ಕರ್ನಾಟಕ

karnataka

ETV Bharat / sports

ಈ ಕಾರಣಕ್ಕಾಗಿ ಐಪಿಎಲ್​ ಟೂರ್ನಿಯಿಂದ ಹಿಂದೆ ಸರಿದ ಜೇಸನ್​ ರಾಯ್​! - ಗುಜರಾತ್ ಟೈಟನ್ಸ್​

ವರದಿಗಳ ಪ್ರಕಾರ ಜೇಸನ್​ ರಾಯ್​ ಗುಜರಾತ್ ಫ್ರಾಂಚೈಸಿಗೆ ಕಳೆದ ವಾರವೇ ಈ ನಿರ್ಧಾರ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಫ್ರಾಂಚೈಸಿ ಇದುವರೆಗೆ ಅವರ ಬದಲೀ ಆಟಗಾರನನ್ನು ಘೋಷಿಸಿಲ್ಲ. ದಕ್ಷಿಣ ಆಫ್ರಿಕಾ ಮೂಲದ ಇಂಗ್ಲಿಷ್​ ಕ್ರಿಕೆಟಿಗನನ್ನು ಮೆಗಾ ಹರಾಜಿನಲ್ಲಿ ಟೈಟನ್ಸ್​ ಮೂಲಬೆಲೆ 2 ಕೋಟಿ ರೂ.ಗಳಿಗೆ ಖರೀದಿಸಿತ್ತು.

Jason Roy pulls out of IPL citing bubble fatigue
ಜೇಸನ್ ರಾಯ್​ ಐಪಿಎಲ್

By

Published : Mar 1, 2022, 3:08 PM IST

ನವದೆಹಲಿ:ಇಂಗ್ಲೆಂಡ್​​ ಸ್ಫೋಟಕ ಬ್ಯಾಟರ್​ ಜೇಸನ್​ ರಾಯ್​ ಮುಂಬರುವ ಇಂಡಿಯನ್ ಪ್ರೀಮಿಯರ್​ ಲೀಗ್​ನಿಂದ ಹೊರಬಂದಿದ್ದು, ಲೀಗ್ ಆರಂಭಕ್ಕೂ ಮುನ್ನವೇ ಟೈಟನ್ಸ್​ಗೆ ಆಘಾತ ತಂದಿದೆ. ಬಯೋಬಬಲ್​ ಆಯಾಸವನ್ನು ತಪ್ಪಿಸಿಕೊಳ್ಳುವುದಕ್ಕೆ ಈ ನಿರ್ಧಾರ ತೆಗದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

ವರದಿಗಳ ಪ್ರಕಾರ ಜೇಸನ್​ ರಾಯ್​ ಗುಜರಾತ್ ಫ್ರಾಂಚೈಸಿಗೆ ಕಳೆದ ವಾರವೇ ಈ ನಿರ್ಧಾರ ತಿಳಿಸಿದ್ದಾರೆ ಎನ್ನಲಾಗ್ತಿದೆ. ಆದರೆ ಫ್ರಾಂಚೈಸಿ ಇದುವರೆಗೆ ಅವರ ಬದಲೀ ಆಟಗಾರನನ್ನು ಘೋಷಿಸಿಲ್ಲ. ದಕ್ಷಿಣ ಆಫ್ರಿಕಾ ಮೂಲದ ಇಂಗ್ಲಿಷ್​ ಕ್ರಿಕೆಟಿಗನನ್ನು ಮೆಗಾ ಹರಾಜಿನಲ್ಲಿ ಟೈಟನ್ಸ್​ ಮೂಲಬೆಲೆ 2 ಕೋಟಿ ರೂ.ಗಳಿಗೆ ಖರೀದಿಸಿತ್ತು.

ಲೀಗ್​ ಆರಂಭಕ್ಕೆ ಮೂರು ವಾರಗಳಿರುವಾಗ ರಾಯ್​ ಈ ದಿಢೀರ್ ನಿರ್ಧಾರ ತೆಗೆದುಕೊಂಡಿರುವುದು ಗುಜರಾತ್​ ಫ್ರಾಂಚೈಸಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಶುಬ್ಮನ್​ ಗಿಲ್​ ಹೊರತುಪಡಿಸಿದರೆ ರಾಯ್​ ತಂಡದಲ್ಲಿದ್ದ ಏಕೈಕ ಸ್ಪೆಷಲಿಸ್ಟ್ ಓಪನರ್​ ಆಗಿದ್ದರು.

ಇಂಗ್ಲೀಷ್​ ಬ್ಯಾಟರ್​ ಇಂಡಿಯನ್​ ಪ್ರೀಮಿಯರ್​ ಲೀಗ್​ನಿಂದ ಹೊರ ಹೋಗುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2022ರ ಆವೃತ್ತಿಯಲ್ಲೂ ವೈಯಕ್ತಿಕ ಕಾರಣ ನೀಡಿ ಹೊರ ಹೋಗಿದ್ದರು. ಆಗ ಅವರನ್ನು 1.5 ಕೋಟಿ ರೂ. ನೀಡಿ ಡೆಲ್ಲಿ ಕ್ಯಾಪಿಟಲ್ಸ್​ ಖರೀದಿಸಿತ್ತು.

ರಾಯ್ ಕಳೆದ ವಾರ ಮುಗಿದ ಪಾಕಿಸ್ತಾನ ಸೂಪರ್ ಲೀಗ್​ನಲ್ಲೂ ಬಯೋಬಬಲ್​ನಲ್ಲಿ ಆಡಿದ್ದರು. 6 ಪಂದ್ಯಗಳನ್ನಾಡಿದ್ದ ಅವರು 1ಶತಕ ಮತ್ತು 2 ಅರ್ಧಶತಕ ಸೇರಿ 303 ರನ್​ಗಳಿಸಿದ್ದರು.

15ನೇ ಆವೃತ್ತಿಯ ಐಪಿಎಲ್ ಮಾರ್ಚ್​ 26 ರಿಂದ ಆರಂಭವಾಗಲಿದೆ. ಮೇ 29ರಂದು ಫೈನಲ್ ಪಂದ್ಯ ನಡೆಯಲಿದೆ. ಮುಂಬೈನ 3 ಮತ್ತು ಪುಣೆಯ 1 ಸ್ಟೇಡಿಯಂನಲ್ಲಿ ಟೂರ್ನಮೆಂಟ್​ ಜರುಗಲಿದೆ.

ಇದನ್ನೂ ಓದಿ:ಮುಂಬೈ ಇಂಡಿಯನ್ಸ್​ನಲ್ಲಿ​ ಅವಕಾಶ ಸಿಗಲು ಕಾರಣವಾದ ಘಟನೆ ನೆನೆದ ಬುಮ್ರಾ

ABOUT THE AUTHOR

...view details