ಕರ್ನಾಟಕ

karnataka

ETV Bharat / sports

ಕ್ಯಾಪ್ಟನ್ ​ ಬುಮ್ರಾ: ಕಪಿಲ್‌ ದೇವ್‌ ಬಳಿಕ ಇದೇ ಮೊದಲ ಬಾರಿ ವೇಗಿಗೆ ಟೆಸ್ಟ್​ ತಂಡದ ಸಾರಥ್ಯ! - ಜಸ್ಪ್ರೀತ್ ಬುಮ್ರಾ ನಾಯಕ

35 ವರ್ಷಗಳ ಬಳಿಕ ಟೀಂ ಇಂಡಿಯಾ ಟೆಸ್ಟ್​ ತಂಡದ ನಾಯಕತ್ವ ಜವಾಬ್ದಾರಿ ವೇಗಿಗೆ ಒಲಿದು ಬಂದಿದೆ. ನಾಳೆಯಿಂದ ಇಂಗ್ಲೆಂಡ್​ ವಿರುದ್ಧ ಆರಂಭಗೊಳ್ಳಲಿರುವ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಜಸ್ಪ್ರೀತ್​ ಬುಮ್ರಾ ತಂಡ ಮುನ್ನಡೆಸುವರು.

Jasprit Bumrah to lead Team India
Jasprit Bumrah to lead Team India

By

Published : Jun 30, 2022, 7:22 PM IST

Updated : Jun 30, 2022, 7:37 PM IST

ಎಡ್ಜ್​ಬಾಸ್ಟನ್​​(ಇಂಗ್ಲೆಂಡ್​):ನಾಳೆಯಿಂದ ಬರ್ಮಿಂಗ್​ಹ್ಯಾಮ್​​ನಲ್ಲಿ ಇಂಗ್ಲೆಂಡ್​ ವಿರುದ್ಧ ಆರಂಭಗೊಳ್ಳಲಿರುವ 5ನೇ ಟೆಸ್ಟ್​​ ಪಂದ್ಯಕ್ಕಾಗಿ ವೇಗದ ಬೌಲರ್​ ಜಸ್ಪ್ರೀತ್​ ಬುಮ್ರಾ ನಾಯಕರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಉಪನಾಯಕನಾಗಿ ವಿಕೆಟ್ ಕೀಪರ್ ಬ್ಯಾಟರ್​ ರಿಷಭ್​ ಪಂತ್​ ಕಾರ್ಯನಿರ್ವಹಿಸುವರು.

ಉಪನಾಯಕನಾಗಿ ರಿಷಭ್ ಪಂತ್​ ಆಯ್ಕೆ

ಟೆಸ್ಟ್‌ ತಂಡದ ಖಾಯಂ ನಾಯಕ ರೋಹಿತ್ ಶರ್ಮಾ ಅವರಿಗೆ ಕೋವಿಡ್​ ದೃಢಪಟ್ಟಿರುವ ಕಾರಣ ಯಾರ್ಕರ್ ಕಿಂಗ್​ ಬುಮ್ರಾಗೆ ತಂಡ ಮುನ್ನಡೆಸುವ ಅಪೂರ್ವ ಅವಕಾಶ ಸಿಕ್ಕಿದೆ. ಈ ಮೂಲಕ ಕಪಿಲ್​ ದೇವ್​ ಬಳಿಕ ಅಂದರೆ 35 ವರ್ಷಗಳ ಬಳಿಕ ಭಾರತದ ಟೆಸ್ಟ್ ತಂಡಕ್ಕೆ ವೇಗಿಯೋರ್ವರು ನಾಯಕರಾಗಿದ್ದಾರೆ.

ಇದನ್ನೂ ಓದಿ:ಭಾರತದ ವಿರುದ್ಧ 5ನೇ ಟೆಸ್ಟ್​​ ಪಂದ್ಯ: ಬಲಿಷ್ಠ ಆಡುವ 11ರ ಬಳಗ ಪ್ರಕಟಿಸಿದ ಇಂಗ್ಲೆಂಡ್‌

ಟೀಂ ಇಂಡಿಯಾ ಹೀಗಿದೆ: ಜಸ್ಪ್ರೀತ್ ಬುಮ್ರಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ಉಪನಾಯಕ) (WK), ಕೆ.ಎಸ್.ಭರತ್ (WK), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ, ಮಯಾಂಕ್ ಅಗರ್ವಾಲ್

28ರ ಹರೆಯದ ಬುಮ್ರಾ ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಉಪನಾಯಕನಾಗಿ ಕಾರ್ಯನಿರ್ವಹಿಸಿದ್ದು, ಇದೀಗ ನಾಯಕತ್ವ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿಯವರೆಗೆ ಬುಮ್ರಾ 29 ಟೆಸ್ಟ್​ ಪಂದ್ಯಗಳನ್ನಾಡಿದ್ದು, ನಾಯಕತ್ವ ಜವಾಬ್ದಾರಿಯ ಅನುಭವ ಹೊಂದಿಲ್ಲ.

ಇಂಗ್ಲೆಂಡ್​ ವಿರುದ್ಧದ ಐದು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಕೊನೆಯ ಪಂದ್ಯದಲ್ಲಿ ಗೆಲುವು ಅಥವಾ ಡ್ರಾ ಸಾಧಿಸಿದಾಗ ಮಾತ್ರ ಸರಣಿ ಭಾರತದ ಪಾಲಾಗಲಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಓವಲ್‌ನಲ್ಲಿ ನಡೆದಿದ್ದ 4ನೇ ಟೆಸ್ಟ್‌ ಪಂದ್ಯದ ವೇಳೆ ತಂಡದ ಕೋಚ್‌ ರವಿ ಶಾಸ್ತ್ರಿ, ಬೌಲಿಂಗ್‌ ಕೋಚ್‌ ಭರತ್‌ ಅರುಣ್‌, ಬ್ಯಾಟಿಂಗ್‌ ಕೋಚ್‌ ಶ್ರೀಧರ್‌, ಫಿಸಿಯೋ ಸೇರಿದಂತೆ ಹಲವರಿಗೆ ಕೋವಿಡ್‌ ತಗುಲಿತ್ತು. ಹೀಗಾಗಿ, 5ನೇ ಪಂದ್ಯ ರದ್ದುಗೊಳಿಸಿ, ಪ್ಲೇಯರ್ಸ್ ಸ್ವದೇಶಕ್ಕೆ​ ವಾಪಸ್​​ ಆಗಿದ್ದರು. ಭಾರತ ವಿರುದ್ಧದ ಕೊನೆಯ ಟೆಸ್ಟ್​ ಪಂದ್ಯಕ್ಕಾಗಿ ಈಗಾಗಲೇ ಇಂಗ್ಲೆಂಡ್ ತಂಡ ಆಡುವ 11ರ ಬಳಗವನ್ನು ಪ್ರಕಟಿಸಿದೆ.

Last Updated : Jun 30, 2022, 7:37 PM IST

ABOUT THE AUTHOR

...view details