ಹ್ಯಾಮಿಲ್ಟನ್: ಭಾರತ ಮಹಿಳಾ ತಂಡದ ಹಿರಿಯ ಬೌಲರ್ ಜೂಲನ್ ಗೋಸ್ವಾಮಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ ಎಂದು ಆಸ್ಟ್ರೇಲಿಯಾದ ಆಲ್ರೌಂಡರ್ ಎಲಿಸ್ ಪೆರ್ರಿ ಪ್ರಶಂಸಿಸಿದ್ದಾರೆ.
ಭಾರತ ತಂಡದಲ್ಲಿ ಜೂಲನ್ ಪಾತ್ರದ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಪೆರ್ರಿ, ನಾನಷ್ಟೇ ಅಲ್ಲ, ನಮ್ಮ ಸಂಪೂರ್ಣ ತಂಡ(ಆಸ್ಟ್ರೇಲಿಯಾ) ಜೂಲನ್ ಅವರಿಗೆ ಅತ್ಯುನ್ನತ ಗೌರವ ಹೊಂದಿದೆ. ನಿಮಗೆ ಗೊತ್ತಿರಬಹುದು, ಅವರು ಈ ಆಟಕ್ಕೆ ನೀಡಿರುವ ಕೊಡುಗೆ ಕೇವಲ ಭಾರತ ತಂಡಕ್ಕೆ ಸೀಮಿತವಾಗಿಲ್ಲ. ವಿಶ್ವದಾದ್ಯಂತ ಇಡೀ ಮಹಿಳಾ ಕ್ರಿಕೆಟ್ಗೆ ಅವರ ಕೊಡುಗೆ ನಂಬಲಾಸಾಧ್ಯ ಎಂದು ಪೆರ್ರಿ ವಿಂಡೀಸ್ ಪಂದ್ಯ ಗೆದ್ದ ನಂತರ ಹೇಳಿದ್ದಾರೆ.
ನಾನು ಖಂಡಿತವಾಗಿ ಅವರು ಇಷ್ಟು ದೀರ್ಘಾವಧಿಯಲ್ಲಿ ಕ್ರಿಕೆಟ್ನಲ್ಲಿ ಯಶಸ್ವಿಯಾಗಿರುವಂತೆ ಜೀವನದಲ್ಲೂ ಅವರ ದೀರ್ಘಾಯುಷ್ಯವನ್ನು ಬಯಸುತ್ತೇನೆ. ಅವರ ಹೊಸ ಚೆಂಡಿನಲ್ಲಿ ಅವರು ಭಾರತ ತಂಡದ ತಳಪಾಯವಾಗಿದ್ದಾರೆ. ಅವರಿಂದ ತಪ್ಪಿಸಿಕೊಳ್ಳುವುದು ನಿಜವಾಗಿಯೂ ಕಷ್ಟವಾಗಿರುತ್ತದೆ ಎಂದು ವಿಶ್ವದ ಶ್ರೇಷ್ಠ ಆಲ್ರೌಂಡರ್ ತಿಳಿಸಿದ್ದಾರೆ.