ಆಕ್ಲೆಂಡ್: ಭಾರತದ ಹಿರಿಯ ವೇಗದ ಬೌಲರ್ ಜೂಲನ್ ಗೋಸ್ವಾಮಿ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ 200 ಪಂದ್ಯಗಳನ್ನಾಡಿದ ವಿಶ್ವದ 2ನೇ ಕ್ರಿಕೆಟರ್ ಎನಿಸಿಕೊಂಡರು. ಶನಿವಾರ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ಈ ಮೈಲಿಗಲ್ಲು ತಲುಪಿದರು.
250 ವಿಕೆಟ್ ಪಡೆದಿರುವ ವಿಶ್ವದ ಮೊದಲ ಮಹಿಳಾ ಕ್ರಿಕೆಟರ್ ಆಗಿರುವ 39 ವರ್ಷದ ಜೂಲನ್ ಗೋಸ್ವಾಮಿ 200 ಏಕದಿನ ಪಂದ್ಯಗಳನ್ನಾಡಿದ ಭಾರತದ 2ನೇ ಆಟಗಾರ್ತಿಯಾಗಿದ್ದಾರೆ. ಪ್ರಸ್ತುತ ವಿಶ್ವಕಪ್ನಲ್ಲಿ ಭಾರತವನ್ನು ಮುನ್ನಡೆಸುತ್ತಿರುವ ಮಿಥಾಲಿ ರಾಜ್ 230 ಪಂದ್ಯಗಳನ್ನಾಡಿ, ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಇವರಿಬ್ಬರನ್ನು ಹೊರೆತುಪಡಿಸಿದರೆ ಬೇರೆ ಯಾವ ಮಹಿಳಾ ಕ್ರಿಕೆಟರ್ 200ಕ್ಕಿಂತ ಹೆಚ್ಚು ಪಂದ್ಯಗಳನ್ನಾಡಿಲ್ಲ. ಇಂಗ್ಲೆಂಡ್ ಮಾಜಿ ನಾಯಕಿ ವಾರ್ಲೊಟ್ ಎಡ್ವರ್ಡ್ಸ್ 191 ಪಂದ್ಯಗಳನ್ನಾಡಿ 3ನೇ ಸ್ಥಾನದಲ್ಲಿದ್ದಾರೆ.