ಮುಂಬೈ:ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ವೇಗದ ಬೌಲಿಂಗ್ನ ಪ್ರಮುಖ ಶಕ್ತಿಯಾಗಿದ್ದಾರೆ. ಅವರು ಭಾರತ ತಂಡದಲ್ಲಿ ಮೂರು ಫಾರ್ಮೇಟ್ಗಳಲ್ಲೂ ಅದ್ಭುತವಾದ ಪ್ರದರ್ಶನ ತೋರಿದ್ದಾರೆ. ಅಲ್ಲದೇ 5 ಬಾರಿ ಮುಂಬೈ ಇಂಡಿಯನ್ಸ್ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಿಶ್ವದ ನಂಬರ್ 1 ಬೌಲರ್ಗಳಲ್ಲಿ ಒಬ್ಬರಾಗಿರುವ ಜಸ್ಪ್ರೀತ್ ಬುಮ್ರಾ 2013ರಲ್ಲಿ ತಾವೂ ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್ನಲ್ಲಿ ಹೇಗೆ ಅವಕಾಶ ಪಡೆದುಕೊಂಡೆ ಎನ್ನುವುದನ್ನು ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ ಸಂವಾದದ ವೇಳೆ ಬಹಿರಂಗ ಪಡಿಸಿದ್ದಾರೆ.
ಬೆಂಗಳೂರಿನ್ಲಲಿ 2013ರ ವೇಳೆ ಗ್ರೀನ್ ಫಿಚ್ನಲ್ಲಿ ನಾವು ಅಭ್ಯಾಸ ಮಾಡುತ್ತಿದ್ದೆವು. ಆ ವೇಳೆ, ಬಿಳಿ ಚೆಂಡನ್ನು ಸ್ವಿಂಗ್ ಮಾಡಲು ಹೆಚ್ಚು ಬಳಸಲಾಗುತ್ತಿತ್ತು. ನಾನು ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡುತ್ತಿದ್ದೆ. ಈ ಸಂದರ್ಭದಲ್ಲಿ ನೆಟ್ಸ್ನಲ್ಲಿ ರಿಕಿ ಪಾಂಟಿಂಗ್ಗೆ ದೊಡ್ಡ ಇನ್ಸ್ವಿಂಗರ್ಗಳನ್ನು ಹಾಕುತ್ತಿದ್ದೆ. ಆಗ ಎಲ್ಲರಿಗೂ ನಾನು ಸಮಸ್ಯೆ ತಂದೊಡ್ಡುತ್ತಿದ್ದೆ. ಪಾಂಟಿಂಗ್ರನ್ನು 2-3 ಬಾರಿ ಬೌಲ್ಡ್ ಮಾಡಿದ್ದೆ. ಹಾಗಾಗಿ ಮ್ಯಾನೇಜ್ಮೆಂಟ್ ನನ್ನ ಬಗ್ಗೆ ಚರ್ಚೆ ಮಾಡಿ, ಈ ಹುಡುಗ ಸ್ವಲ್ಪ ವಿಭಿನ್ನವಾಗಿದ್ದಾನೆ, ಅವನನ್ನು ಆಡಿಸೋಣ ಎಂದು ನಿರ್ಧರಿಸಿದರು ಎಂದು ತಮ್ಮ ಆಯ್ಕೆಯ ಸ್ವಾರಸ್ಯವನ್ನು ಹೊರ ಹಾಕಿದ್ದಾರೆ.