ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನ ಮೆಗಾ ಹರಾಜು ಹತ್ತಿರ ಬರುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗಳು ನಾಯಕತ್ವ ನಿರ್ವಹಿಸುವ ಆಟಗಾರರನ್ನು ಎದುರು ನೋಡುತ್ತಿವೆ.
ಅದರಲ್ಲೂ ಆರ್ಸಿಬಿ ಮೇಲೆ ಎಲ್ಲರ ಕಣ್ಣಿದೆ. ವಿರಾಟ್ ಕೊಹ್ಲಿ ಸ್ಥಾನಕ್ಕೆ ಯಾರು ಸರಿಯಾದ ಆಯ್ಕೆ ಎಂಬ ಚರ್ಚೆ ಸಾಗುತ್ತಿದೆ. ಭಾರತದ ಮಾಜಿ ನಾಯಕ ಕಳೆದ ಆವೃತ್ತಿಯಲ್ಲಿ ಆರ್ಸಿಬಿ ನಾಯಕತ್ವವನ್ನು ತ್ಯಜಿಸಿದ್ದರು.
ದಶಕದ ಕಾಲ ತಂಡವನ್ನು ಮುನ್ನಡೆಸಿದರೂ ಪ್ರಶಸ್ತಿ ಎತ್ತಿ ಹಿಡಿಯಲು ಸಾಧ್ಯವಾಗದೇ ಕೊನೆಗೆ ನಾಯಕತ್ವವನ್ನ ಬಿಟ್ಟುಕೊಟ್ಟು ಕೇವಲ ಆಟಗಾರನಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ.
ಪ್ರಸ್ತುತ ಆರ್ಸಿಬಿ ಮೂರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ವೆಲ್ ಮತ್ತು ಮೊಹಮ್ಮದ್ ಸಿರಾಜ್ರನ್ನು ಕ್ರಮವಾಗಿ 15 ಕೋಟಿ ರೂ., 11ಕೋಟಿ ರೂ. ಮತ್ತು 7 ಕೋಟಿ ರೂ.ಗಳಿಗೆ ರಿಟೈನ್ ಮಾಡಿಕೊಂಡಿದೆ. ಬಿಬಿಎಲ್ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಮುನ್ನಡೆಸಿದ ಅನುಭವವಿದ್ದು, ಅವರಿಗೆ ಆರ್ಸಿಬಿ ನಾಯಕತ್ವವನ್ನು ನೀಡಬಹುದೆ ಎನ್ನಲಾಗುತ್ತಿದೆ.