ಕೊಲಂಬೊ (ಶ್ರೀಲಂಕಾ): ಭಾನುವಾರ ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್ ಫೋರ್ ಪಂದ್ಯಕ್ಕೆ ಮುನ್ನ ಭಾರತದ ವೇಗದ ಬೌಲಿಂಗ್ ಮುಂಚೂಣಿಯಲ್ಲಿರುವ ಜಸ್ಪ್ರೀತ್ ಬುಮ್ರಾ ಭಾರತ ತಂಡವನ್ನು ಮತ್ತೆ ಸೇರಿಕೊಂಡಿದ್ದಾರೆ. ತನ್ನ ಮಗ ಮೊದಲ ಮಗುವಿನ ಜನನದ ( ಅಂಗದ್) ಕಾರಣ ಪಲ್ಲೆಕೆಲೆಯಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದ ನಂತರ ಭಾರತಕ್ಕೆ ಮರಳಿದ್ದರು. ಇದರಿಂದ ಗುಂಪು ಹಂತದ ನೇಪಾಳ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದರೆ, ಭಾರತ ನೇಪಾಳದ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿ ಸೂಪರ್ ಫೋರ್ಗೆ ಪ್ರವೇಶ ಪಡೆದುಕೊಂಡಿದೆ.
ಬುಮ್ರಾ ಸೂಪರ್ ಫೋರ್ ಹಂತದ ಮೊದಲ ಪಂದ್ಯಕ್ಕೆ ಈಗ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಭಾರತ ಸೆಪ್ಟೆಂಬರ್ 10 ರಂದು ಪಾಕಿಸ್ತಾನದ ವಿರುದ್ಧ ಏಷ್ಯಕಪ್ನ ಸೂಪರ್ ಫೋರ್ ಹಂತದ ಮೊದಲ ಪಂದ್ಯವನ್ನು ಎದುರಿಸಲಿದೆ. ನಂತರ 12 ರಂದು ಶ್ರೀಲಂಕಾ ಮತ್ತು 15 ರಂದು ಬಾಂಗ್ಲಾದೇಶದ ಜೊತೆಗೆ ಹಣಾಹಣಿ ಇರಲಿದೆ. ಈ ಎಲ್ಲ ಪಂದ್ಯಗಳಲ್ಲಿ ಬುಮ್ರಾ ಕಾಣಿಸಿಕೊಳ್ಳಲಿದ್ದಾರೆ. ಇನ್ನೊಬ್ಬ ಪ್ರಮುಖ ವೇಗಿಯಾಗಿ ಶಮಿ ಮತ್ತು ಸಿರಾಜ್ ಅವರನ್ನು ಪಿಚ್ಗೆ ತಕ್ಕಂತೆ ಆಯ್ಕೆ ನಡೆಯಲಿದೆ. ಏಷ್ಯಾಕಪ್ಗೆ ಆಯ್ಕೆ ಆಗಿರುವ ಪ್ರಸಿದ್ಧ ಕೃಷ್ಣಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ.
ಬುಮ್ರಾ ಶುಕ್ರವಾರ ಸಂಜೆ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಅಭ್ಯಾಸ ಸೆಷನ್‌ಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಪ್ರತಿಕೂಲ ಹವಾಮಾನವನ್ನು ನೋಡಿಕೊಂಡು ಆಟಗಾರು ಒಳಾಂಗಣ ಅಥವಾ ಹೊರಾಂಗಣದಲ್ಲಿ ಅಭ್ಯಾಸದಲ್ಲಿ ಪಾಲ್ಗೊಳ್ಳುತ್ತಾರೆ. ಗುರುವಾರ ಮಳೆಯ ಹಿನ್ನಲೆ ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ್ದರು. ಇಂದು ಎಸಿಸಿ ಟ್ವಿಟರ್ನಲ್ಲಿ ಹವಾಮಾನ ತಿಳಿ ಆಗಿರುವುದರ ಚಿತ್ರಣವನ್ನು ಪೋಸ್ಟ್ ಮಾಡಿತ್ತು.