ಕ್ವೀನ್ಸ್ ಲ್ಯಾಂಡ್: ಭಾರತ ಮತ್ತು ಆಸ್ಟ್ರೇಲಿಯಾ ಮಹಿಳೆರು ನಡುವಿನ ಮೊದಲ ಟಿ-20 ಪಂದ್ಯ ಮಳೆಗಾಹುತಿಯಾಗಿದೆ. ಭಾರತ 15.2 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 134 ರನ್ಗಳಿಸಿದ್ದ ವೇಳೆ ಆರಂಭವಾದ ಮಳೆ ಕೊನೆಗೂ ಪಂದ್ಯ ಪುನಾರಂಭಗೊಳ್ಳಲು ಅವಕಾಶ ನೀಡಲಿಲ್ಲ. ಕೊನೆಗೆ ಪಂದ್ಯವನ್ನು ರದ್ದುಗೊಳಿಸಲಾಯಿತು.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಮಹಿಳೆಯರಿಗೆ ಪ್ರಬಲ ಹೋರಾಟ ಮಾಡಿದ್ದ ಭಾರತೀಯ ಪಡೆ 1-2ರಲ್ಲಿ ಸರಣಿ ಕಳೆದುಕೊಂಡಿತ್ತು. ಆದರೆ, ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೂ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಭಾರತೀಯ ವನಿತೆಯರು ಆತಿಥೇಯರ ವಿರುದ್ಧ ಪ್ರಾಬಲ್ಯ ಸಾಧಿಸಿದ್ದರು.
ಗುರುವಾರ ಆರಂಭವಾದ ಟಿ-20 ಪಂದ್ಯದಲ್ಲೂ ಅದೇ ಉತ್ಸಾಹದಿಂದ ಕಣಕ್ಕಿಳಿದಿದ್ದ ಭಾರತ ತಂಡ ಆಸ್ಟ್ರೇಲಿಯಾ ಬೌಲರ್ಗಳನ್ನು ಉತ್ತಮವಾಗಿ ದಂಡಿಸಿ ಬೃಹತ್ ಮೊತ್ತದತ್ತ ಸಾಗುತ್ತಿತ್ತು. ಆದರೆ, ಮಳೆ ಪಂದ್ಯದಲ್ಲಿ ಫಲಿತಾಂಶ ಬರದಂತೆ ಮಾಡಿತು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತದ ಪರ ಸ್ಮೃತಿ ಮಂಧಾನ 10 ಎಸೆತಗಳಲ್ಲಿ 17 ಮತ್ತು ಶೆಫಾಲಿ ವರ್ಮಾ 14 ಎಸೆತಗಳಲ್ಲಿ 3 ಸಿಕ್ಸರ್ಗಳ ಸಹಿತ 18 ರನ್, ನಾಯಕಿ ಹರ್ಮನ್ಪ್ರೀತ್ ಕೌರ್(12) ಯಸ್ತಿಕಾ ಭಾಟಿಯಾ 15 ಮತ್ತು ಜಮೀಮಾ ರೋಡ್ರಿಗಸ್ 36 ಎಸೆಗಳಲ್ಲಿ ಅಜೇಯ 49 ರನ್ ಮತ್ತು ರಿಚಾ ಘೋಷ್ ಅಜೇಯ 17 ರನ್ಗಳಿಸಿದ್ದರು.
ಇದನ್ನು ಓದಿ:ಲಿಂಗಸಮಾನತೆ ಮನ್ನಣೆ: ಟಿ-20 ವಿಶ್ವಕಪ್ನಿಂದ ಬ್ಯಾಟ್ಸ್ಮನ್ ಬದಲಿಗೆ ಬ್ಯಾಟರ್ ಬಳಕೆಗೆ ಐಸಿಸಿ ನಿರ್ಧಾರ