ನವದೆಹಲಿ :ಕೈಲ್ ಜೆಮೀಸನ್ ಮುಂದಿನ ದಿನಗಳಲ್ಲಿ ವಿಶ್ವ ಕ್ರಿಕೆಟ್‌ನ ಪ್ರಮುಖ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಭವಿಷ್ಯ
ನುಡಿದಾರೆ. ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕೈಲ್ ಜೆಮೀಸನ್ ತೋರಿದ ಅದ್ಭುತ ಪ್ರದರ್ಶನದ ಬಳಿಕ ಅವರು ಈ ರೀತಿಯಾಗಿ ಅಭಿಪ್ರಾಯಪಟ್ಟಿದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಜೆಮೀಸನ್ 44 ಓವರ್‌ಗಳಲ್ಲಿ 61 ರನ್ ನೀಡಿ 7 ವಿಕೆಟ್ ಪಡೆದಿದ್ದಾರೆ. ಜೊತೆಗೆ 21 ಅಮೂಲ್ಯ ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
"ಕೈಲ್ ಜೆಮೀಸನ್ ಅದ್ಭುತ ಆಲ್‌ರೌಂಡರ್. ಅವರು ವಿಶ್ವ ಕ್ರಿಕೆಟ್‌ನ ಪ್ರಮುಖ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಲಿದ್ದಾರೆ" ಎಂದು ಸಚಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:Mithali Raj ಹೊಸ ದಾಖಲೆ... ತೆಂಡೂಲ್ಕರ್ ಬಳಿಕ ಈ ಸಾಧನೆ ಮಾಡಿದ ವಿಶ್ವದ 2ನೇ ಪ್ಲೇಯರ್!
"ನೀವು ಅವರ ಬೌಲಿಂಗ್ ನೋಡಿದರೆ, ಅವರು ತುಂಬಾ ಭಿನ್ನವಾಗಿದ್ದಾರೆ. ಅವರು ಸೀಮಿಂಗ್ ಎಸೆತಗಳನ್ನು ಬೌಲ್ ಮಾಡಲು ಇಷ್ಟಪಡುತ್ತಾರೆ. ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಮತ್ತು ನೀಲ್ ವ್ಯಾಗ್ನರ್ ಅವರೊಂದಿಗೆ ಹೋಲಿಸಿದರೆ ಜೆಮೀಸನ್ ವಿಭಿನ್ನ ಬೌಲರ್" ಎಂದು ಸಚಿನ್ ಬಣ್ಣಿಸಿದ್ದಾರೆ. ದೊಡ್ಡ ಹೊಡೆತಗಳನ್ನು ಆಡಲು ಜೆಮೀಸನ್ ತನ್ನ ಎತ್ತರವನ್ನು ಬಳಸುವ ರೀತಿಗೂ ಸಚಿನ್ ಮಾರು ಹೋಗಿದಾರೆ.