ಮ್ಯಾಂಚೆಸ್ಟರ್(ಇಂಗ್ಲೆಂಡ್):ಕ್ರಿಕೆಟ್ ಲೋಕದಲ್ಲಿ ಪ್ರತಿದಿನ ಒಂದಿಲ್ಲೊಂದು ಹೊಸ ದಾಖಲೆ ನಿರ್ಮಾಣಗೊಳ್ಳುವುದು, ಬ್ರೇಕ್ ಆಗುವುದು ಕುತೂಹಲದ ಸಂಗತಿಯಾಗುಳಿದಿಲ್ಲ. ಆದರೆ, ಕೆಲ ಪ್ಲೇಯರ್ಸ್ ನಿರ್ಮಿಸುವ ರೆಕಾರ್ಡ್ ಅಷ್ಟೊಂದು ಸುಲಭವಾಗಿ ಮುರಿಯಲು ಆಗುವುದಿಲ್ಲ. ಸದ್ಯ ಅಂಥದ್ದೊಂದು ಸಾಧನೆ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಅವರಿಂದ ನಿರ್ಮಾಣಗೊಂಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ತವರು ನೆಲದಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಈ ರೆಕಾರ್ಡ್ ನಿರ್ಮಾಣಗೊಂಡಿದ್ದು, ಕ್ರಿಕೆಟ್ ಜಗತ್ತಿನಲ್ಲಿ ತವರು ನೆಲದಲ್ಲಿ 100 ಟೆಸ್ಟ್ ಪಂದ್ಯ ಆಡಿರುವ ಮೊದಲ ಆಟಗಾರನಾಗಿ ಆ್ಯಂಡರ್ಸನ್ ಹೊರಹೊಮ್ಮಿದ್ದಾರೆ.
2003ರಲ್ಲಿ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿರುವ ಜೇಮ್ಸ್ ಆ್ಯಂಡರ್ಸನ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದೀರ್ಘಾವಧಿ ಕ್ರಿಕೆಟರ್ ಆಗಿ ಉಳಿದುಕೊಂಡಿದ್ದಾರೆ. ಇಲ್ಲಿಯವರೆಗೆ 147 ಟೆಸ್ಟ್ ಪಂದ್ಯ ಆಡಿರುವ ಅವರು, ಹೆಚ್ಚು ಕ್ರಿಕೆಟ್ ಪಂದ್ಯ ಆಡಿರುವ ಆಟಗಾರ ಸಾಲಿನಲ್ಲೂ ಗುರುತಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ 158 ಟೆಸ್ಟ್, ಜಾಕ್ ಕಾಲಿಸ್ 166 ಟೆಸ್ಟ್ ಪಂದ್ಯ ಆಡಿದ್ದಾರೆ.