ಅಡಿಲೇಡ್ : ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಸೋಮವಾರ 2ನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ 275 ರನ್ಗಳ ಸೋಲು ಕಂಡಿದೆ. ಈ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಜೋ ರೂಟ್ ಇಂಗ್ಲೆಂಡ್ ಪರ ಗರಿಷ್ಠ ಸೋಲು ಕಂಡ ನಾಯಕ ಎಂಬ ಬೇಡದ ದಾಖಲೆಗೆ ಪಾತ್ರರಾದರು.
ಇಂಗ್ಲೆಂಡ್ ಪರ ಜೋ ರೂಟ್ ನಾಯಕನಾಗಿ 58 ಪಂದ್ಯಗಳಲ್ಲಿ ಮುನ್ನಡೆಸಿದ್ದು, 27 ಗೆಲುವು ಪಡೆಯುವ ಮೂಲಕ ಅತ್ಯಂತ ಯಶಸ್ವಿ ನಾಯಕ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.
ಆದರೆ, ಆಸ್ಟ್ರೇಲಿಯಾ ವಿರುದ್ಧ ಸತತ 2 ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಇಂಗ್ಲೆಂಡ್ ನಾಯಕನಾಗಿ ಗರಿಷ್ಠ ಸೋಲು ಪಡೆದ ನಾಯಕ ಎಂಬ ಬೇಡದ ದಾಖಲೆಗೂ ಪಾತ್ರರಾದರು.