ದುಬೈ: ಐಸಿಸಿ ಬುಧವಾರ ಏಕದಿನ, ಟೆಸ್ಟ್ ಮತ್ತು ಟಿ20 ಶ್ರೇಯಾಂಕ ಪ್ರಕಟಿಸಿದ್ದು, ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಏರಿಕೆ ಕಂಡಿದ್ದಾರೆ. ಸ್ಪಿನ್ನರ್ ಅಶ್ವಿನ್ 2ನೇ ಶ್ರೇಯಾಂಕದಲ್ಲಿ ಮುಂದುವರಿದ್ದಾರೆ.
ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ (8) ಮತ್ತು ವಿರಾಟ್ ಕೊಹ್ಲಿ(10) ಅಗ್ರ 10 ರಲ್ಲಿರುವ ಭಾರತೀಯ ಬ್ಯಾಟರ್ಗಳಾಗಿದ್ದಾರೆ. ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್(892), ಸ್ಟೀವ್ ಸ್ಮಿತ್(845), ಕೇನ್ ವಿಲಿಯಮ್ಸನ್(844), ಜೋ ರೂಟ್(843) ಮತ್ತು ಬಾಬರ್ ಅಜಮ್(815) ಟಾಪ್ 5ರಲ್ಲಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್(901), ಅಶ್ವಿನ್(850), ಜಸ್ಪ್ರೀತ್ ಬಮ್ರಾ(830), ಶಾಹೀನ್ ಅಫ್ರಿದಿ(827), ಕಗಿಸೊ ರಬಾಡ(827) ಅಗ್ರ 5ರಲ್ಲಿದ್ದಾರೆ.