ಕರ್ನಾಟಕ

karnataka

ETV Bharat / sports

ಜೇಸನ್​ ರಾಯ್​ ವಿಧ್ವಂಸಕ ಬ್ಯಾಟಿಂಗ್... 36 ಎಸೆತಗಳಲ್ಲಿ 10 ಸಿಕ್ಸರ್​ಗಳ​ ಸಹಿತ ಶತಕ - ಇಂಗ್ಲೆಂಡ್ vs ಬಾರ್ಬಡೊಸ್​ ಇಲೆವೆನ್

ಬಾರ್ಬಡೊಸ್ ಅಧ್ಯಕ್ಷರ XI ವಿರುದ್ಧ ನಡೆದ ನಡೆದ ಅಭ್ಯಾಸ ಪಂದ್ಯದಲ್ಲಿ ಜೇಸನ್​ ರಾಯಲ್​​ 47 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಮತ್ತು 9 ಬೌಂಡರಿಗಳ ಸಹಿತ 115 ರನ್​ ಸಿಡಿಸಿ ಪರಾಕ್ರಮ ಮೆರೆದಿದ್ದಾರೆ.

Jason Roy smashes 36 balls century for England
ಜೇಸನ್ ರಾಯ್​ ಶತಕ

By

Published : Jan 20, 2022, 8:09 PM IST

ಬ್ರಿಡ್ಜ್​ಟೌನ್​​: ವೆಸ್ಟ್​ ಇಂಡೀಸ್​ ವಿರುದ್ಧದ ಟಿ20 ಸರಣಿಗೆ ಪೂರ್ವಭಾವಿಯಾಗಿ ನಡೆದ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್​ ಜೇಸನ್​ ರಾಯ್​ 36 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಬಾರ್ಬಡೊಸ್ ಅಧ್ಯಕ್ಷರ XI ವಿರುದ್ಧ ನಡೆದ ನಡೆದ ಅಭ್ಯಾಸ ಪಂದ್ಯದಲ್ಲಿ ಜೇಸನ್​ ರಾಯಲ್​​ 47 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಮತ್ತು 9 ಬೌಂಡರಿಗಳ ಸಹಿತ 115 ರನ್​ ಸಿಡಿಸಿ ಪರಾಕ್ರಮ ಮೆರೆದಿದ್ದಾರೆ. ಇವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 231ರನ್​ಗಳಿಸಿತ್ತು.

ಜೇಸನ್​ ರಾಯ್​ಗೆ ಸಾಥ್​ ನೀಡಿದ ಟಾಮ್ ಬಾಂಟನ್​ 23 ಎಸೆತಗಳಲ್ಲಿ32, ಜೇಮ್ಸ್ ವಿನ್ಸ್​ 29 ಎಸೆತಗಳಲ್ಲಿ 40 ಮಾರ್ಗನ್​ 12 ಎಸೆತಗಳಲ್ಲಿ 22 ರನ್​ಗಳಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

232 ರನ್​ಗಳ ಗುರಿ ಬೆನ್ನತ್ತಿದ ಬಾರ್ಬಡೊಸ್ ಅಧ್ಯಕ್ಷರ ಇಲೆವೆನ್ ಕೇವಲ 137 ರನ್​ಗಳಿಗೆ ಆಲೌಟ್ ಆಗುವ ಮೂಲಕ 94 ರನ್​ಗಳ ಸೋಲು ಕಂಡಿತು. ಶಮರ್​ ಸ್ರಿಂಗರ್​ 36, ಕೆವಿನ್ ಸ್ಟೌಟ್​ 18 , ಶಿಯಾನ್ ಬ್ರಾಥ್​​ವೇಟ್ 22 ರನ್​ಗಳಿಸಿದರು.​

ತೈಮಲ್ ಮಿಲ್ಸ್​ 25ಕ್ಕೆ 3, ಆದಿಲ್ ರಶೀದ್ 9ಕ್ಕೆ2, ಕ್ರಿಸ್ ಜೋರ್ಡನ್​ 22ಕ್ಕೆ 2, ರೀಸ್ ಟಾಪ್ಲೆ, ಸಕಿಬ್ ಮಹ್ಮೂದ್ ಮತ್ತು ಲಿಯಾಮ್ ಡಾಸನ್ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ:ವೆಂಕಟೇಶ್ ಅಯ್ಯರ್​ಗೆ ಬೌಲಿಂಗ್ ನೀಡದ ಕಾರಣ ಬಹಿರಂಗ ಪಡಿಸಿದ ಶಿಖರ್​ ಧವನ್​!

ABOUT THE AUTHOR

...view details