ಮುಂಬೈ:ಗಾಯಗೊಂಡಿರುವ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ. ಬೆನ್ನುನೋವಿನಿಂದ ಅಕ್ಟೋಬರ್ 2022 ರಿಂದ ಹೊರಗುಳಿದಿರುವ ಸ್ಟಾರ್ ಇಂಡಿಯಾ ವೇಗದ ಬೌಲರ್ ಬುಮ್ರಾ ನ್ಯೂಜಿಲೆಂಡ್‌ನಲ್ಲಿ ತಮ್ಮ ಬೆನ್ನಿನ ಕೆಳಭಾಗದಲ್ಲಿನ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಿಸಿಸಿಐ ನೀಡಿರುವ ಆರೋಗ್ಯ ವರದಿಯಂತೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾದ್ದು, ಅವರು ನೋವಿನಿಂದ ಮುಕ್ತರಾಗಿದ್ದಾರೆ" ಎಂದು ತಿಳಿಸಿದೆ.
ಬುಮ್ರಾ ಕೊನೆಯ ಬಾರಿಗೆ ಸೆಪ್ಟೆಂಬರ್ 2022ರಲ್ಲಿ ಭಾರತಕ್ಕಾಗಿ ಆಡಿದ್ದರು ಮತ್ತು ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಪುರುಷರ ಟಿ 20 ವಿಶ್ವಕಪ್ 2022 ನಂತಹ ದೊಡ್ಡ ಪಂದ್ಯಾವಳಿಗಳಿಂದ ಹೊರಗುಳಿದಿದ್ದರು. ಈ ವರ್ಷದ ಆರಂಭದಲ್ಲಿ ಬೂಮ್ರಾ ತಂಡ ಸೇರುವ ನಿರೀಕ್ಷೆ ಇತ್ತು ಆದರೆ ಸಂಪೂರ್ಣ ಚೇತರಿಸಿಕೊಳ್ಳದ ಹಿನ್ನೆಲೆ ತಂಡದಿಂದ ಹೊರಗುಳಿಯ ಬೇಕಾಯಿತು.
ಶಸ್ತ್ರಚಿಕಿತ್ಸೆಯ ನಂತರ ಆರು ವಾರಗಳ ಪುನರ್ವಸತಿಯನ್ನು ಪ್ರಾರಂಭಿಸಲು ಬುಮ್ರಾ ಅವರಿಗೆ ಸಲಹೆ ನೀಡಲಾಯಿತು. ಅವರು ಏಪ್ರಿಲ್ 14 ರ ಶುಕ್ರವಾರದಂದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನರ್ವಸತಿಯಲ್ಲಿ ತೊಡಗಿದ್ದಾರೆ.
ಭಾರತವು ಈ ವರ್ಷ ಎರಡು ದೊಡ್ಡ ಟ್ರೋಫಿಗಳ ನಿರೀಕ್ಷೆಯಲ್ಲಿದ್ದು ಇಬ್ಬರು ಆಟಗಾರರ ಪುನರಾಗಮದ ಬಗ್ಗೆ ಆರೋಗ್ಯ ವರದಿಯಿಂದ ವಿಶ್ವಾಸ ಹೆಚ್ಚಾಗಿದೆ. ಜೂನ್ 7ರಂದು ಓವೆಲ್‌ನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಅಕ್ಟೋಬರ್-ನವೆಂಬರ್‌ನಲ್ಲಿ ಭಾರತವು ಈ ವರ್ಷ ಆತಿಥ್ಯ ವಹಿಸುತ್ತಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ನಡೆಯಲಿದೆ. ಇದಕ್ಕೂ ಮುನ್ನ ಏಕದಿನ ಮಾದರಿಯಲ್ಲಿ ಏಷ್ಯಾಕಪ್ ಸಹ ನಡೆಯಲಿದೆ.