ಕರ್ನಾಟಕ

karnataka

ETV Bharat / sports

2023ರ ಏಷ್ಯಾಕಪ್‌ : ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲ್ಲ- ಜಯ್​ ಶಾ

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಷ್ಯಾ ಕಪ್ 2023 ಅನ್ನು ಆಯೋಜಿಸುತ್ತದೆ. ಮುಂದಿನ ವರ್ಷ ಏಷ್ಯಾಕಪ್ ಕ್ರಿಕೆಟ್ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಮಂಗಳವಾರ ಇದನ್ನು ಖಚಿತಪಡಿಸಿದ್ದಾರೆ.

jay-shah
ಜಯ್​ ಶಾ

By

Published : Oct 18, 2022, 5:08 PM IST

ಮುಂಬೈ: ಮುಂದಿನ ವರ್ಷ ಏಷ್ಯಾಕಪ್‌ಗಾಗಿ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಮತ್ತು ತಟಸ್ಥ ಸ್ಥಳಕ್ಕಾಗಿ ಒತ್ತಾಯಿಸುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಮುನ್ನ 2023ರಲ್ಲಿ 50 ಓವರ್‌ಗಳ ಮಾದರಿ ಏಷ್ಯಾಕಪ್​ ಪಾಕಿಸ್ತಾನದಲ್ಲಿ ನಡೆಯಲಿದೆ. ನಾವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ನಿರ್ಧರಿಸಿದ್ದೇವೆ. ನಾವು ತಟಸ್ಥ ಸ್ಥಳದಲ್ಲಿ ಆಡುತ್ತೇವೆ ಎಂದು ಇಲ್ಲಿ ನಡೆದ ಬಿಸಿಸಿಐಯ ವಾರ್ಷಿಕ ಸಾಮಾನ್ಯ ಸಭೆ (AGM) ನಂತರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಜಯ್​ ಶಾ ಹೇಳಿದರು.

ಈ ಬಾರಿ ಆತಿಥೇಯ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ಕಾರಣ ಏಷ್ಯಾಕಪ್​ನ್ನು ಯುಎಇಯಲ್ಲಿ ನಡೆಯಿತು. 2012-13 ರಿಂದ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡಿಲ್ಲ. ಐಸಿಸಿ ನಡೆಸುವ ಟೂರ್ನಮೆಂಟ್​ಗಳಲ್ಲಿ ಮಾತ್ರ ಮುಖಾಮುಖಿ ಆಗುತ್ತವೆ. ಯುಎಇಯಲ್ಲಿ ನಡೆದ ಏಷ್ಯಾ ಕಪ್​ನಲ್ಲಿ ಭಾರತ ಪಾಕಿಸ್ತಾನ ಮುಖಾಮುಖಿಯಾಗಿತ್ತು. ಟಿ 20 ವಿಶ್ವ ಕಪ್​ನಲ್ಲಿ ಅಕ್ಟೋಬರ್​ 23ರಂದು ಮೆಲ್ಬೋರ್ನ್‌ನಲ್ಲಿ ಆಡಲಿದೆ.

ಇದನ್ನೂ ಓದಿ :T20 World cup: ಚುಟುಕು ಕ್ರಿಕೆಟ್​ ಟೂರ್ನಿಯ ವೇಳಾಪಟ್ಟಿ ಸೇರಿ ಮಹತ್ವದ ಮಾಹಿತಿ

ABOUT THE AUTHOR

...view details