ ಹರಾಜಿಗೆ ತಮ್ಮ ಹೆಸರು ನೋಂದಾಯಿಸಿದ್ದಾರೆ ಎಂದು ಪ್ರತಿಷ್ಠಿತ ಇಂಗ್ಲಿಷ್​ ಪತ್ರಿಕೆ ವರದಿ ಮಾಡಿದೆ.

ಪ್ರಸ್ತುತ ಕ್ರಿಕೆಟ್​ನ ಅತ್ಯಂತ ಶ್ರೇಷ್ಠ ಬ್ಯಾಟರ್​ಗಳಲ್ಲಿ ಒಬ್ಬರಾಗಿರುವ ಜೋ ರೂಟ್ 2018ರ ಐಪಿಎಲ್ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದರು. ಆದರೆ ಮುಂದಿನ ವರ್ಷದ ಐಪಿಎಲ್​ನಲ್ಲಿ ಹೊಸ ಎರಡು ತಂಡಗಳು ಸೇರುತ್ತಿರುವುದರಿಂದ ತಮ್ಮ ಅದೃಷ್ಟ ಬದಲಾಗಬಹುದು ಎಂಬ ಭರವಸೆಯಲ್ಲಿದ್ದಾರೆ.

ಟೆಲಿಗ್ರಾಫ್​ ವರದಿಯ ಪ್ರಕಾರ, ರೂಟ್​ ಮುಂದಿನ ವರ್ಷದ ಐಪಿಎಲ್​ ಹರಾಜಿನಲ್ಲಿ ಕಾಣಿಸಿಕೊಂಡು ಮೊದಲ ಬಾರಿಗೆ ಜಗತ್ತಿನ ಶ್ರೀಮಂತ ಕ್ರಿಕೆಟ್‌ ಲೀಗ್​ನಲ್ಲಿ ಆಡುವುದಕ್ಕೆ ಎದುರು ನೋಡುತ್ತಿದ್ದಾರೆ. ಇದು ಟಿ20 ವಿಶ್ವಕಪ್​ನಲ್ಲಿ ಆಡಬೇಕೆಂಬ ತನ್ನ ಆಸೆಗೆ ಮತ್ತಷ್ಟು ಪುಷ್ಟಿ ನೀಡಲಿದೆ ಎಂದು ರೂಟ್​ ತಿಳಿಸಿದ್ದಾರೆಂದು ಪತ್ರಿಕೆ ಉಲ್ಲೇಖಿಸಿದೆ.

2022ಕ್ಕೆ ಮತ್ತೆರಡು ತಂಡಗಳನ್ನು ಸೇರ್ಪಡೆಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಆದ್ದರಿಂದ ಎರಡೂ ತಂಡಗಳನ್ನು ಸೇರಿ 16 ವಿದೇಶಿ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಹಾಗಾಗಿ ಬಹಳಷ್ಟು ಆಟಗಾರರು ಈ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

ನನ್ನ ಇಷ್ಟು ವರ್ಷದ ವೃತ್ತಿ ಜೀವನದಲ್ಲಿ ಐಪಿಎಲ್​ನ ಒಂದೂ ಋತುವಿನ ಭಾಗವಾಗದಿರುವುದಕ್ಕೆ ಹತಾಶನಾಗಿದ್ದೇನೆ. ಇಂತಹ ಲೀಗ್​ನಲ್ಲಿ ಒಂದು ಆವೃತ್ತಿಯಲ್ಲಾದರೂ ಅನುಭವ ಪಡೆಯಲು ನಾನು ಇಷ್ಟಪಡುತ್ತೇನೆ ಎಂದು ರೂಟ್ ಹೇಳಿಕೊಂಡಿದ್ದಾರೆ.

ABOUT THE AUTHOR

...view details