ಭಾರತ ತಂಡದ ಮುಂಚೂಣಿ ವೇಗಿ ಜಸ್ಪ್ರೀತ್ ಬೂಮ್ರಾ ಬೆನ್ನುಮೂಳೆ ಮುರಿತದಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ. ಗಾಯಗೊಂಡು ಹಲವು ತಿಂಗಳಿಂದ ಕ್ರಿಕೆಟ್ನಿಂದ ದೂರವಿದ್ದ ಬೂಮ್ರಾ ಆಸ್ಟ್ರೇಲಿಯಾ ಸರಣಿಗೂ ಮುನ್ನ ತಂಡ ಸೇರಿದ್ದರು. ಆದರೆ, ಒಂದು ಪಂದ್ಯವಾಡಿದ್ದ ಬೂಮ್ರಾ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂಬ ಅನುಮಾನ ಮೂಡಿತ್ತು.
ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಆಡದೇ ಬೆನ್ನುಮೂಳೆ ಮುರಿತಕ್ಕೀಡಾಗಿ ಸರಣಿಯಿಂದ ಹೊರಬಿದ್ದಿದ್ದರು. ಇದೀಗ ವಿಶ್ವಕಪ್ನಿಂದಲೇ ಗೇಟ್ಪಾಸ್ ಪಡೆದಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೆ ಗುರಿಯಾಗಿದೆ.
ಈ ವರ್ಷ ಬೂಮ್ರಾ ಕೇವಲ 15 ಅಂತಾರಾಷ್ಟ್ರೀಯ ಪಂದ್ಯಗಳನ್ನು (ಏಕದಿನ + ಟೆಸ್ಟ್+ ಟಿ20) ಮಾತ್ರ ಆಡಿದ್ದಾರೆ. 2016 ರಿಂದ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ ಎಲ್ಲಾ ಪಂದ್ಯಗಳನ್ನು ಆಡಿದ್ದಾರೆ. ಜಸ್ಪ್ರೀತ್ ಬುಮ್ರಾ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಾಗ ಗಾಯಗೊಳ್ಳುತ್ತಾರೆ. ಐಪಿಎಲ್ ಆಡಲು ಮಾತ್ರ ಫಿಟ್ ಆಗಿರುತ್ತಾರೆ ಎಂದ ಟೀಕೆ ಸಾಮಾಜಿಕ ಮಾಧ್ಯಮದಲ್ಲಿ ಕೇಳಿ ಬಂದಿದೆ.