ಲೀಡ್ಸ್: ಭಾರತದ ಯುವ ಬ್ಯಾಟರ್ ಜಮಿಮಾ ರೋಡ್ರಿಗಸ್ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಫಾರ್ಮ್ಗೆ ಮರಳಿದ್ದಾರೆ.
ದಿ ಹಂಡ್ರೆಡ್ ಲೀಗ್ನಲ್ಲಿ ನಾರ್ಥರ್ನ್ ಸೂಪರ್ ಚಾರ್ಜಸ್ ತಂಡದ ಪರ ಆಡುವ ಜಮಿಮಾ ವೆಲ್ಸ್ ಫೈರ್ ವುಮೆನ್ ತಂಡದ ವಿರುದ್ಧ ಕೇವಲ 43 ಎಸೆತಗಳಲ್ಲಿ 43 ಬೌಂಡರಿಗಳ ಸಹಿತ ಅಜೇಯ 92 ರನ್ಗಳಿಸಿ ತಂಡಕ್ಕೆ 6 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಇವರ ಇನ್ನಿಂಗ್ಸ್ನಲ್ಲಿ 17 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿದ್ದವು.
ಮೊದಲು ಬ್ಯಾಟಿಂಗ್ ಮಾಡಿದ್ದ ವೆಲ್ಸ್ ಫೈರ್ ತಂಡ 100 ಎಸೆತಗಳಲ್ಲಿ 8 ವಿಕೆಟ್ ಕಳೆದುಕೊಂಡು 130 ರನ್ಗಳಿಸಿತ್ತು. ಹೇಲಿ ಮ್ಯಾಥ್ಯೂಸ್ 30 , ಸಾರಾ ಟೇಲರ್ 18, ಬ್ರಿಯೋನಿ ಸ್ಮಿತ್ 19 ರನ್ಗಳಿಸಿದ್ದರು.